Let’s Cross Over

#MonsterEconomy is dying, Let’s Cross Over…!

                                                                                                 – Prasanna

Let’s Cross Over

Monster Economy is dying. But we are unable to accept the fact. Like the children of a dying Grand-old-man, we have put the economy on ventilators; in an expensive hospital, called experts from all over the world, taken suggestions, even when those suggestions are contradictory to each other, and spent huge amounts of, scarce, national and international resource, on the treatment.

We are so completely involved with the dying monster that we don’t even want to go out of the emergency ward and see life as it is being lived. We do not want to notice for example, that even in the few weeks of the Corona Emergency the living world has already started looking livelier. The carbon emission levels have already started to come down and that the atmosphere has started showing signs of recovery. Nor for example do we, see animals (even wild ones) crossing over city streets, deserted and thus safe!

Instead, we want to go quickly back into the death ward, to pump more oxygen on to the dead lungs of the dying man! We are scared! Terribly, terribly, scared! The fact remains that we do not know how to manage without the monster! We do not know how to give up all the comforts that the old system offered! Unlimited travel, unlimited luxury, good looking malls, expensive hotels, connectivity and comfort!

But think! The wild animal crossing the street in a deserted city, whose picture we saw on the social media post, was crossing over and not intending to walk the street. We, on the contrary, have been walking the street, and want to continue to walk the street! We feel scared to crossover! We feel unsure on the natural ground; feel insecure with a hard working life! That’s our dilemma!

Look at it this way! The grand-old-man distributed his wealth unequally. His pet son (10% of the population) got a lion’s share, while the hard working children (90% of the population) had to scramble desperately for food even. The old man never cared for the old woman, meaning the nature! He is like the father in the Dostoevsky novel ‘Brothers Karamazov’. Of course, like in the novel, the monster economy has a few good qualities. For example, being driven by the machine, it looked after the business well. Let’s remember the good qualities, put a nice picture of it on the wall and cross over. In the novel one of the sons of the rascal father is called Alyosha Karamazov. He is a nice human being, almost a saint. We will have to follow his example, whether we like it or not!

Anyway there seems to be no choice. Why should we postpone the inevitable? If we pump more oxygen, the monster may breathe for a couple more years, but each such delay can put the living world to extinction. Let’s do Something.

  • Prasanna

Playwright, Theatre Director and Social Activist, Gram Seva Sangh

ನಗರ ನೀರಿನ ದಾಹ – ಸಮಾವೇಶದ ಒಂದು ಸಂಕ್ಷಿಪ್ತ ವರದಿ

14ನೇ ಜುಲೈ 2019, ಗಾಂಧಿ ಭವನ, ಬೆಂಗಳೂರು
ಆಯೋಜಕರು: ಗ್ರಾಮ ಸೇವಾ ಸಂಘ
‘ಶರಾವತಿ ನದಿ ಉಳಿಸಿ’ ಹೋರಾಟ ಒಕ್ಕೂಟ, ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್,
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಪಶ್ಚಿಮ ಘಟ್ಟ ಜಾಗೃತಿ ವೇದಿಕೆ

ಕರ್ನಾಟಕದ ಬಹುಪಾಲು ಸಂಪತ್ತನ್ನು ಕೇವಲ ಬೆಂಗಳೂರು ಕಬಳಿಸುವುದು ನ್ಯಾಯ ಸಮ್ಮತವಲ್ಲ ಎಂಬ ಸಂದೇಶವನ್ನು ಹೊತ್ತ ಪ್ರದರ್ಶನದಿಂದ (ರಘು ವೊಡೆಯರ್, ಡಿಂಪಲ್ ಶಃ, ಹಾಗೂ ಪರಮೇಶ್ ಜೋಳದ) ಹಾಗೂ ಭೂಮಿ ತಾಯಿ ಬಳಗದ
ಪರಿಸರ ಗೀತೆ ಯಿಂದ ಸಮಾವೇಶ ಪ್ರಾರಂಭವಾಯಿತು.

ಪರಿಸರ ತಜ್ಞ ಹಾಗೂ ಪತ್ರಕರ್ತ ನಾಗೇಶ್ ಹೆಗಡೆ ಅವರು ಅಧಿಕೃತವಾಗಿ ಸಮಾವೇಶವನ್ನು ಉದ್ಘಾಟಿಸಿದರು, ಇಂದಿರಾ ಕೃಷ್ಣಪ್ಪ, ಸಾಹಿತಿ ಹಾಗೂ ಗಾಂಧಿ ಭವನದ ಕಾರ್ಯದರ್ಶಿಗಳು ಅಧ್ಯಕ್ಷತೆ ವಹಿಸಿದ್ದರು, ಹಾಗೂ ರಂಗಕರ್ಮಿ ಪ್ರಸನ್ನ ಹಾಗೂ ನಿವೃತ ಮೇಜರ್ ಜನರಲ್ ಒಂಬತ್ಕೆರೆ ಉದ್ಘಾಟನೆಯಲ್ಲಿ ಉಪಸ್ತಿತರಿದ್ದರು.

ರಂಗಕರ್ಮಿ ಹಾಗೂ ಹೋರಾಟಗಾರ ಪ್ರಸನ್ನ ಅವರು ಸಮಾವೇಶದ ಪ್ರಾಸ್ತಾವಿಕ ನುಡಿಯಲ್ಲಿ, ಕರ್ನಾಟಕದ ನದಿಗಳನ್ನು ಉಳಿಸಲು ಜನ ಒಮ್ಮತದಿಂದ ಒಕ್ಕೊರಲಿನಿಂದ ಜೊತೆಗೂಡಬೇಕು ಎಂದು ಕರೆಕೊಟ್ಟರು. ನಮ್ಮ ಅಭಿವೃದ್ಧಿಯ ಕಲ್ಪನೆ ತಪ್ಪು ಪಟ್ಟಣದ ಜನತೆ ಹಳ್ಳಿಗಳ ಅಭಿವೃದ್ಧಿಯ ಬಗ್ಗೆ ಕಾಳಜಿವಹಿಸಬೇಕು ಎಂದು ವಿವರಿಸಿದರು. ಜನ ಪಟ್ಟಣಗಳಿಂದ  ಹಳ್ಳಿಗಳಿಗೆ ವಲಸೆ ಹೋಗುವ ಪ್ರಕ್ರಿಯೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಜನರಲ್ಲಿ ಕಳೆದುಹೋಗಿರುವ ಆತ್ಮಗೌರವವನ್ನು ಮತ್ತೆ ಬೆಳೆಸಬೇಕು. ಗ್ರಾಮಸ್ವರಾಜ್ಯದ ಅಭಿವೃದ್ಧಿಯ ಬುನಾದಿ ಎಂದರು. ನಂತರ ವಿವಿದ ಸಂವಾದ ಗೋಷ್ಠಿಗಳಲ್ಲಿ ಈ ವಿಷಯದ ಸುತ್ತ ತಜ್ಞರು, ಚಿಂತಕರು, ಹೋರಾಟಗಾರರು
ಹಾಗೂ ನಗರದ ಜನರಿಂದ ಚರ್ಚಿಸಲಾಯಿತು.

ಸಮಾವೇಶದಲ್ಲಿ ಮಂಡಿಸಿದ ಹಾಗೂ ಸರ್ವಾನುಮತದಿಂದ ಅಂಗಿಕರಿಸಿದ ನಿರ್ಣಯಗಳು,
೧.ಗ್ರಾಮೀಣ ಭಾರತವನ್ನು ಬೆಂಗಳೂರಿಗಿಂತ ಉತ್ತಮ ಪಡಿಸುವ ಮೂಲಕ ತಿರುಗುವಲಸೆ
೨. ಬೆಂಗಳೂರು ನುಂಗುತ್ತಿರುವ ವಿಪರೀತ ಸಂಪನ್ಮೂಲಗಳ ಬಗ್ಗೆ ಶ್ವೇತ ಪತ್ರ
೩. ನದಿಗಳು ತಮ್ಮ ನೈಸರ್ಗಿಕ ಮಾರ್ಗದಲ್ಲಿ ಚಲಿಸಲಿ
೪.ಮಾಲೀನ್ಯ ಕಾರ್ಖಾನೆಗಳನ್ನು ತಡೆಗಟ್ಟಿ
೫. ಬೆಂಗಳೂರಿನ ಕೆರೆ ಹಾಗು ರಾಜಕಾಲುವೆಗಳನ್ನು ಪುನರುಜ್ಜೀವನ ಮಾಡಿ
೬. ಎಲ್ಲರನ್ನು ಸೇರಿಸಿ , ಸಾರ್ವಜನಿಕ ಚರ್ಚೆಯ ಮೂಲಕ ಸುಸ್ತಿರ ನೀರಿನ‌‌ನೀತಿ‌ತೆಗೆದು ಕೊಂಡು ಬನ್ನಿ

ಬೆಂಗಳೂರು ತಣಿಯದ ದಾಹದ ರಾಕ್ಷಸಿ ನಗರವೇ? ಎಂಬ ವಿಷಯದ ಸಂವಾದವನ್ನು ಲಿಯೋ ಎಫ್ ಸಲ್ದಾನಾ, ಪರಿಸರ ತಜ್ಞ ಹಾಗೂ ಹೋರಾಟಗಾರರು ನಡೆಸಿಕೊಟ್ಟರು,ಈ ವಿಷಯದ ಮೇಲೆ ಸಂಶೋದಕಿ ಭಾರ್ಗವಿ, ವಿಜ್ಞಾನಿ ಏ ಆರ್ ಶಿವಕುಮಾರ್, ಪರಿಸರ ಹೋರಾಟಗಾರ ಜನಾರ್ಧನ್ ಕೆಸರಗದ್ದೆ ತಮ್ಮ ಪ್ರತಿಕ್ರಿಯಿಸಿದರು.

ಭಾರ್ಗವಿ ಎಸ್ ರಾವ್ ಮಾತನಾಡಿ ಸರ್ಕಾರದ ಹಲವಾರು ಕಾರ್ಯಕ್ರಮಗಳು ಬಡವರಿಂದ ಭೂಮಿಯನ್ನು ಪಡೆದು ಅವರ ಬದುಕಿಗೆ ತೊಂದರೆ ಉಂಟು ಮಾಡಿದೆ ಎಂದರು. ಗ್ರಾಮೀಣ ಜೀವನೋಪಾಯಕ್ಕೆ ಬೇಕಾದ ಕಾರ್ಯಕ್ರಮಗಳು ನಡೆಯುವುದು
ಅತ್ಯಗತ್ಯ ಎಂದರು.
ಎ ಆರ್ ಶಿವಕುಮಾರ್ ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸುವುದು ಒಂದೇ ಸುಸ್ಥಿರ ಅಭಿವೃದ್ಧಿಯ ಮೂಲಮಂತ್ರ ಎಂದರು. ವಿಕೇಂದ್ರೀಕರಣ ಮತ್ತು ಸ್ಥಳೀಯ ಉದ್ಯೋಗ ಕೆಲಸಗಳು ಹೆಚ್ಚು ಅರ್ಥಪೂರ್ಣ ಎಂದರು. ಪ್ರತಿಯೊಬ್ಬ ವ್ಯಕ್ತಿ, ಕುಟುಂಬವು ಅನುಸರಿಸಬೇಕಾದ ಸುಸ್ಥಿರ ಅಭ್ಯಾಸಗಳನ್ನು ವಿವರಿಸಿದರು, ಮುಖ್ಯವಾಗಿ ಮಳೆನೀರಿನ ಕೊಯ್ಲಿನ ಬಗ್ಗೆ.
ಜನಾರ್ಧನ ಕೆಸರಗದ್ದೆ ಸಮಸ್ಯೆ ಬರಿ ನೀರಿನದಲ್ಲ ಅದು ಹೇಗೆ ನಮ್ಮ ಆಹಾರ ಪದ್ಧತಿ, ನಾವು ಅನುಸರಿಸುತ್ತಿರುವ ಕೃಷಿ ಪದ್ಧತಿ, ಜನರು ಜೀವಿಸುವ ರೀತಿಗಳು ಕೂಡ ನೀರಿನ ಸಮಸ್ಯೆಯಲ್ಲಿ ಗಣನೀಯವಾದ ಅಂಶ. ನೀರಿನ ಸಮಸ್ಯೆಯನ್ನು, ಸಮಗ್ರ ದೃಷ್ಟಿಕೋನದಲ್ಲಿ ನೋಡಬೇಕು ಎಂದರು. ಅವಿವೇಕದ ಬೆಳೆಗಳು ಮತ್ತು ನಮ್ಮ ತತೆಯಲ್ಲಿನ ಆಹಾರ ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಿದರು.

ಎರಡನೇಯ ಸಂವಾದ ಗೋಷ್ಠಿ “ನಗರದ ದಾಹ ಮತ್ತು ನದಿಗಳ ಅಳಿವು” ಯನ್ನು ಸಿ. ಯತಿರಾಜು, ಪರಿಸರ ತಜ್ಞ ಹಾಗೂ ಹೋರಾಟಗಾರರು ನಡೆಸಿಕೊಟ್ಟರು. ಈ ವಿಷಯದ ಮೇಲೆ ಡಾ. ಎಸ್. ಜಿ. ಒಂಬತ್ಕೆರೆ, ನಿವೃತ್ತ ಮೇಜರ್ ಜನರಲ್ ಹಾಗೂ ಹೋರಾಟಗಾರರು, ಶುಭ ರಾಮಚಂದ್ರನ್, ಜಲ ತಜ್ಞೆ, ಶ್ರೀಹರ್ಷ ಹೆಗಡೆ, ಪರಿಸರ ಹೋರಾಟಗಾರ ಹಾಗೂ ಪತ್ರಕರ್ತ, ಕೆ ಏನ್ ಸೋಮಶೇಕರ್, ಪರಿಸರ ಹೋರಾಟಗಾರರು ಪ್ರತಿಕ್ರಿಯಿಸಿದರು.

ಡಾ. ಎಸ್. ಜಿ. ಒಂಬತ್ಕೆರೆ ಮಾತನಾಡಿ, ಸದ್ಯದ ವಾತಾವರಣದ ಪರಿಸರದ ತುರ್ತು ಬಂಡವಾಳ ಶಾಹಿ ವ್ಯವಸ್ಥೆಯ ಸೃಷ್ಟಿ ಎಂದರು. ಸರ್ಕಾರದ ನೀತಿ ನಿಯಮಗಳು ಈ ಎಲ್ಲಾ ಸಮಸ್ಯೆಯ ಅಡಿಯಲ್ಲಿ ಯೋಚಿಸಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತೆರೆದಿರುವುದು ಮುಖ್ಯವಾದ ಸಮಸ್ಯೆ. ಜನ ತಮ್ಮ ಶಕ್ತಿಯನ್ನು ವ್ಯವಸ್ಥೆಯಲ್ಲಿ ಅರಿತು, ಎಚ್ಚೆತ್ತು ಹೆಚ್ಚೆಚ್ಚು ಪರಿಸರ ಸ್ನೇಹಿ ಅಭಿವೃದ್ಧಿಯ ಕಾರ್ಯಕ್ರಮವನ್ನು ಮುಂದೊತ್ತ ಬೇಕು ಹಾಗೂ ಭಾಗವಹಿಸಬೇಕು. ಇಂದಿನ ಸಮಸ್ಯೆ ಅಗತ್ಯಗಳಿಂದ ರೂಪಿತವಾದದ್ದು ಎಂಬುದು ಸುಳ್ಳು, ಅದು ಬಂಡವಾಳಶಾಹಿಯ ದಾಹದ ಸೃಷ್ಟಿ, ಕೊಳ್ಳುಬಾಕರನ್ನಾಗಿ ನಮ್ಮನ್ನು ಬಂಡವಾಳಶಾಹಿ ತರಬೇತುಗೊಳಿಸಿದೆ.

ಶುಭ ರಾಮಚಂದ್ರನ್, ಬೆಂಗಳೂರು ನಿಜವಾಗಿಯೂ ರಾಕ್ಷಸಿಯಾಗಿದ್ದು, ಆದರೆ ಇತ್ತೀಚೆಗೆ ಜನ ಅದರಿಂದ ಹೊರಬರುತ್ತಿರುವ ಸೂಚನೆಯನ್ನು ತೋರುತ್ತಿದೆ. ನೀರಿನ ಪಾಲನ್ನು ತಡೆಯುವುದು, ಅಂತರ್ಜಲದ ಮಟ್ಟವನ್ನು ಹೆಚ್ಚಿಸುವುದು ಹಾಗೂ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ತಮ್ಮ ಸಂಸ್ಥೆ ಬಯೋಮ್ ಹಾಗೂ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡರು.


ಶ್ರೀಹರ್ಷ ಹೆಗಡೆ, ಮಲೆನಾಡನ್ನು ಬೆಂಗಳೂರಿನ ಅಭಿವೃದ್ಧಿಗಾಗಿ ಅತಿಯಾಗಿ ಉಪಯೋಗಿಸುತ್ತಿದ್ದೇವೆ, ಇದು ಇಡೀ ಪರಿಸರಕ್ಕೆ ಹಾನಿಯನ್ನು ತಂದಿದೆ. ಇದು ಮುಖ್ಯವಾಗಿ ಮಲೆನಾಡಿಗರನ್ನು ಬೇಸರಗೊಳಿಸಿದೆ, ಏಕೆಂದರೆ ಇದು ಅವರ
ಜೀವನೋಪಾಯದ ಪ್ರಶ್ನೆ, ಅದನ್ನು ಕಳೆದು ಕೊಂಡರೆ ಬೆಂಗಳೂರು ಮತ್ತಷ್ಟು ರಾಕ್ಷಸಿಯಾಗಲಿದೆ.
ಎತ್ತಿನಹೊಳೆ ಯೋಜನೆಯ ವಿರುದ್ದ ಹೊರಾಟಮಾಡುತ್ತಿರುವ ಕೆ ಏನ್ ಸೋಮಶೇಕರ್ ಮಾತನಾಡಿ ನಾವು ನೀರಾವರಿ ಯೋಜನೆಗಳಿಗೆ ಪ್ರತೀವರ್ಷ ಹೇಗೆ ಬಜೆಟ್ ನಲ್ಲಿ ಹೆಚ್ಚು ಹಣದ ಮೀಸಳುಮಾದಲಾಗುತ್ತಿದೆಯೇ ಹೊರತು ಅತ್ತ ಅಣೆಕಟ್ಟುಗಳು ಹುಳು ತುಂಬಿ ಅದರ ಸಾಮರ್ಥ್ಯ ಕಳೆದು ಕೊಲ್ಲುತ್ತಿವೆ ಇತ್ತ ರೈತರ ಸ್ಥಿತಿ ಇನ್ನು ಶೋಚನೀಯ ಸ್ಥಿತಿಗೆ
ತಲುಪಿದೆ, ಗ್ರಾಮೀಣ ಬಡವರ ಗುಳೆ ಇನ್ನು ಹೆಚ್ಚಾಗಿದೆ. ನದಿಗಳ ತಿರುವು ಹಾಗೂ ಅಣೆಕಟ್ಟಿನಿಂದ ತಡೆಯುವುದು ಕೇವಲ ರಾಜ್ಯಗಳ ನಡುವಿನ ದ್ವೇಷವಾಗಿಲ್ಲ ಇಂದು ಹಳ್ಳಿ ಹಳ್ಳಿಗಳ ನಡುವೆಗೆ ಬಂದು ತಲುಪಿದೆ, ಮನುಷ್ಯ ಮನುಷ್ಯರಲ್ಲಿ ದ್ವೇಷವನ್ನು ಸೃಷ್ಟಿಸುತ್ತಿದೆ ಎಂದರು.

ಕೊನೆಯ ಸಂವಾದ ಗೋಷ್ಠಿ “ನಾಳಿನ ಬೆಂಗಳೂರಿನ ಸ್ವರೂಪ” ವನ್ನು ಸಂಕೇತ್ ಕುಮಾರ್, ರಚನಾತ್ಮಕ ಕಾರ್ಯಕರ್ತರು ನಡೆಸಿಕೊಟ್ಟರು, ಸಹದೇವ್, ಸಂಚಾಲಕರು,  ಪಶ್ಚಿಮ ಗಟ್ಟ ಜಾಗೃತಿ ವೇದಿಕೆ, ಹರ್ಷಕುಮಾರ್ ಕುಗ್ವೆ, ಸಂಚಾಲಕರು, ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ಹಾಗೂ ಪತ್ರಕರ್ತ, ಆನಂದ್ ಮಲ್ಲಿಗವಾಡ್, ಕೆರೆ ಕಾರ್ಯಕರ್ತ (ಲೇಕ್ ಮ್ಯಾನ್), ಜಾನ್ಹವಿ ಪೈ, ಪರಿಸರ ತಜ್ಞೆ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದರು.

ಸಹದೇವ್ ಮಾತನಾಡಿ ಪಶ್ಚಿಮ ಘಟ್ಟಗಳನ್ನು ಪ್ರತಿ ಸರ್ಕಾರವು, ಹಿಂದಿನ ಹಲವು ಯೋಜನೆಗಳಿಂದ, ಲಿಂಗನಮಕ್ಕಿಯ ಜಲವಿಧ್ಯುತ್ ಉತ್ಪಾದನೆಯಿಂದ ಪ್ರಾರಂಭವಾಗಿ ಹೇಗೆ ಹಾಳುಮಾಡುತ್ತಾ ಬಂದಿದೆ ಎಂಬುದನ್ನು ತಿಳಿಸಿ ಹೇಳಿದರು. ಘಟ್ಟದಲ್ಲಿ ವಾಸಿಯಾಗಿರುವ ಜನ ಮುಗ್ಧರು ಮತ್ತು ಪರಿಸರ ಸ್ನೇಹಿ ಜೀವನ ನಡೆಸುತ್ತಿರುವವರು, ಅವರನ್ನು ಸಂರಕ್ಷಣೆ ಹಾಗೂ ನಗರದ ದಾಹ ಎಂಬ ಎರಡು ಅಲಗಿನಿಂದ ಸರ್ಕಾರಗಳು ತಿವಿಯುತ್ತಿದ್ದು, ಅದನ್ನು ತಪ್ಪಿಸುವುದು ನಮ್ಮೆಲ್ಲರ ಕರ್ತವ್ಯ. ಬೆಂಗಳೂರಿನ ಮೇಲೆ ಖರ್ಚಾಗುವ ಬಜೆಟ್ನಲ್ಲಿ ಶೇಕಡ ಎರಡು ರಷ್ಟನ್ನು ಪಶ್ಚಿಮಘಟ್ಟ ಹಾಗೂ ರಾಜ್ಯದ ಇತರೆ
ಭಾಗದ ಪರಿಸರಸ್ನೇಹಿ ಜೀವನೋಪಾಯಗಳ ಮೇಲೆ ಹೂಡಬೇಕಿದೆ.

ಹರ್ಷಕುಮಾರ್ ಕುಗ್ವೆ ಮಾತನಾಡಿ ಈ ಭಾರಿ ಪಶ್ಚಿಮ ಘಟ್ಟದ ಜನ ಬಹಳ ಗಟ್ಟಿ ಮನಸ್ಸು ಮಾಡಿ ಅನ್ಯಾಯವನ್ನು ಖಂಡಿಸಿ ಶರಾವತಿ ನದಿ ನನ್ನು ಬೆಂಗಳೂರಿಗೆ ತಿರುಗಿ ಸುವುದನ್ನು ಆಗಲು ಕೊಡುವುದಿಲ್ಲ ಎಂದು ರಾಜ್ಯದಲ್ಲಿ ತೋರಿಸಿಕೊಟ್ಟಿದ್ದಾರೆ. ಶರಾವತಿ ಪಾತ್ರದ ಜನಕ್ಕೆ ಅದನ್ನು ಕುಡಿಯಲು ಒದಗಿಸುವುದಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ
ಆದರೆ ಬಹುದೂರದ ರಾಜಧಾನಿ ಬೆಂಗಳೂರಿನ ದಾಹಕ್ಕೆ ಯೋಜನೆಯನ್ನು ರೂಪಿಸಿದ್ದಾರೆ ನಮ್ಮ ರಾಜಕಾರಣಿಗಳು. ನಾಲೆಜ್ ಕಮಿಷನ್ ಕರ್ನಾಟಕ ಸರ್ಕಾರದ ಮುಂದಿಟ್ಟಿರುವ ‘ರಾಜ್ಯದ ನೀರಿನ ನೀತಿ’ ಯನ್ನು ಸರ್ಕಾರ ಅಂಗೀಕರಿಸಿ ಮಾಡಬೇಕಿದೆ. ಬೆಂಗಳೂರಿನ ಬೆಳವಣಿಗೆಯನ್ನು ಇನ್ನು ನಿಲ್ಲಿಸಿ ಇತರೆ ಭಾಗದಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಹಿಂದೆ
ಚಿರಂಜೀವಿಸಿಂಗ್ ಅವರು ನೀಡಿರುವ ವರದಿಯನ್ನು ಸರ್ಕಾರಕ್ಕೆ ನೆನಪಿಸಲು ಇಚ್ಚಿಸಿದರು.

ಆನಂದ್ ಮಲ್ಲಿಗವಾಡ್ ದೇಶಗಳ ರಾಜ್ಯಗಳ ನಡುವೆ ನಡೆಯುತ್ತಿದ್ದ ನೀರಿನ ಕಲಹ ಈಗ ಜಿಲ್ಲೆಗಳ ನಡುವೆಗೆ ತಲುಪಿದೆ ಎಂದರು. ಇನ್ನೇನು ನೆರೆಹೊರೆಯವರು ನೀರಿಗಾಗಿ ಕಾದಾಡಬೇಕಾಗಿದೆ. ಈ ತುರ್ತು ಪರಿಸ್ಥಿತಿಯಲ್ಲಿ ಜನರೇ ತಕ್ಕ ಪರಿಹಾರ
ವನ್ನು ತಮ್ಮ ರಚನಾತ್ಮಕ ಕೆಲಸಗಳಿಂದ ಕಂಡುಕೊಳ್ಳಲು ಸಾಧ್ಯ ಎಂದರು.
ಜಾನವಿ ಪೈ  ಜನಸಮೂಹಗಳು ಒಟ್ಟಾಗಿ ಈ ನಿಟ್ಟಿನಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕು ವೈಯಕ್ತಿಕವಾಗಿ ವ್ಯಕ್ತಿಗಳ ಜೀವನದಲ್ಲೂ ಸುಸ್ಥಿರ ಬದಲಾವಣೆಯನ್ನು ನಾವು ಚಿಂತಿಸಬೇಕು ಎಂದರು. ಇದು ಕೇವಲ ನೀರಿಗೆ ಬಂದಿರುವ ತುರ್ತು ಪರಿಸ್ಥಿತಿಯಲ್ಲ, ಇದು ವಾತಾವರಣದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಯ ಒಂದು ಭಾಗ.

ಪರಿಸರ ತಜ್ಞ ಹಾಗೂ ಪತ್ರಕರ್ತರು, ನಾಗೇಶ್ ಹೆಗಡೆ ಯವರು ಸಮಾವೇಶದಲ್ಲಿ ಮಾತನಾಡಿ, ಜಾಗತಿಕವಾಗಿ ಪರಿಸರ ತುರ್ತುಸ್ಥಿತಿ ಯನ್ನು ಗೊಷಿಸಲಾಗುತ್ತಿದೆ ಆದರೆ ನಮ್ಮ ಮಾಧ್ಯಮಗಳು ಅವನ್ನು ನಮಗೆ ಮುತ್ತಿಸುತ್ತಿಲ್ಲ ಅದರ ಬದು ಕೇವಲ ಬಂಡವಾಳ ಶಾಹಿ ಜಾಹಿರತನ್ನೇ ಸುದ್ದಿಯೆಂದು ಬಿಮ್ಬಿಸುವುದರಲ್ಲಿ ತಲೀನರಾಗಿದ್ದಾರೆ. ನಮೀಬಿಯದ ರಾಜಧಾನಿ, ಇತೀಚೆಗೆ ಪ್ಯಾರಿಸ್ ಸೇರಿದಂತೆ ಹದಿನಾರಕ್ಕೂ ಹೆಚ್ಚು ರಾಷ್ಟ್ರಗಳು ಪರಿಸರ ತುರ್ತುಪರಿಸ್ಥಿತಿಯನ್ನು ಘೊಷಿಸಿವೆ ಆದರೆ ಅದರ ಸುದ್ದಿ ಹಲವರಿಗೆ ತಲುಪಿಯೇ ಇಲ್ಲ.
ಇದು ಜಾಗತೀಕ ಹವಾಮಾನ ವೈಪರಿತ್ಯ ತುರ್ತುಪರಿಸ್ಥಿತಿ ಅಲ್ಲ, ಬಂಡವಾಳಶಾಹಿಯ ತುರ್ತು. ಬಂಡವಾಳಶಾಹಿ ಶಕ್ತಿ ನಮ್ಮ ರಾಜಕಾರಣಿಗಳನ್ನ ಆಡಿಸುತ್ತಿದ್ದಾರಲ್ಲದೆ, ನಮ್ಮ ಬೇಕು ಬೇಡುಗಳನ್ನು ಅವರೆ ಹೇಳುತ್ತಿದ್ದಾರೆ. ನಾವು ಎಷ್ಟು ಬಟ್ಟೆ ಚಪ್ಪಲಿ ಕೊಳ್ಳ
ಬೇಕು ಎನ್ನುವುದನ್ನು ನಮಗೇ ಹೇಳುವುದರಿಂದ, ನಮ್ಮನ್ನು ಅವರ ಅಡಿಆಳಾಗಿ ಮಾಡಿ ಕೊಂಡು, ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವಹಾಗೆ ಮಾಡಿ, ನಮ್ಮ ಪರವಾಗಿ ಅವರೇ ಮಾತನಾಡುತ್ತಿದ್ದಾರೆ. ಒಂದು ಉದಾ: ಗೋವಾ ಏಕೆ ನಮಗೆ ಮಹದಾಯಿ
ನದಿ ನೀರನ್ನು ಬಳಸುವ ಯೋಗ್ಯತೆ ಇಲ್ಲ ಎಂದು ಹೇಳುತ್ತಾರೆಂದರೆ, ನಮ್ಮ ಧಾರವಾಡ ಬಳಿಯ ತಂಪು ಪೇಯದ ಕಾರ್ಖಾನೆಗೆ, 16 ಸಾವಿರ ಕುಟುಂಬದ ಅಗತ್ಯ ಪೂರೈಸುವ ನೀರನ್ನು ಕೊಟ್ಟು ವಿಷಗೊಳಿಸಿ ಹೊರಹಾಕುತ್ತಿದ್ದೀರಿ, ನಿಮಗೆ ನೀರಿನ ಅಗತ್ಯ ಇಲ್ಲ ಎಂದರು. ನಮ್ಮ ಬಂಡವಾಳಶಾಹಿಗಳು ನೀರನ್ನು ಕುಡಿಯುತ್ತಿದ್ದಾರೆ, ನಾವಲ್ಲ. ನಮ್ಮ ಕಾಂಕ್ರೀಟ್ ರಸ್ತೆ ಕಟ್ಟಡಗಳನ್ನು ನಿರ್ಧರಿಸುತ್ತಿದ್ದಾರೆ, ಇದಕ್ಕೆ ಸುತ್ತಲ ಐದು ಜಿಲ್ಲೆಯ ನದಿಗಳು ಬತ್ತಿವೆ. ನಾವು ಹಾಗೂ ಮಾಧ್ಯಮಗಳು ಕೇವಲ ಜಾಹಿರಾತಿನಲ್ಲಿ ಮುಳುಗಿದ್ದೇವೆ. ಎಲ್ಲಿಯವರೆಗೂ ನಾವು ನಮ್ಮ ಬೇಕು ಬೇಡ ಗಳನ್ನು ನಿರ್ಧರಿಸುವುದಿಲ್ಲವೋ, ನಮ್ಮ ಊಟ, ಬಟ್ಟೆ, ವಸತಿಗಳನ್ನು ನಾವೇ ನಿರ್ಧರಿಸುವನ್ತಾದಾಗಿ, ಅದನ್ನು ನಮ್ಮ ಜನಪ್ರತಿನಿದಿಗಳಿಗೆ ಹೇಳುವಂತಾಗುವುದಿಲ್ಲವೋ ಅಲ್ಲಿಯವರೆವಿಗೂ, ಈ ಪರಿಸರದ ತುರ್ತು ಅದಕ್ಕೆ ಕಾರಣವಾದ ಬಂಡವಾಳಶಾಹಿ ಶಕ್ತಿಯಿಂದ ಈ ನಗರಕ್ಕೆ, ರಾಜ್ಯಕ್ಕೆ ಉಳಿಗಾಲವಿಲ್ಲ.

ಇಂದಿರಾ ಕೃಷ್ಣಪ್ಪ, ಸಾಹಿತಿ ಹಾಗೂ ಗೌರವ ಕಾರ್ಯದರ್ಶಿಗಳು ಗಾಂಧಿ ಭವನ: ಅಧ್ಯಕ್ಷತೆ ವಹಿಸಿದ ಇಂದಿರಾ ರವರು ಮಾತನಾಡಿ, ಇಂದು ನಾವೆಲ್ಲರೂ ನಮ್ಮ ವಯಕ್ತಿಕ ಸ್ವಹಿತಾಸಕ್ತಿಯ ಗಡಿದಾಟಿ ಸಮಾಜದ ರಚನಾತ್ಮಕ ಕೆಲಸದಲ್ಲಿ ತೊಡಗಬೇಕಾಗಿದೆ. ಕೇವಲ ಸಾಂಕೇತಿಕವಾಗಿ ಅಲ್ಲಾ, ಏಕೆಂದರೆ ಈಗ ಬಂದು ಒಂದಗಿರಿವುದು ಪರಿಸದ ತುರ್ತು ಪರಿಸ್ಥಿತಿ ಯಾಗಿದೆ. ರಚನಾತ್ಮಕ ಚಳುವಳಿಗೆ ಈ ಸಮಾವೇಶ ನಾಂದಿಯಾಗಲಿ ಎಂದು ಕರೆಕೊಟ್ಟರು.

ಕಾರ್ಯಕ್ರಮದ ಬಗ್ಗೆ ಮಾದ್ಯಮಗಳು ವರದಿಮಾಡಿದ ಲಿಂಕ್ ಗಳು ಕೆಳಗಿನಂತಿವೆ,

  1. ಬೆಂಗಳೂರಿಗೆ ಶರಾವತಿ ನೀರು ಹರಿಸುವ ಪ್ರಸ್ತಾವ: ನೀರು ಹೀರುವ ಬಂಡವಾಳಶಾಹಿ ವ್ಯವಸ್ಥೆ – Prajavani. (2019, July 15).
  2. Environmentalists highlight impact of a ‘thirsting, monstrous’ city. – The Hindu. https://www.thehindu.com/news/cities/bangalore/environmentalists-highlight-impact-of-a-thirsting-monstrous-city/article28428905.ece
  3.  Bursting at the seams, B’luru can’t take more: Experts. -Deccan Herald: https://www.deccanherald.com/city/bursting-at-the-seams-bluru-cant-take-more-experts-747119.html
  4. Bengaluru’s thirst emptying rivers in state: Prasanna a Theatre activist. – Deccan Chronicle: https://www.deccanchronicle.com/nation/current-affairs/140719/bengalurus-thirst-emptying-rivers-in-state.html
  5. ‘Bengaluru must save rivers of Karnataka’- Bangalore Mirror: https://bangaloremirror.indiatimes.com/bangalore/others/bengaluru-must-save-rivers-of-karnataka/articleshow/70219758.cms
  6. Vijaya karnataka