17-11-21 | Gram Seva Sangh Previous Months Updates & A Request

Dear Friends,

Here is the September and October 2021 updates of Gram Seva Sangh activities.

  • Pavitravastra  Abhiyan: On September and October 2021,  Charaka  Co-op society and Desi Trust ran a campaign called Pavitravastra  Abhiyana in different districts on Karnataka. Gram Seva Sangh collaborated with the campaign by fetching few supports like, Social Media Handling, hosting Abhiyana at Ragi Kana, Mobilizing volunteers, contributed Rs. 5000/- to another collaborated weavers organization “All India Handloom Weavers Federation” for the expenses of month long exhibition part of the campaign.

The first phase of this campaign ended at Bengaluru Chitrakala Parishath five days exhibition from 6th to 10 October. Exhibition had very good sales of handmade products and also bought awareness of handmade products importance and current dire situation of rural livelihoods.

  • Reopening of Ragi Kana Santhe: On Oct 2nd our bengaluru volunteers regular activity “Ragi Kana” which was closed due to Covid reopened with two days Santhe. Ragi Kana acitivity is a collaboration of Gram Seva Sangh and Hulkul Muniswamappa and Munivenkatamma Charitable Trust started in March 2017.

We had a grand reopening with a cause to support the handmade artisans affected by economic crisis due to covid. We are looking for a fulltime volunteer for Ragi Kana to strengthen its existing systems and take such activities to other corners of the city and to different cities. Please do refer if you come across such passionate people to work with us.

  • Spinning Activity: On Oct 2nd in Mysore Ramakrishna Park, our friend Sachidhananda K J (Sachu) and other Mysuru friends organized a beautiful program of inaugurating the “Emdy – Musically drawn” box charaka. This box charaka is fine-tuned good quality model of existing box charaka to spin the cotton yarn. Sachu said sometime during his journey towards charaka “Spinning is not merely drawing yarn, it’s a process of drawing ourselves”. Santhosh Kaulagi, our senior member and constructive worker from Janapada Seva Trust, Melukote inagurated the Emdy-Box Charaka. Mysore spinning group spun the yarn and Local Bicycle group Trin-Trin had a Cycle jatha as part of the event on Gandhi Jayanti. Gram Seva Sangh is part of this spinning activity effort by Mysuru friends, we are working towards taking the spinning activity across the state as the bridge between city and village.

Check out links for videos about the Spinning Campaign: 

https://www.instagram.com/tv/CUkYcplIrz5/?utm_medium=copy_link
https://www.instagram.com/tv/CUjoh5doLUg/?utm_medium=copy_link

Note: Any of you interested to purchase the Emdy- box charaka contact Samahith Enterprises, #205 & 212, 2nd cross, B B Mill Road, New Banni Mantap Extension, Mysuru – 570015, info@samahith.org Or Contact Sachu at 8277417878

Request:

Gram Seva Sangh now has two full timers Abhilash C A, Organization Secretary and Parvathi B (Gowri), Office Secretary. Gowri joined recently as fulltime started working on accounts, fund raising, communication and handling office. We need your moral and small monthly financial support to sustain these full-timers remuneration, travel and office expenses.

Gram Seva Sangh Bank Details as below:

Ac. Name: Gram Seva Sangh, Bank: Indian Bank, Branch: Chamarajpet,

Current A/C No.: 6820702287, IFSC Code: IDBI000C007

UPI ID: gramseva@indianbk

For Gram Seva Sangh activities Donate to us at this QR Code, later please send us a message us at 9980043911 or gramsevasanghindia@gmail.com

Upcoming Programs:

  1. Sun. 5 Dec. 2021 Ragi Kana Santhe happens at Bengaluru from 10 am to 4 pm, providing platform to handmade products like natural farm produces, handloom, handicrafts, veggies, traditional food, etc.

Address: Ragi Kana, Sri Ramakrishna Samagra Shikshana Kendra Campus, Off Bannerghatta Road, Gottigere, Near Decathlon, Behind IDBI Lake, Bengaluru Contact: 9972676426

Map: https://g.page/ragikanasanthe?share

  1. Postponed Sat. & Sun. 20 & 21 Nov’21: Box Charaka Spinning Workshop at Bengaluru. Will soon inform the rescheduled dates. For more information about Spinning workshop Contact at 9008484880 / 8277417878

Gram Seva Sangh

#47, Shesha Nivas, 1st Main, 1st Block, Thyagaraj Nagar, Bengaluru – 560070

www.gramsevasangh.org | Email: gramasevasanghindia@gmail.com | Mobile : 9980043911
Facebook : @gramsevasanghindia | Twitter : @gramsevasangha | Instagram: @gramsevasanghindia

ಬಸವಣ್ಣ ಅಭಿವೃದ್ಧಿಯ ಹರಿಕಾರನಲ್ಲವೇ?

ಪ್ರಸನ್ನ

ಅಂಬಾನಿ, ಅದಾನಿಗಳು ಮಾತ್ರವೇ ಅಭಿವೃದ್ಧಿಯ ಹರಿಕಾರರೇ? ಅಥವಾ ಲಿಂಗಾಯತ ಖಾನಾವಳಿಗಳನ್ನು ಅತ್ತ ಸರಿಸಿ ಮ್ಯಾಕ್‌ಡೊನಾಲ್ಡ್‌ಗಳನ್ನು ಕರೆತಂದು ಕೂರಿಸಿದರೆ ಆಧುನಿಕತೆಯೇ? ಇತ್ತ ಪುರೋಹಿತಶಾಹಿ ಅಬ್ಬರ, ಅತ್ತ ಬಂಡವಾಳಶಾಹಿ ಅಬ್ಬರ, ಇತ್ತ ಧಾರ್ಮಿಕ ಅಸಹಿಷ್ಣುತೆ, ಅತ್ತ ಆರ್ಥಿಕ ಅಸಹಿಷ್ಣುತೆಗಳನ್ನು ತಂದು ಬಲವಂತ ಹೇರಿದರೆ ಅಭಿವೃದ್ಧಿಯೇ? ಬಸವನು ಹಳಬ; ಹಾಗಾಗಿ ಅಭಿವೃದ್ಧಿಯ ಹರಿಕಾರನಲ್ಲವೇ? ಈ ಪ್ರಶ್ನೆ ನನ್ನನ್ನು ಗಾಢವಾಗಿ ಕಾಡುತ್ತಿದೆ. ಪ್ರಶ್ನೆಯನ್ನೆತ್ತಿಕೊಂಡು ನಾನು ಉತ್ತರ ಕರ್ನಾಟಕಕ್ಕೆ ಹೋದೆ.

ಬಸವನ ಮೂಲ ನೆಲೆಯದು. ಇಂದು ಆ ನೆಲೆ ಹಿಂದುಳಿದಿದೆ. ಅದರ ಅಭಿವೃದ್ಧಿ ಹೇಗಿರಬೇಕು ಎಂಬ ಚರ್ಚೆ ನಡೆದಿದೆ ಅಲ್ಲಿ. ಹಾಗೆ ಚರ್ಚಿಸುತ್ತಿರುವ ಹೆಚ್ಚಿನವರು ಬಸವನ ಅನುಯಾಯಿಗಳೇ ಹೌದು. ಆದರೆ, ಉತ್ತರ ಕರ್ನಾಟಕದ ಹಿಂದುಳಿದಿರುವಿಕೆಗೆ ಬಸವನೇ ಕಾರಣವೋ ಎಂಬಂತೆ, ಆತನ ಮಾದರಿಯನ್ನು ಹಿಂದಕ್ಕೊತ್ತಿ, ಅಂಬಾನಿ– ಅದಾನಿ ಮಾದರಿಯ ಅಭಿವೃದ್ಧಿಯನ್ನು ಮುಂದೊತ್ತುತ್ತಿದ್ದಾರೆ ಅವರು ಅಲ್ಲಿ. ಬಸವಣ್ಣನನ್ನು, ಇತರೆಲ್ಲ ದೈವಗಳಂತೆಯೇ, ವೈಭವೋಪೇತ ಗೃಹಬಂಧನದಲ್ಲಿ ಇರಿಸಿದ್ದಾರೆ.

ಬೆಂಗಳೂರು ಅಥವಾ ನ್ಯೂಯಾರ್ಕು ಅಥವಾ ಲಂಡನ್ನುಗಳನ್ನು ಅಭಿವೃದ್ಧಿಗೆ ಮಾದರಿ ಎಂದು ನಂಬುತ್ತಾರೆ ಇವರು. ಉತ್ತರ ಕರ್ನಾಟಕದ ತುಂಬ ಜಗಜಗಿಸುವ ಖಾಸಗಿ ಕಾಲೇಜುಗಳು ಬರಲಿ, ಫಳಫಳಿಸುವ ಖಾಸಗಿ ಆಸ್ಪತ್ರೆಗಳು ಬರಲಿ, ಒಂದೇ ಸಮನೆ ಹೊಗೆಯುಗುಳುವ ಕಾರ್ಖಾನೆಗಳು ಬರಲಿ, ವಿಮಾನ ನಿಲ್ದಾಣಗಳು ಹಾಗೂ ಪಂಚತಾರಾ ಹೋಟೆಲುಗಳು ಬರಲಿ. ಆಗ ಉ.ಕ. ಅಭಿವೃದ್ಧಿ ಹೊಂದುತ್ತದೆ ಎಂದವರು ನಂಬುತ್ತಾರೆ.

ಹಾಗವರು ನಂಬಲಿಕ್ಕೆ ಕಾರಣವೂ ಇದೆ. ಉ.ಕ.ದಿಂದ ಗುಳೆ ಎದ್ದಿರುವ ಜಾಣ ಮಧ್ಯಮವರ್ಗ ತಲುಪಿರುವುದು ಬೆಂಗಳೂರು ನಗರವನ್ನು. ಸರ್ಕಾರಗಳು, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು, ಉದ್ದಿಮೆಪತಿಗಳು ಎಲ್ಲರೂ ಬೆಂಗಳೂರಲ್ಲಿ ಕುಳಿತು ಉ.ಕ.ದತ್ತ ನೋಡುತ್ತಾರೆ. ಬುದ್ಧಿಜೀವಿಗಳು, ಇಲ್ಲಿ ಕುಳಿತು ಅಲ್ಲಿನ ಕೃಷಿ, ಕೈಮಗ್ಗ ಹಾಗೂ ಕುಶಲಕರ್ಮಗಳ ಬಗ್ಗೆ ಚಿಂತಿಸುತ್ತಾರೆ. ಕವಿಗಳು, ಇಲ್ಲಿ ಕುಳಿತು ಅಲ್ಲಿನ ಹಳ್ಳಿಗಳ ಬಗ್ಗೆ ಪದ್ಯ ಬರೆಯುತ್ತಾರೆ… ಇತ್ಯಾದಿ. ಬೆಂಗಳೂರೆಂಬ ಹವಾನಿಯಂತ್ರಿತ ಕೊಠಡಿಯಿಂದಲೇ ಉ.ಕ., ದ.ಕ., ಮ.ಕ. ಇತ್ಯಾದಿ ಎಲ್ಲ ‘ಕ’ಗಳಿಗೂ ಹಣ ಬಿಡುಗಡೆಯಾಗುತ್ತದೆ. ಅಥವಾ ಆಗದೆ ಇರುತ್ತದೆ. ಬೆಂಗಳೂರೇ ನಿಜವಾದ ಕರ್ನಾಟಕವಾಗಿದೆ ಇಂದು. ಇತ್ತ ರೋಗಕ್ಕೆ ಪಕ್ಕಾಗಿರುವ ಕರ್ನಾಟಕದ ಹೃದಯಭಾಗವು ದಿನಗಣನೆ ಮಾಡುತ್ತ ಮಲಗಿಕೊಂಡಿದೆ.

ಬಸವನ ಮಾದರಿಯನ್ನು ಒಪ್ಪುವವರೂ ಇದ್ದಾರೆ. ಅಭಿವೃದ್ಧಿಯೆಂದರೆ, ಜನರ ಅಭಿವೃದ್ಧಿ, ಪರಿಸರ ಹಾಗೂ ಪ್ರಕೃತಿಗಳ ಅಭಿವೃದ್ಧಿ ಎಂದು ತಿಳಿಯುವ ಮಂದಿ ಇದ್ದಾರೆ. ಆದರೆ ಅಲ್ಪಸಂಖ್ಯಾತರು ಇವರು. ಬಹುಸಂಖ್ಯಾತರ ಓಲೈಕೆ ನಡೆದಿರುವ ಇಂದಿನ ಕಾಲಮಾನದಲ್ಲಿ, ಇವರು ಮೂಲೆಗುಂಪಾಗಿದ್ದಾರೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಹತ್ತಿರದಿಂದ ನೋಡಿಬಲ್ಲ ಇಂತಹ ಒಬ್ಬ ಸಾಮಾಜಿಕ ಕಾರ‍್ಯಕರ್ತರು ನನ್ನೊಟ್ಟಿಗೆ ಮಾತನಾಡುತ್ತಿದ್ದರು. ಅದು ಆರಂಭವಾದ ಮೂರು ವರ್ಷಗಳಲ್ಲಿ, ಮಂಡಳಿಯಿಂದ ಸುಮಾರು ನಾಲ್ಕು ಸಾವಿರದ ಮುನ್ನೂರು ಕೋಟಿ ರೂಪಾಯಿ ಖರ್ಚಾಗಿದೆಯಂತೆ. ಹೆಚ್ಚಿನ ಹಣವು ಯಥಾಪ್ರಕಾರ, ರಸ್ತೆಗಳು ಹಾಗೂ ಕಟ್ಟಡಗಳಿಗೆ ಖರ್ಚಾಗಿದೆಯಂತೆ. ಉಳಿದ ನೂರಿನ್ನೂರು ಕೋಟಿಗಳು ಕುರ್ಚಿ, ಕಂಪ್ಯೂಟರು ಇತ್ಯಾದಿಗಳ ಖರೀದಿಗೆ ಖರ್ಚಾಗಿದೆಯಂತೆ. ಹಣ ಖರ್ಚಾಗದೆ ಉಳಿಯುವುದು, ಉಳಿದು ಬೆಂಗಳೂರಿಗೇ ಮರಳುವುದು ಸಹ ಮಾಮೂಲಿಯಂತೆ. ಏಕೆ ಎಂದು ಕೇಳಿದೆ. ಸ್ಥಾವರ ನಿರ್ಮಾಣದ ಹೊಸಹೊಸ ಉಪಾಯಗಳು ಹೊಳೆಯದೆ ಹೀಗಾಗುತ್ತದೆ ಎಂದು ತುಂಟನಗೆ ಬೀರಿದರು ಅವರು. ಭ್ರಷ್ಟಾಚಾರದ ಚರ್ಚೆ ಅನಗತ್ಯ. ಎಲ್ಲ ಕಡೆ ಇರುವಂತೆ ಇಲ್ಲಿಯೂ ಇದೆ ಅದು ಧಾರಾಳ.

ಉತ್ತರ ಕರ್ನಾಟಕದ ಅಭಿವೃದ್ಧಿ ಹೇಗಿರಬೇಕು ಎಂಬ ಒಂದೆರಡು ಚರ್ಚೆಗಳಲ್ಲಿ ನಾನೂ ಭಾಗವಹಿಸಿದ್ದೆ. ಅಂಬಾನಿ, ಅದಾನಿ ಮಾದರಿಯನ್ನು ತಲೆಕೆಳಗು ಮಾಡಬೇಕೆಂಬ ಉದ್ದೇಶದಿಂದಲೇ ಭಾಗವಹಿಸಿದ್ದೆ. ಬಸವಣ್ಣ ಅಭಿವೃದ್ಧಿಯ ಹರಿಕಾರನಾಗಲಾರನೆ ಎಂಬ ಪ್ರಶ್ನೆಯನ್ನು ಬೇಕೆಂತಲೇ ಸಭಿಕರತ್ತ ಎಸೆಯುತ್ತ ಹೋದೆ. ನನ್ನೆದುರಿಗೆ ಕುಳಿತಿರುತ್ತಿದ್ದ ಹೆಚ್ಚಿನವರು ಬಸವನ ಧಾರ್ಮಿಕ ಅನುಯಾಯಿಗಳು. ಲಿಂಗಾಯತರಲ್ಲದವರೂ ಆತನನ್ನು ಮೆಚ್ಚುವ ಮಂದಿ. ನನ್ನ ಬಾಣವು ಪ್ರತಿಬಾರಿ ತನ್ನ ಗುರಿಯನ್ನು ತಾಕುತ್ತಿತ್ತು. ಆ ಬಸವಣ್ಣ ಧರ್ಮದ ಹರಿಕಾರ ಎಂದು ನಂಬುತ್ತೀರಿ ತಾನೆ?… ಧರ್ಮವೆಂದರೆ ಏನು ಹಾಗಿದ್ದರೆ? ಕಾಯಕವಿಲ್ಲದ ಬಸವಧರ್ಮ ಇದೆಯೆ? ಕಲ್ಯಾಣದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಿರದಿದ್ದರೆ ಬಸವನನ್ನು ಬಿಜ್ಜಳ ಇರಗೊಡುತ್ತಿದ್ದನೇ?

ಆ ಬಸವಣ್ಣ, ಆಧುನಿಕ ಅರ್ಥದಲ್ಲಿ, ಉತ್ಪಾದಕರನ್ನು ಸಂಘಟಿಸಿದ! …ಶರಣರು ಶಿಸ್ತಿನಿಂದ ಉತ್ಪಾದನೆ ಮಾಡುವಂತೆ ಮಾಡಿದ! …ತಮ್ಮ ಉತ್ಪಾದನೆಯಿಂದ ಅವರು ದಾಸೋಹ ಮಾಡುವಂತೆ ತಾಕೀತು ಮಾಡಿದ. ಬಡವರೆಲ್ಲ ಶರಣರಾಗಿ ಸಂಘಟಿತರಾದದ್ದರಿಂದಲೇ ಕಲ್ಯಾಣದಲ್ಲಿ ಶಿಸ್ತಿನ ಉತ್ಪಾದನೆ ಸಾಧ್ಯವಾಯಿತು. ಕಲ್ಯಾಣ ಸಮೃದ್ಧವಾಯಿತು. ಸಮೃದ್ಧಿಯ ಮೇಲೆ ಆಶೆಪಟ್ಟೇ ಮೇಲ್ಜಾತಿ, ಮೇಲ್ವರ್ಗಗಳು, ಬಿಜ್ಜಳನ ಮಗ ಜಗದೇವನನ್ನು ಹುಚ್ಚೆಬ್ಬಿಸಿ, ಶರಣರ ರಕ್ತ ಹರಿಸಿದವು. ಅವರಿಗೆ ಅಧಿಕಾರ ಬೇಕಿತ್ತು. ಮುಷ್ಕರವಿಲ್ಲದ ಉತ್ಪಾದನೆ, ಲಂಚ ರುಶುವತ್ತುಗಳಿಲ್ಲದ ಆಡಳಿತ, ಅವ್ಯವಹಾರಗಳಿಲ್ಲದ ವಾಣಿಜ್ಯ, ಕುಡಿತ ವ್ಯಭಿಚಾರಗಳಿಲ್ಲದ ಸಮಾಜ ವ್ಯವಸ್ಥೆ ಬೇಕಿತ್ತವರಿಗೆ. ಆದರೆ ಲಾಭದ ಹಂಚಿಕೆ ಬೇಡವಿತ್ತು. ಬಸವ ಲಾಭದ ಹಂಚಿಕೆ ಮಾಡಿದ. ಬಡವ ಬಲ್ಲಿದರ ನಡುವಣ ಅಂತರವನ್ನು ಕಡಿಮೆ ಮಾಡಿದ. ಹೀಗೇ ಹೇಳುತ್ತಹೋದೆ. ಕೆಲವು ತಲೆಗಳು ಹೌದೆಂಬಂತೆ ಹಿಂದೆ ಮುಂದೆ ಆಡಿದವು. ಮಾತು ಮುಂದುವರೆಸಿದೆ.

ಹಳೆಯ ಧರ್ಮ, ಹೊಸ ಆರ್ಥಿಕತೆ– ಇವು ಬೇರೆಬೇರೆ ಎಂದು ತಿಳಿದಿದ್ದೀರಿ ನೀವು. ದ್ವಂದ್ವಾತ್ಮಕ ನಿಲುವು ತಾಳಿದ್ದೀರಿ ಎಂಬ ಗಂಭೀರ ಆರೋಪ ಮಾಡಿದೆ. ಶ್ರಮ ಹಾಗೂ ಯಂತ್ರ ಒಂದೇ ಎಂಬ ಅಪಾಯಕಾರಿ ನಿಲುವು ತಾಳಿದ್ದೀರಿ ನೀವು ಎಂದೆ. ಬಸವಣ್ಣ ಬದುಕಿದ್ದರೆ ಆತ ಕಾರಿನಲ್ಲಿ ಕುಳಿತು ‘ಕಾಯಕ’ ಮಾಡುತ್ತಿದ್ದ ಎಂದು ನಂಬುತ್ತೀರಿ ನೀವು ಎಂದೆ. ದಾಸೋಹದ ಹೆಸರಿನಲ್ಲಿ ಆತ ಸಾಹುಕಾರರ ಮನೆಗಳಲ್ಲಿ ಭೂರಿಬೋಜನ ಮಾಡುತ್ತಿದ್ದ ಎಂದು ನಂಬುತ್ತೀರಿ ನೀವು ಎಂದೆ. ಹೊಸ ಆರ್ಥಿಕತೆಗೆ ಸಾರಥ್ಯ ನೀಡಿರುವ ಅಂಬಾನಿ, ಅದಾನಿ ಇತ್ಯಾದಿಗಳು ಅಥವಾ ಅವರ ಕನ್ನಡ ಅವತರಿಣಿಕೆಗಳು, ನಿಜಕ್ಕೂ ಸಮಾಜಕಲ್ಯಾಣ ಮಾಡಬಲ್ಲರೇ ಎಂದು ಪ್ರಶ್ನೆ ಮಾಡಿದೆ. ಲಕ್ಷಾಂತರ ಕೋಟಿ ರೂಪಾಯಿಗಳ ತಮ್ಮ ಲಾಭವನ್ನು, ಉತ್ತರ ಕರ್ನಾಟಕದ ಹೊಲಗಳ ತನಕ ಅಥವಾ ಮಗ್ಗದಕುಣಿಗಳ ತನಕ ಇವರು ತಲುಪಿಸುತ್ತಾರೆಯೆ ಎಂದು ಪ್ರಶ್ನೆ ಮಾಡಿದೆ. ಹೊಸ ಅಭಿವೃದ್ಧಿ ಮಾದರಿಯಿಂದಾಗಿ ಬಡವಬಲ್ಲಿದರ ಅಂತರವು, ಬಸವನ ಕಾಲಕ್ಕಿಂತ ಸಾವಿರ ಪಟ್ಟು ಹೆಚ್ಚಾಗಿದೆ ಎಂದು ತಿಳಿದಿದೆಯೆ ನಿಮಗೆ ಎಂದು ಪ್ರಶ್ನೆ ಮಾಡಿದೆ. ನಿಶ್ಶಬ್ದವಾಗಿ ಮಾತು ಕೇಳಿಸಿಕೊಂಡರು. ಮಾತಿನ ಧಾಟಿ ಬದಲಿಸಿದೆ.

ಇಂದಿನ ಬಡವರು, ನುಲಿಯಚಂದಯ್ಯನ ತರಹ, ಇತ್ತ ಶ್ರಮವನ್ನೂ ಪಡುತ್ತಿಲ್ಲ ಅತ್ತ ದಾಸೋಹವನ್ನೂ ಮಾಡುತ್ತಿಲ್ಲ ಏಕೆ ಗೊತ್ತೆ ಎಂದು ಪ್ರಶ್ನಿಸಿದೆ. ಇವರ ಸ್ಥೈರ್ಯವನ್ನು ಹರಣ ಮಾಡಿದವರು ಯಾರು, ಜಾಹೀರಾತುಗಳು, ಟೀವಿ ಹಾಗೂ ಇಂಟರ್‌ನೆಟ್ಟಿನ ಹೊಲಸು ಸೃಷ್ಟಿಸುತ್ತಿರುವವರು ಯಾರು, ಸುತ್ತ ತಾಂಡವವಾಡುತ್ತಿರುವ ಧಾರ್ಮಿಕ ಉಗ್ರವಾದವನ್ನು ಪೋಷಿಸುತ್ತಿರುವವರು ಯಾರು? ಭಕ್ತರನ್ನು ಭಕ್ತಿಯಿಂದ ದೂರ ಸರಿಸುತ್ತಿರುವವರು ಯಾರು? ನಾಟಕೀಯ ಪ್ರಶ್ನೆ ಮಾಡಿದೆ. ಹೊಸ ಆರ್ಥಿಕತೆ, ಹೊಸ ಅಭಿವೃದ್ಧಿ ಮಾದರಿ ಈ ಕೆಲಸ ಮಾಡಿದೆ ಎಂದೆ. ಬಸವನ ಮಾದರಿ ಬೆಳಕಾದರೆ, ಅಂಬಾನಿ, ಅದಾನಿಗಳ ಮಾದರಿ ಕತ್ತಲು ಎಂದು ಗಟ್ಟಿಸಿಹೇಳಿ ಮಾತು ಮುಗಿಸಿದೆ.

ಸಣ್ಣ ವಿರಾಮ ನೀಡಿ ಮಾತು ಮುಂದುವರಿಸಿದೆ. ವಿದೇಶಿ ಕಂಪನಿಗಳ ಏಜೆಂಟು ಈ ಆರ್ಥಿಕತೆ ಅಂದೆ. ತಮ್ಮೂರಿನಲ್ಲಿ ಇವರು ಏಸುಕ್ರಿಸ್ತನಿಗೆ ಏನನ್ನು ಮಾಡಿದ್ದಾರೋ ಅದನ್ನೇ ಇಲ್ಲಿ, ನಿಮ್ಮೂರಲ್ಲಿ, ನಿಮ್ಮ ಬಸವನಿಗೆ ಮಾಡುತ್ತಿದ್ದಾರೆ ಅಂದೆ. ಅಥವಾ, ಪ್ರವಾದಿ ಮಹಮ್ಮದರಿಗೆ ತಮ್ಮೂರಲ್ಲಿ ಇವರು ಮಾಡಿದ್ದನ್ನೇ ನಿಮ್ಮೂರಲ್ಲಿ, ಬಸವ– ಕನಕ– ಪುರಂದರ– ದಾದಾಪೀರ ಎಲ್ಲರಿಗೂ ಮಾಡುತ್ತಿದ್ದಾರೆ ಅಂದೆ. ಧಾರ್ಮಿಕ ಬಂಧನದಲ್ಲಿ ಇರಿಸಿದ್ದಾರೆ ಸಂತರನ್ನು ಅಂದೆ. ಸಾಮಾಜಿಕ ಕೆಲಸಕ್ಕಾಗಿ ಬಿಡುಗಡೆಗೊಳಿಸಿ ಎಂದು ಕರೆ ನೀಡಿದೆ.

‘ಬಂಡೇಳಬೇಕು!… ವಚನಕಾರರಂತೆ ಸೂಫಿಸಂತರಂತೆ ಕ್ರೈಸ್ತಸಂತರಂತೆ ಅಹಿಂಸಾತ್ಮಕವಾಗಿ ಬಂಡೇಳಬೇಕು!… ನೇಗಿಲು, ಮಗ್ಗ, ರಾಟೆ ಹಾಗೂ ವಚನಗಳನ್ನು ಆಯುಧಗಳನ್ನಾಗಿ ಬಳಸಿಕೊಂಡು ಬಂಡೇಳಬೇಕು!… ಹೊಸ ಆರ್ಥಿಕತೆಯ ವಿರುದ್ಧ ಬಂಡೇಳಬೇಕು’ ಅಂದೆ. ಮುಂದುವರೆದು, ಆ ಧರ್ಮ ಹಳೆಯದ್ದೂ ಅಲ್ಲ, ಆರ್ಥಿಕತೆ ಹೊಸತೂ ಅಲ್ಲ!… ಎರಡೂ ಸಮಕಾಲೀನವಾದದ್ದು!… ಸಮಕಾಲೀನ ಕಾಯಕವೇ ಸಮಕಾಲೀನ ಧರ್ಮ ಅಂದೆ. ಒಂದಿಬ್ಬರು ಹೌದು ಹೌದು ಅಂದರು. ಮುಂದುವರೆದೆ. ಆ ಬಸವಣ್ಣನ ಆರ್ಥಿಕತೆ ನೈತಿಕವಾದದ್ದು, ದುಡ್ಡನ್ನು ದಾಸೋಹವಾಗಿಸುತ್ತದೆ ಅದು !… ಸಂಪತ್ತನ್ನು ಸಾರ್ವಜನಿಕವಾಗಿಸುತ್ತದೆ ಅದು!… ನಾಲ್ಕು ಜನರ ಪ್ರೀತಿ ಗಳಿಸುತ್ತದೆ ಅದು! ಅಂದೆ. ಹೌದು ಹೌದು ಅಂದರು.

ಬಸವನ ಆರ್ಥಿಕತೆ ನೋಟು ದ್ವಿಗುಣಗೊಳಿಸುವುದಿಲ್ಲ!… ವಿಪರೀತ ಲಾಭ ತರುವುದಿಲ್ಲ!… ವಿಪರೀತ ಲಾಭ ಬಯಸುವವರು ಬಸವಣ್ಣನ ಬದಲಿಗೆ ಮಂಚಣಕ್ರಮಿತನನ್ನು ದೈವವಾಗಿ ಸ್ವೀಕರಿಸಿರಿ ಅಂದೆ. ಮಾತು ಚುಚ್ಚಿತು. ಮಂಚಣಕ್ರಮಿತ ಬಸವನ ಬದ್ಧವೈರಿ ಎಂಬ ಅರಿವಿತ್ತು ಸಭಿಕರಿಗೆ. ಮೈ ಕೊಡವಿಕೊಂಡು ಕುಳಿತರು ಅವರು. ಅಂಬಾನಿ, ಅದಾನಿಗಳನ್ನು ಹಾಡಿ ಹೊಗಳುವವರು ಮಂಚಣಕ್ರಮಿತನ ಆಧುನಿಕ ರೂಪವೇ ಹೌದು ಎಂಬ ಗಂಭೀರ ಆರೋಪ ಮಾಡಿದೆ. ನಿಮ್ಮ ಕುತ್ತಿಗೆಗೆ ಅವರು ಬಿಗಿದಿರುವ ಮೊಬೈಲುಗಳು ಅನಿಷ್ಟಲಿಂಗಗಳು ಅಂದೆ! ಮಾತಿನ ಭರದಲ್ಲಿ ಅನಿಷ್ಟಲಿಂಗ ಅಂದಿದ್ದೆ. ನಾಲಿಗೆ ಕಚ್ಚಿಕೊಂಡೆ. ಆದರೆ ಅವರು ತಪ್ಪು ತಿಳಿಯಲಿಲ್ಲ. ನನ್ನ ವಿಚಾರಗಳ ಒಟ್ಟಿಗೆ ನಡೆದಿದ್ದರು ಅವರು.

ಬಸವಣ್ಣನ ಆರ್ಥಿಕತೆ ಶ್ರಮದ ಆರ್ಥಿಕತೆ ಎಂದು ವಿಸ್ತರಿಸಿ ಹೇಳಿದೆ. ಶ್ರಮವನ್ನು ಸಹಿಸಬೇಕು ಅಂದೆ. ಒಮ್ಮೆಗೇ ಆಗದಿದ್ದರೆ ಕ್ರಮಕ್ರಮವಾಗಿ ಸಹಿಸಬೇಕು ಅಂದೆ. ರೂಢಿಸಿಕೊಳ್ಳಬೇಕು ಅಂದೆ. ಸಹಕರಿಸುವುದನ್ನು ಕಲಿಯ
ಬೇಕು ಅಂದೆ. ಆದರೆ! …ಅಯ್ಯೋ ನಾವು ಮಂಚಣಕ್ರಮಿತನ ಜೊತೆಗೆ ವಿಮಾನಯಾನ ಮಾಡುತ್ತಿದ್ದೇವೆ! ಅಂದೆ. ಮಂಚಣಕ್ರಮಿತನ ಕಾವಿಬಟ್ಟೆ, ರುದ್ರಾಕ್ಷಿ, ವಿಭೂತಿ ಹಾಗೂ ಸಂಸ್ಕೃತ ಪಾಂಡಿತ್ಯಕ್ಕೆ ಮರುಳಾಗಿದ್ದೇವೆ ನಾವು, ಹಳ್ಳಿಯ ಮಂದಿ ಅಂದೆ. ಮಂಚಣಕ್ರಮಿತ ಕೊಲ್ಲುತ್ತಾನೆ, ಮರೆಯದಿರಿ ಅಂದೆ. ದೇವರ ಆಯುಧ ಬಳಸಿ ಕೊಲ್ಲುತ್ತಾನೆ ಮರೆಯದಿರಿ ಅಂದೆ. ಹೌದೆಂದು ತಲೆಯಾಡಿಸಿದರು.

ಎಲ್ಲ ನಾಟಕೀಯತೆಯನ್ನೂ ಕಳಚಿ, ತೀವ್ರ ಕಳಕಳಿಯಿಂದ ವಿನಂತಿಸಿಕೊಂಡೆ.

‘ದಯಮಾಡಿ!…ದಯಮಾಡಿ ನೀವು ಬಸವಣ್ಣನನ್ನು ಅಭಿವೃದ್ಧಿಯ ಹರಿಕಾರ ಎಂದು ಪರಿಗಣಿಸಿ ನೋಡಿ!… ನೀವು ಹಾಗೆ ಮಾಡಿದರೆ, ಉತ್ತರ ಕರ್ನಾಟಕವೇ ಏಕೆ, ಅಥವಾ ಭಾರತ ದೇಶವೇ ಏಕೆ, ಇಡೀ ವಿಶ್ವವನ್ನೇ ಅಭಿವೃದ್ಧಿಪಡಿಸಬಲ್ಲದು ಬಸವ ಮಾದರಿ’ ಅಂದೆ.

ನನ್ನ ಮಾತಿಗೆ ಸಮಕಾಲೀನ ವಿವರಣೆ ನೀಡಿದೆ. ‘1947ರ ತನಕ!… ಗಾಂಧೀಜಿ ನೇತೃತ್ವದಲ್ಲಿ ನಾವೆಲ್ಲರೂ ಬಸವ ಮಾದರಿಯನ್ನೇ ಅನುಸರಿಸಿದೆವು ತಾನೆ? ಗ್ರಾಮಸ್ವರಾಜ್ಯ ಎಂದು ಅದಕ್ಕೆ ಹೆಸರಿಟ್ಟಿದ್ದೆವು ತಾನೆ!… ಉತ್ತರ ಕರ್ನಾಟಕದ ಸ್ವಾತಂತ್ರ್ಯ ಚಳವಳಿಯ ಭವ್ಯ ಪರಂಪರೆಯನ್ನು ನೀವು ಮರೆತಿಲ್ಲ ತಾನೇ!’ ಎಂದು ಉದಾಹರಣೆ ಸಹಿತವಾಗಿ ಅವರಿಗೆ ವಿವರಿಸಿ ಹೇಳಿದೆ. ಎಲ್ಲ ಹೇಳಿ, ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು, ‘ಈಗ!…, ನಾಚಿಕೆ ಮಾನ ಮರ್ಯಾದೆ ಮೂರೂ ಬಿಟ್ಟು ಮಂಚಣಕ್ರಮಿತನ ಹಾದಿ ಹಿಡಿದಿದ್ದೇವೆ ನಾವು! …ಭಾರತ ದೇಶವನ್ನು ಸಿಂಗಪುರ ಮಾಡಲು ಹೊರಟಿದ್ದೇವೆ ನಾವು’ ಎಂದು ಮಾತು ಮುಗಿಸಿದೆ. ಒಟ್ಟು ಕತೆಯ ನೀತಿಯಿದು: ಕೃಷಿ ಹಾಗೂ ಕೈಮಗ್ಗ ಉತ್ತರ ಕರ್ನಾಟಕದ ಎರಡು ಕಣ್ಣುಗಳು. ಕಣ್ಣು ಕಿತ್ತು, ಅಂಬಾನಿ, ಅದಾನಿಗಳು ತಯಾರಿಸಿದ ಅತ್ಯಾಧುನಿಕ ಕಪ್ಪುಕನ್ನಡಕ ತೊಡಿಸಿ, ಕುರುಡರಕೋಲು ಕೈಯಲ್ಲಿ ಹಿಡಿಸಿ, ನಡೆ ಎನ್ನುವುದು ಅಭಿವೃದ್ಧಿಯಲ್ಲ.

  • ಪ್ರಸನ್ನ, ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತ
    (ಪ್ರಜಾವಾಣಿಯಲ್ಲಿ ಪ್ರಕಟಿತ ಅಂಕಣ)

#ಪವಿತ್ರಆರ್ಥಿಕತೆ
#SacredEconomy #MonsterEconomy #Karonakuch
#Basavanna #Basava #Sharana #Development #UttaraKarnataka https://www.prajavani.net/columns/sambhashane/basavanna-leader-development-572934.html

Commercial success at the cost of destroying a river – Tiruppur’s Garment Business Case Story

 

Noyyal River - Tirupur

A Business model that damages Ecology

Tiruppur’s cloth range are not environmentally sustainable.

 

South India’s Tiruppur City is an example of the environmental damages, non-sustainable cloth and garment manufacturing processes can cause to a City’s precious rivers and water resources. This is a case in point of how business and economic progress took place at a huge cost of causing severe environmental degradation.

Noyyal River sacrificed for having the textile industry flourish!!

Tiruppur is a famous centre for it’s cotton knitwear , particularly cotton t-shirts. During the 1990’s, Tiruppur’s economy in terms of employment and export earnings thrived due to the cotton knitwear industry. The City’s garment businesses have got many global fashion retailers as customers. However, the process of manufacturing these garments involved bleaching and chemical dyeing which polluted the Tiruppur City’s Noyyal river which was once beautiful.

Contamination and pollution of Noyyal River -Tiruppur

 

Farmers lose out with their lands getting degraded

Farmers occupation hit at Tiruppur - India

 

Subsequently over the years, the Noyyal river became a toxic sewer and with the river’s chemically contaminated waters creeping into the groundwater table , a major natural source of clean water was destroyed and the water became unfit to be used for most of the agricultural purposes. All farmers in and around the district that depended on the waters of the Noyyal river for irrigation were negatively impacted.

Noyyal River - Tiruppur,India

 

 Productive Farming prevalent before the entities began their contamination

Before the dyeing and bleaching era existed prior to the 1990’s the Noyyal river which was clean supported the farming community as farmers grew a variety of crops – rice, sugarcane, groundnut, sesame, turmeric, beetroot, green chilli, tomato, cotton, tobacco, banana etc. Now the dirty, toxic contaminated waters of Noyyal river have destroyed farming occupations as the only crops that can be grown using these now toxic waters are coconuts and maize predominately used in dairy and livestock farming.

Unhealthy yield of coconut - Tiruppur, India

 

Even the coconuts that are grown now are of deteriorated quality looking small and unhealthy.

Farmer earnings now hit rock bottom!!

Villages that are even 70km downstream from Tiruppur are negatively impacted due to contamination of the Noyyal river with farmers making paltry earnings, as their agricultural lands and occupations are ruined, all due to these harmful effluents released by Tiruppur’s dye and bleaching entities!!

Tiruppur’s residents lose a precious source of water

Weeds, Distroyed Noyyal River, Tiruppur, India

Besides the farmers, resident people too are negatively affected with their local water resource contaminated and wasted by Tiruppur’s environmentally destructive textile manufacturing practices.

Let’s remember the water footprint of making one cotton t-shirt

Every cotton t-shirt has a water footprint with 1000’s of litres of water required to make it, beginning from growing the cotton crop, then processing of the cloth and wastage of water due to pollution involved in this process as well. Each cloth wastes, a natural resource that these days is critically scant.

 It’s possible to apply natural dyes for clothes – Sustainable Alternative

Charaka naturally dyed handloom clothes

 

This need not have been the story if Tiruppur did manufacture garments in an environmentally friendly, ethical way. For instance, Charaka, a women’s co-operative located at Bhimanakone Village in the Western Ghats region of Southern India, manufactures handloom garments using natural dyes.

Natural Dyes extracted from plant varieties

These natural dyes are extracted from crops and plants available in the forests of Western Ghats; like arecanut, pomegranate, jackwood, madder root for rich colours and hues of brown, red and yellow.

 Handmade clothes made with care employing rural locals

Designs made on a naturally dyed handloom cloth using Block Printing technique

Charaka was successful in providing employment and livelihoods to women of the region. Such garments are manufactured with care for the environment and done using labour employing their hand skills in weaving naturally dyed garments using handlooms.

Fabrics are woven using handloom employing labour

Fabrics are woven using handloom employing labour

 

Additional value is added to the garments with designs made on them with elegant hand embroidery and block printing, where wood blocks are used to make designs on the garments.

Charaka's elegant hand embroidery on their naturally dyed handloom clothes

Ultimate in Sustainability

Such a business model is sustainable, it employs local resources from raw materials to labour, gives jobs to rural people and there is a special value because these products are handmade, eco-friendly.

 We can make sustainable choices in making purchases!!

A takeaway for us in all this, is that when we buy clothes, we choose clothes that are ethically made, clothes that are made without polluting rivers without destroying livelihoods of farmers. This is sustainable fashion.

Charaka range of eco sustainable dresses for men

 

There is more value for a cloth that’s made with care, using hand skills of local rural people, than mass produced soulless machine made mass produced clothes.

Charaka range of eco sustainable dresses for women.

India we all know used to be popular with Khadi cloth business as well, it supported the village economy providing jobs to people of rural India. We have the choice of making conscious sustainable choices, valuing environment, labour and creating a positive change by buying clothes that helps in giving a living to local people, providing them respect and dignity for their valuable work.

All photos related to the Noyyal River taken from the following wire article
https://thewire.in/environment/australian-open-tiruppur-dyeing-bleaching-groundwater-contamination-agriculture-noyyal-river
Photo credits to Neetha Deshpande