ಉಪವಾಸ ಸತ್ಯಾಗ್ರಹ ಮುಕ್ತಾಯ

ಹಿಂದಿನ ಪತ್ರಿಕಾ ಪ್ರಕಟಣೆಗಳು:
10/04/2020:  https://gramsevasangh.org/2020/04/24/pressrelease10042020kan-2/ 
08/04/2020: https://gramsevasangh.org/2020/04/09/pressnote08042020kan/

ಪತ್ರಿಕಾ ಬಿಡುಗಡೆ – 17.04.2020

 ಎಂಟು ದಿನಗಳ ನಂತರ ನಾನು, ಇಂದು ಸಂಜೆ, 17 ಏಪ್ರಿಲ್ 2020, ಉಪವಾಸ ವ್ರತವನ್ನು ಕೊನೆಗೊಳಿಸುತ್ತಿದ್ದೇನೆ. ಒಂದು ಸೀಮಿತ ಉದ್ದೇಶದಿಂದ ವ್ರತವನ್ನು ಕೈಗೊಳ್ಳಲಾಗಿತ್ತು. ಪ್ರಭುತ್ವವನ್ನು ಅಲುಗಾಡಿಸುವುದಾಗಿರಲಿಲ್ಲ ಉದ್ದೇಶ. ಆತ್ಮವಲೋಕನವಾಗಿತ್ತು. ನಾನೂ ಮೊದಲ್ಗೊಂಡು ಹಲವು ಗಾಂಧಿವಾದಿಗಳು ರಚನಾತ್ಮಕ ಕಾರ್ಯಕರ್ತರು ಹಾಗೂ ಪ್ರಗತಿಪರ ಚಿಂತಕರು ಈ ಕೆಲವು ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದೇವೆ ಹಾಗೂ ನಾವೊಂದು ದೃಢನಿರ್ಧಾರಕ್ಕೆ ಬಂದಿದ್ದೇವೆ.  ಲಾಕ್‍ಡೌನ್ ತೆರವುಗೊಂಡ ನಂತರದಲ್ಲಿ ಬೀದಿಗಿಳಿಯಲಿದ್ದೇವೆ, ಹಸಿದವರತ್ತ, ಕೆಲಸ ಕಳೆದುಕೊಂಡಿರುವವರತ್ತ ತೆರಳಲಿದ್ದೇವೆ.  ಗುಳೆಎದ್ದ ಬಡವರಿರಲಿ, ಗ್ರಾಮೀಣ ರೈತನಿರಲಿ, ಪೇಟೆಯ ಕಾರ್ಮಿಕನಿರಲಿ, ನೇಕಾರ ಚಮ್ಮಾರ ಯಾರೇ ಇರಲಿ ಅವರ ಪರವಾದ ದನಿ ಎತ್ತುವವರಿದ್ದೇವೆ.  ನಾವು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಬಡವರ ಪರವಾದ ಹೋರಾಟಗಳನ್ನು ಹೆಚ್ಚಿನ ದೃಡತೆಯಿಂದ ಮುನ್ನಡೆಸುವವರಿದ್ದೇವೆ. 


ಜೊತೆಗೆ ಮತ್ತೊಂದು ಕಾರ್ಯವನ್ನೂ ಮಾಡಲಿದ್ದೇವೆ.  ಮಹತ್ತರವಾದ ಕಾರ್ಯವದು. ಕುಸಿದು ಬಿದ್ದಿರುವ ರಾಕ್ಷಸ ಆರ್ಥಿಕತೆಯನ್ನು ಗೂಟಕೊಟ್ಟು ನಿಲ್ಲಿಸುವ ಪ್ರಯತ್ನಗಳು ನಡೆಯಲಿವೆ.  ಬಡವರು ಹಾಗೂ ಪ್ರಕೃತಿಯ ಮೇಲೆ ಇಷ್ಟೆಲ್ಲ ದೌರ್ಜನ್ಯ ಎಸಗಿ ನರಕ ಸೃಷ್ಟಿಸಿದ ರಾಕ್ಷಸನನ್ನು ಮತ್ತೆ ಜೀವಂತವಾಗಿಸುವ ಪ್ರಯತ್ನ ಮಾಡಲಿದ್ದಾರೆ ದುರಾಸೆಗೆ ಬಿದ್ದವರು.  ನಾವವರನ್ನು ತಡೆಯುವವರಿದ್ದೇವೆ.  ಪ್ರಭುತ್ವವಾಗಲಿ ಉದ್ಯಮಿಗಳಾಗಲಿ ವಲ್ರ್ಡ್ ಬ್ಯಾಂಕ್ ಆಗಲಿ ಅಮೇರಿಕೆಯಾಗಲಿ ಯಾರೇ ಆಗಲಿ, ದುರಾಸೆಯ ಪ್ರಯತ್ನ ನಡೆಸಿದರೆ ಅವರ ವಿರುದ್ಧ ಅಹಿಂಸಾತ್ಮಕ ಯುದ್ಧ ಸಾರುವವರಿದ್ದೇವೆ.  
ಉಪವಾಸವ್ರತದ ಸಂದರ್ಭದಲ್ಲಿ ನೀವೆಲ್ಲ ನೈತಿಕ ಬೆಂಬಲ ನೀಡಿ ಸಹಕರಿಸಿದ್ದೀರಿ. ಪೋಲೀಸರು ಸೌಜನ್ಯದಿಂದ ನಡೆದುಕೊಂಡಿದ್ದಾರೆ. ಇಂದಿನ ಸಂಕಟದ ಪರಿಸ್ಥಿತಿಯಲ್ಲಿ ಸಂಯಮ ಅಗತ್ಯವಾದ್ದರಿಂದ ಮಾಧ್ಯಮಗಳು ಸಂಯಮದಿಂದ ಸುದ್ಧಿ ಪ್ರಕಟಿಸಿವೆ.  ಇವರೆಲ್ಲರಿಗೂ ನಾವು ಚಿರಋಣಿಯಾಗಿದ್ದೇವೆ.

  ಹೆಚ್ಚಿನ ಮಾಹಿತಿಗೆ ಈ ಲಿಂಕ್ ಬಳಸಿ bit.ly/karonakuch_presskit

-ಪ್ರಸನ್ನ
ರಂಗಕರ್ಮಿ ಮತ್ತು ನಾಟಕಕಾರ,
       ಗ್ರಾಮಸೇವಾಸಂಘ

ನನ್ನ ದು:ಖದ ಕಟ್ಟೆಯೊಡೆದಿತ್ತು!


ಪವಿತ್ರ ಆರ್ಥಿಕತೆಯ ಜಾರಿಗಾಗಿ ಇತ್ತೀಚೆಗೆ ನಾನು ಕೈಗೊಂಡಿದ್ದ ಉಪವಾಸ ವ್ರತವನ್ನು ಬೆಂಬಲಿಸುತ್ತಾ ಕೆಲವು ಸ್ನೇಹಿತರು, ನೀವು ಕೈಗೊಂಡ ವ್ರತದ ಸಮಯ ಸೂಕ್ತವಿರಲಿಲ್ಲ ಎಂದಿದ್ದಾರೆ. ಉಪವಾಸದಂತಹ ಕಠಿಣ ಕ್ರಮವನ್ನು ಕೈಗೊಳ್ಳುವ ಮೊದಲು ಯೋಚಿಸಿ ನಿರ್ಧರಿಸಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಗುಳೆ ಎದ್ದಿದ್ದ ಬಡವರ ದೀನ ಮುಖಗಳನ್ನು ಪತ್ರಿಕೆಗಳಲ್ಲಿ ಕಂಡು ಧಿಡೀರನೆ ನಿರ್ಧಾರ ತಳೆದಿದ್ದರೆ ನಿಮ್ಮ ಮಾತು ಒಪ್ಪುತ್ತಿದ್ದೆ. ಆದರೆ ಪರಿಸ್ಥಿತಿ ಹಾಗಿರಲಿಲ್ಲ. ಚರಕ ಮುಚ್ಚಿತ್ತು ! ಚರಕದ ಪರವಾಗಿ ಸಹಾಯ ಯಾಚಿಸಲೆಂದು ಬೆಂಗಳೂರಿಗೆ ಬಂದಿದ್ದೆ. ಹಾಗೆ ಬಂದವನು ಬೆಂಗಳೂರಿನ ನನ್ನ ತಮ್ಮನ ಅನುಕೂಲಕರ ಮನೆಯಲ್ಲಿ, ನಿಮ್ಮಂತೆಯೇ, ಅನುಕೂಲಕರ ಬಂಧಿಯಾಗಿದ್ದೆ. ಆಗ ಗುಳೆ ಕೆಲಸಗಾರರ ಮುಖ ಪತ್ರಿಕೆಗಳಲ್ಲಿ ಕಂಡೆ. ನನ್ನ ದು:ಖದ ಕಟ್ಟೆಯೊಡೆಯಿತು. ಯಾವ ಸಂಸ್ಥೆಯನ್ನು, ಬಡವರು ಗುಳೆ ಏಳಬೇಕಾದ ಸಂದರ್ಭವೇ ಬಾರದಿರಲಿ ಎಂದು, ಎರಡೂವರೆ ದಶಕ ದುಡಿದು ಕಟ್ಟಿದ್ದೆನೋ, ಯಾವುದು ಪವಿತ್ರ ಆರ್ಥಿಕತೆಗೊಂದು ಗಟ್ಟಿ ಮಾದರಿಯಾಗತೊಡಗಿತ್ತೋ, ಅಂತಹ ಚರಕ ತನ್ನದೇನೂ ತಪ್ಪಿರದೆ ಮುಚ್ಚಿತ್ತು. ಇತ್ತ ಇಡೀ ದೇಶದ ಬಡವರು ಹಸಿದ ಹುಳುಗಳಂತೆ ಮೇಲೆದ್ದು ಹರಿದಾಡತೊಡಗಿದ್ದರು. ತಮ್ಮದಾದ ಯಾವುದೇ ತಪ್ಪಿರದ ಈ ದೇವರಮಕ್ಕಳಿಗೆ ಶಿಕ್ಷೆ ನೀಡುತ್ತಿರುವ ನಾವು ಪಾಪಿಗಳು ಅನ್ನಿಸಿತು. ಉಪವಾಸ ಕುಳಿತೆ.
-ಪ್ರಸನ್ನರಂಗಕರ್ಮಿ ಮತ್ತು ನಾಟಕಕಾರಗ್ರಾಮಸೇವಾಸಂಘ#SacredEconomy #Karonakuch#MonsterEconomy #GramSevaSangh 
www.gramsevasangh.or | Email ID: gramsevasanghindia@gmail.com | Mobile: 998004391

The Day of National Fasting-Friday, 10 April 2020

                Samaj Sevaks, constructive organizations and Gandhians from across the country have strongly felt the need to atone, at the time of this Corona Crisis, for the sins that we have committed against migrant workers. We are all jointly responsible for the utter neglect of the village poor during the last few decades, which made them migrate desperately to cities and live under sub-human conditions. On behalf of all the citizens and in continuation of our campaign #KaronaKuch, Gram Seva Sangh has decided to give this call for a national fast. The Fast shall begin on Friday, 10April 2020, at 6 am and end at 6 pm. On that day we shall fast from wherever we are. During the fast, we shall introspect and decide as to, how to undertake the difficult task of strengthening the village economy and village society in the days to come.

Kindly note! There shall be no public demonstration or public meetings or violations of the social distancing discipline during the entire period. Nobody need leave their house or their post of responsibility during the campaign. Kindly also note, that this fast is not against the government. We appreciate the efforts being done by the Government as also various other public institutions in this regard.

This fast is an atonement. We shall be grateful if people do not politicize it.


  • Gram Seva Sangh

www.gramsevasangh.org | Email ID: gramsevasanghindia@gmail.com | Mobile: 9980043911

Facebook : @gramsevasanghindia | Twitter : @gramsevasangha  | Insta: @gramsevasanghindia