ಪವಿತ್ರ ಆರ್ಥಿಕತೆಯನ್ನು ಉಳಿಸಲು ಗ್ರಾಮ ಸೇವಾ ಸಂಘದಿಂದ ಸತ್ಯಾಗ್ರಹ

ಗ್ರಾಮ ಸೇವಾ ಸಂಘವು ಇಂದು, ಸೆಪ್ಟೆಂಬರ್ 15, 2019 ರಂದು ಪವಿತ್ರ ಆರ್ಥಿಕಥೆಯ ಮೇಲಿನ ಸಂವಾದದಲ್ಲಿ ಇದೇ ಅಕ್ಟೋಬರ್ 2 ರಂದು ಉಪವಾಸದ ಮುಖಾಂತರ ಪವಿತ್ರ ಆರ್ಥಿಕತೆಯನ್ನು ಉಳಿಸಲು ಸತ್ಯಾಗ್ರಹವನ್ನು ಚಾಲನೆಮಾಡುವ ನಿರ್ಧಾರವನ್ನು ಕೈಗೊಂಡಿತು.
ನಾವು ಪವಿತ್ರವೆಂದು ಪರಿಗಣಿಸಿರುವ ಎಲ್ಲಾ ಕ್ಷೇತ್ರಗಳ ನ್ಯಾಯಯುತ ಬೇಡಿಕೆಗಳನ್ನು ಸತ್ಯಾಗ್ರಹದ ಮೂಲಕ ಸರ್ಕಾರದ ಮುಂದೆ ಇಡಲಿದ್ದೇವೆ. ನಾವು ಎಲ್ಲಾ ಸಂಘ ಸಂಸ್ಥೆ, ರಾಜಕೀಯ ಪಕ್ಷಗಳು ಹಾಗೂ ಎಲ್ಲಾ ಸಾಮಾಜಿಕ ಹಾಗೂ ಧಾರ್ಮಿಕ ನಾಯಕರನ್ನು ಉಪವಾಸದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಿದ್ದೇವೆ. ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹವು ಗಾಂಧೀ ಭವನದ ಪಕ್ಕದಲ್ಲಿರುವ ‘ವಲ್ಲಭ ನಿಕೇತನದಲ್ಲಿ’ ನಡೆಯಲಿದ್ದು, ಜೊತೆಗೆ ದೇಶದ ಇತರೆಡೆಗಳಲ್ಲೂ ಅಂದು ಸತ್ಯಾಗ್ರಹ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೋರಾಟಗಾರ ಹಾಗೂ ಗ್ರಾಮ ಸೇವಾ ಸಂಘದ ಮಾರ್ಗದರ್ಶಕರಾದ ಪ್ರಸನ್ನ, “ಇಂದು ಆರ್ಥಿಕತೆಯ ಬಿಕ್ಕಟ್ಟು ದೊಡ್ಡದ್ದಾಗಿದೆ. ಇದು ಒಳ್ಳೆಯದು, ಏಕೆಂದರೆ, ಇದು ನಮಗೆ ಪವಿತ್ರ ಆರ್ಥಿಕತೆ ಕಡೆಗೆ ಬದಲಾಗಬೇಕೆಂಬ ಸತ್ಯವನ್ನು ಹೇಳುತ್ತಿದೆ. ಇಂದು ಪವಿತ್ರ ಆರ್ಥಿಕತೆಯ ಬಗ್ಗೆ ಮಾತನಾಡಬೇಕಿದೆ, ಇಂದು ಕಾರ್ಮಿಕನನ್ನು ಹಾಗೂ ಪರಿಸರವನ್ನು ಕಾಪಾಡುವ ಬಗ್ಗೆ ಮಾತನಾಡಬೇಕಿದೆ. ಇಂದು ಭಾರತ ಹಿಂದೆಂದಿಗೂ ನೋಡದಂತಹ ಶಾಂತಿಯುತ ಹೋರಾಟವನ್ನು ಮಾಡಬೇಕಿದೆ. ಗಾಂಧಿಯನ್ನು ನಮ್ಮ ಅಜ್ಞಾನದಿಂದ ಕೊಂದಿದ್ದೇವೆ, ಇಂದು ನಮ್ಮ ಕ್ರಿಯೆಯ ಮೂಲಕ ಗಾಂಧಿಯನ್ನು ಜೀವಂತಗೊಳಿಸಲಿದ್ದೇವೆ.” ಎಂದು ಹೇಳಿದರು.

ಗಾರ್ಮೆಂಟ್ಸ್ ಮತ್ತು ಟೆಕ್ಸಟೈಲ್ ನೌಕರರ ಸಂಘದ ಅಧ್ಯಕ್ಷೆ, ಪ್ರತಿಭಾ ಆರ್ ಮಾತನಾಡಿ, 3 ರಿಂದ 4 ಲಕ್ಷ ಮಹಿಳೆಯರು ರಾಜ್ಯದಲ್ಲಿ ಕಳೆದ 40 ವರ್ಷದಿಂದ ಅತ್ಯಂತ ಕಡಿಮೆ ವೇತನದಲ್ಲಿ ಬಳಲುತ್ತಿದ್ದಾರೆ ಗಾರ್ಮೆಂಟ್ಸ್ ಕ್ಷೇತ್ರದಲ್ಲಿ. “ಯಾವ ಸರ್ಕಾರವು ಇಲ್ಲಿಯವರೆಗೆ ನಮ್ಮ ವೇತನದ ಸಮಸ್ಯೆಯ ಕಡೆಗೆ ಗಮನಹರಿಸಿದ್ದೆ ಇಲ್ಲ, ಎಂದು ಹೇಳಿದರು. ಈಗ ಆರ್ಥಿಕ ಬಿಕ್ಕಟ್ಟಿನಲ್ಲಿ ನಮ್ಮ ಪರಿಸ್ಥಿತಿ ಮತ್ತಷ್ಟು ಬಿಗಡಾಸಿದ್ದು, ಈಗ ನಮ್ಮ ವೇತನ ಹೆಚ್ಚಿಸುವ ಹೋರಾಟ ಮತ್ತಷ್ಟು ಹಿಂಬದಿಗೆ ಬಿದ್ದಿದೆ. ನಾವು ಮಾತ್ರ ಹೆಚ್ಚುತ್ತಿರುವ ಜೀವನೋಪಾಯದ ಖರ್ಚಿನಲ್ಲಿ, ಮತ್ತಷ್ಟು ಹೀನಸ್ಥಿತಿಯಲ್ಲೇ ಬದುಕು ದೂಡಬೇಕಿದೆ. ನಮ್ಮನ್ನು ಈ ಬಿಕ್ಕಟ್ಟಿನಿಂದ ಮುಕ್ತಗೊಳಿಸುವರು ಯಾರು ಇಲ್ಲ.”

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಖಜಾಂಚಿ, ಮಲ್ಲೇಶ್ ಮಾತನಾಡಿ, ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತ ಬರುತ್ತಿರುವ ಎಲ್ಲಾ ಸರಕಾರಗಳು ಅವರ ಶ್ರಮಕ್ಕೆ ತಕ್ಕ ಕನಿಷ್ಟ ವೇತನವನ್ನು ಖಾತ್ರಿಪಡಿಸುವಲ್ಲಿ ಸೋತಿವೆ ಎಂದರು. ಕಷ್ಟಪಟ್ಟು ಗ್ರಾಮೀಣ ಬಡವರು ಈಗ ವಿಧ್ಯಾಭ್ಯಾಸ ಪಡೆದು ಕೆಲಸ ಹುಡುಕ ಹೊರಟರೆ, ಅತ್ತ ಓದಿಗೆ ತಕ್ಕ ಕೆಲಸವೂ ಇಲ್ಲ. ಇನ್ನೊಂದೆಡೆ ಉದ್ಯೋಗ ಖಾತ್ರಿ ಯೋಜನೆಯ ವೇತನವನ್ನು ಸರಕಾರಗಳು ಹಲವು ತಿಂಗಳಿನಿಂದ ಬಾಕಿ ಉಳಿಸಿಕೊಂಡಿವೆ, ಎಂದರು.

ಪವಿತ್ರ ಆರ್ಥಿಕತೆ ಎಂದರೇನು?

ಪವಿತ್ರ ಆರ್ಥಿಕತೆ ಎಂದರೆ ಅತ್ಯಂತ ಕಡಿಮೆ ಹಣದ ಹೂಡಿಕೆ ಹಾಗೂ ಪರಿಸಕ್ಕೆ ಅತ್ಯಂತ ಕಡಿಮೆ ಹಾನಿಯುಂಟು ಮಾಡುವ ಮೂಲಕ ಅತ್ಯಂತ ಹೆಚ್ಚು ಜನರಿಗೆ ದುಡಿಮೆಯ ಮಾರ್ಗ ತೋರಿಸುವ ಎಲ್ಲಾ ಉತ್ಪಾದನಾ ವ್ಯವಸ್ಥೆ. ಈ ಸತ್ಯಾಗ್ರಹ ಕೈಉತ್ಪನಗಳಪರ, ಗಾರ್ಮೆಂಟ್ಸ್ ನೌಕರರಪರ, ಅಂಗನವಾಡಿ ನೌಕರರಪರ, ಪೌರಕಾರ್ಮಿಕರಪರ, ಸಣ್ಣ ವ್ಯಾಪಾರ ಹಾಗೂ ಮಾರಾಟ, ಸಣ್ಣ ಉತ್ಪಾದನೆ ಹಾಗೂ ಸೇವಾ ಕ್ಷೇತ್ರದವರಪರ.
ಪವಿತ್ರ ಆರ್ಥಿಕತೆ ದೇಶದ ಜಿ.ಡಿ.ಪಿ ಗೆ ಶೇಕಡ 70 ರಷ್ಟು ಕೊಡುಗೆನೀಡುತ್ತಿದೆ. ಈಗ ಬೀಳುತ್ತಿರುವ ಆರ್ಥಿಕತೆಯನ್ನು ಪವಿತ್ರ ಆರ್ಥಿಕತೆಗಳನ್ನು ಬಲಪಡಿಸುವ ಮೂಲಕ ಧನಾತ್ಮಕವಾಗಿ ಮಾಡಬಹುದಾಗಿದೆ.

ಗ್ರಾಮ ಸೇವಾ ಸಂಘ ಪವಿತ್ರ ಆರ್ಥಿಕತೆಯನ್ನು ಉಳಿಸುವ ಹಾಗೂ ಪಟ್ಟಣ ಹಾಗೂ ಗ್ರಾಮದ ನಡುವಿನ ಕಂದರವನ್ನು ಬೆಸೆಯುವ ಸೇತುವೆಯ ಕಾರ್ಯದಲ್ಲಿ ತೊಡಗಿರುವ ಸಂಘಟನೆಯಾಗಿದೆ. ಈ ಹಿಂದೆ ಸಂಘಟನೆಯು ಕೈಮಗ್ಗ ನೇಕಾರರ ಬವಣೆಯನ್ನು ಮುನ್ನೆಲೆಗೆತರುವಲ್ಲಿ ಹಾಗೂ ಕೈಉತ್ಪನ್ನಗಳ ಮೇಲಿನ ಸರಕು ಹಾಗೂ ಸೇವಾ ತೆರಿಗೆಯನ್ನು ಶೂನ್ಯಗೊಳಿಸುವಂತೆ “ಕರನಿರಾಕರಣೆ ಸತ್ಯಾಗ್ರಹ”ದ ಮೂಲಕ ದೇಶದ ಗಮನವನ್ನು ಸೆಳೆದಿದೆ.

ಇಂದಿನ ಸಭೆಯ ಭಾವಚಿತ್ರಗಳನ್ನು ಲಗತ್ತಿಸಲಾಗಿದೆ: (ಎಡದಿಂದ ಬಲಕ್ಕೆ) : ಗೋಪಿ ಕೃಷ್ಣ, ವಿನ್ಯಾಸಕರು, ಪ್ರತಿಭಾ ಆರ್, ಅಧ್ಯಕ್ಷೆ, ಗಾರ್ಮೆಂಟ್ಸ್ ನೌಕರರ ಸಂಘ, ಚೊಕ್ಕಲಿಂಗಮ್, ಉಪಾಧ್ಯಕ್ಷರು, ಗ್ರಾಮ ಸೇವಾ ಸಂಘ, ಪ್ರಸನ್ನ, ರಂಗಕರ್ಮಿ, ಹೋರಾಟಗಾರರು, ಲೀಲಾವತಿ, ಉಪಾಧ್ಯಕ್ಷರು, ಎ.ಐ.ಸಿ.ಟಿ.ಯು (ಅಂಗನವಾಡಿ ನೌಕರರ ಸಂಘ), ವೆಂಕಟನಾಥನ್, ಆರ್.ಬಿ.ಅಯ್, ಮಾಜಿ ನೌಕರರು, ಮಲ್ಲೇಶ್, ಖಜಾಂಚಿ, ಗ್ರಾಕೂಸ್, ಎಸ್. ಬಾಬು, ಅಧ್ಯಕ್ಷರು, ಬೀದಿ ಬದಿ ವ್ಯಾಪಾರಿಗಳ ಸಂಘ

ಗ್ರಾಮ ಸೇವಾ ಸಂಘ (Gram Seva Sangh)
Address: Flat #102, Shesha Nivas, 1st Block, 1st Main,
Thyagarajanagar, Bengaluru-560028
Facebook.com/graamasevasangha | @gramasevasangha
Mobile: 9980043911 | www.gramsevasangh.org

Satyagraha on Sacred Economy

Press release and Detailed Report:

Date: Sept 15, 2019

 Gram Seva Sangh at a discourse on Sacred Economy held on Sunday, September 15 at Gandhi Bhavan has taken a resolution to launch a satyagraha through fasting from Oct 2, 2019.

We have resolved that legitimate demands of all sectors that we term as sacred will be placed before the government through the satyagraha. We invite all organizations, political parties and all social and religious leaders to join us in fasting. The satyagraha in Bengaluru will be held at Vallabh Niketan, next to Gandhi Bhavan and at other places in the country simultaneously.

Speaking at the event noted Theatre activist and Gram Seva Sangh mentor Prasanna said, “Today, the economic crisis is looking large. We say it is a good thing because we are being told to shift to a sacred economy until now.  Today we have to talk about sacred economies and talk about labour and environment and its protection. We will have the largest peaceful movement India has ever had. Gandhi was killed by ignorance, we will revive him through action.”

Prathibha R from GATWU (Garments and Textile workers union) said that around 3 to 4 lakh women were toiling in the garment sector for measly wages for the last forty years “No government has ever bothered to address our wage issue in all these years. Now with the economic crisis looming we are in a more serious situation as we are unsure whether it is alright to seek a raise. So we go on once again adjusting poor wages to increasing cost of living. Nobody is going to bail us out.”

Mallesh of Grakoos (Grameena Kooli Karmikara Sanghatane) spoke about successive governments speak about empowerment of women, but none had ensured that they receive wages commensurate with their hardwork. Now children from villages are finally getting an education but there are no jobs. Even wages under MGNREGA are being held up and are not released for long periods of time, he said.

What is sacred economy?

All systems of production that give maximum number of jobs with minimum investment and minimum loss to the environment are sacred economies. This sataygraha is on behalf of handmade sectors and sectors such as garment making, anganwadi workers, municipal workers, small traders and vendors, small manufacturers and service sectors.

Sacred economies contribute 70 percent to the GDP.  The collapse in the present economy can be made positive only if we strengthen the sacred economies.

Gram Seva Sangh is an organisation working towards restoring sacred economy and also bridging the urban-village divide.

The organisation has previously worked towards highlighting the struggle of handloom weavers and also brought national attention on removal of Goods and Services Tax (GST) on handmade products.

Detailed Report of Discourse is mentioned below:

Prasanna, Activist, Mentor of Gram Seva Sangh

What is sacred economy? It is an economy of sustenance. In the present context, there is a fissure between sacred and economic. We have relegated sacred to the kitchen and we have put economy in the public sphere. Free from all restrictions and beyond any restraint in the economic sphere. The way we are buying and consuming more is unprecedented. Fifty per cent of women are at home and the men are going out to earn. This is the economy we are pushing. We are all responsible for what is happening today. We have to bring these two together began after 70 years and save our people.

Sacred economy is an economy that practices harmony. It protects the jobs of people whether they are working people, village people or factory workers. It is our responsibility as well as the responsibility of the government, irregardless of the political party to protect their jobs.

Today we are going to go a step ahead and talk about labour .Anything that supports labour and environment is sacred.

Today the economic crisis is looming. News papers, media, politicians and ministers  are all worried, but it is a good thing. God has sent this thing to tell us to shift to a sacred economy. Stop growing cities, manufacturing cars and bailing out banks. This is taxpayers money. It should be spent on the poor and those who need it. Today, the economic truth and the God’s truth say the same thing. Science and priests agree on the same thing.

This is going to be the largest peaceful sacred movement India has ever had. Gandhiji started this movement and was killed. Today we are going to take up where he left off finish it and then revive Gandhi through action.

……………………………………………………………………………………….

Ravi Kiran, Founder, Metaphor Racha

Lot of people have different ideas about what is sacred. I have been a khadi enthusiast for a while now. Both in terms of khadi as commodity and spirit. Sacred economy is what brings people together, has a healthy distribution of wealth and debunks the popular notion that endless production and reckless consumption can keep the economy moving and this is not true. The diversity of khadi is interdependency of the spinner, the weaver and others.

———————————————————————————————————

Pavitra Muddaiah, Handloom activist

When you see success stories, that is what makes it sacred, because it is a holistic journey. Handloom offers us all the benefits, dignity, working at your own pace and at the same time not putting your hand out for a dole, but using your hands to empower yourself and have a respectable livelihood. That is something that is very important because today, dignity and pride is very important and that is the bedrock on which a craftsman or an artisan works for. Today I am training the second generation. They study engineering and MBA and when you show them the economic viability of our model and ask why they want to be an non entity in the city, they come back and it feels like a great achievement.

——————————————————————————————————–

Father Alwyn Serao, Principal, Padua College, Mangaluru

If our villages are self sufficient, then our nation will be self sufficient is what Gandhiji felt.. Even though Mangaluru has seen the entry of big companies in the recent years, people are unhappy as not everyone is able to get jobs. Instead, if you become self sufficient and like Gandhiji said you will have everything you need and not your greed. We are putting forward this thinking through theatre.  Those who are with us in the process of learning theatre change. And it’s a tremendous change. We cannot change all the audience, but we can change some of them. Theatre is very strong medium through which we can bring change.

———————————————————————————————————-

Leelavathi, Vice President, CITU and Anganwadi Workers Union

Anganwadi workers have been working for the last 35 years for very low wages. They are working for social upliftment by taking care of children from 3-6 years of age but are living under very difficult conditions. The governments speak of women empowerment in all sectors, but the decision to start kindergarten classes in government schools have placed our employment at risk,. Small scale industries have 60 percent women and anganwadis consist of only women . Women have contributed substantially to this nation, but there are no policies to help us eke out a decent living and government is busy bailing out corporations and banks.

———————————————————————————————————-

Venkatanathan, RBI Ex Employee and Gram Seva Sangh Mentor

The economy that we have pursued since Independence was initially good as it focussed on the needs of the country. But unfortunately, new liberal policies have been pushing us towards producing more and towards a market economy. All over the country, the focus is more towards mass production.

Today, there is need to prepare our future generations towards self sustainability. The economic crisis is so deep,  Akshaya Patra served a notice to the NGO I work with, saying their donations have come down and they will not be able to supply food. It is not just us, but several other organizations they were stopping their supply to. You can imagine the impact of this crisis, unfortunately the government refuses to recognize this and is shifting their focus to something else.

———————————————————————————————————-

S Babu President, Bengaluru District Street Vendors Association

I have been a street vendor for the last 20 years and we have contributed immensely to the economy, but the government does not want to recognize us. We have invested in our small business without taking any help from the government. We might not be contributing directly, but we do so indirectly and yet the government refuses to create any facilities for us. Whether it is our sector or any other small sector, if we want to borrow money,  then they dredge up hundreds of laws. This refusal to identify as contributors to the economy is hurting us and our businesses.

———————————————————————————————————-

Mallesh of Grakoos (Grameena Kooli Karmikara Sanghatane) spoke about successive governments speak about empowerment of women, but none had ensured that they receive wages commensurate with their hardwork. Now children from villages are finally getting an education but there are no jobs. Even wages under MGNREGA are being held up and are not released for long periods of time, he said.

———————————————————————————————————-

Gopi Krishna, Designer and Activist, working nomadic tribes and their craft

We must promote small scale cottage industries. In the social economic system that we had before, they were not focussed on how much tax should be levied on a product, but on the expenditure incurred in manufacturing it. The needs of a village, whatever products they required was manufactured in the village itself. There was no policy of wastage either. Raw material was used and any leftovers was passed on to someone else in the village who might use it. This system would also provided pride and dignity.

———————————————————————————————————-

Gayathri, Leading the Rainfed Farmers Organization ICRA

Today, there are two types of farming. One type depends on use of excess water, excess investment and over exploitation of soil. Another type protects the soil, relies on materials available at home to cultivate and vary their crops. Small farmers have stronger traditions in practicing sustainable agriculture. Their long standing practices allows them to live close to nature. The government is discouraging small farmers saying that their practices are not good and are best left to large land holding farmers who use machines to cultivate their land. Unlike large farmers who are dependent on machines, small farmers form groups and take care of all activities on the land themselves. The equipment they use are made by them. Their knowledge is so vast, they know how to protect seeds, how to protect their crops if rain fails and they are prepared for many contingencies.

———————————————————————————————————

T B Dinesh, Founder of Crafter Space and Janastu

Sacred is the act of what is good for the community and how the community contributes. The  creativity in all of us through education is a form of enslaving through textual education and we all become rakshasas and slaves of corporate industry. In the form of democratization of knowledge, we send our kids enthusiastically and emphatically, for an education which is all about distancing themselves from their neighbourhood. At a tribal conference I recently attended, the vigour in the communities was so high and they spoke in one voice that this was not the sort of education they wanted and what this education does to the whole tribal space. At Crafter Space, we are looking at what education technology and communication technology where we are now and what decentralization means in this context. Our education is important, but if this creates a wall between ‘us’ and ‘them,’  then we have to think about how to make this technology available to all. We are looking at how technology can be accessed by someone without being educated. After 500 years of textual education, we have distanced more people. So we are looking at available technology, what decentralization means and how can machines become smaller and available to all.

Gram Seva Sangh

Address: Flat #102, Shesha Nivas, 1st Block, 1st Main, Thyagarajanagar, Bengaluru-560028

Facebook.com/graamasevasangha | @gramasevasangha

Mobile: 9980043911 |  www.gramsevasangh.org

ರಾಕ್ಷಸ ಆರ್ಥಿಕತೆಯನ್ನು ಮಣಿಸಿರಿ – ಪ್ರಸನ್ನ

ರಾಕ್ಷಸ ಆರ್ಥಿಕತೆಯೆಂದು ಇಂದಿನ ವ್ಯವಸ್ಥೆಯನ್ನು ನಾನು ಕರೆದಾಗ ಅದು ನಿಮಗೆ ಬೈಗುಳದಂತೆ ಕೆಳಿಸುವುದು ಖಂಡಿತ. ಬೈಗುಳವಲ್ಲ ಇದು, ಒಂದು ವಾಸ್ತವಿಕ ಚಿತ್ರಣ. ಇಂದಿನ ಆರ್ಥಿಕತೆಯು ತನ್ನ ಗಾತ್ರ ಹಾಗೂ ಗುಣ ಎರಡರಲ್ಲೂ ರಾಕ್ಷಸವೇ ಹೌದು. ನಿವೇ ನೋಡಿ! ವಿಶ್ವವನ್ನೇ ಆವರಿಸಿಕೊಂಡಿದೆ ಇದು. ರಾಷ್ಟ್ರಗಳ ಗಡಿಗಳನ್ನೇ ಅಳಿಸಿ ಹಾಕಿದೆ ಇದು. ಸಮುದಾಯಗಳು ಸಂಸ್ಕøತಿಗಳು ಮಾತೃಭಾಷೆಗಳು ಜನಾಂಗಗಳು ನದಿ ಬೆಟ್ಟ ಕಾಡುಗಳನ್ನು ಅಳಿಸಿಹಾಕಿದೆ ಇದು. ಪುರುಷನನ್ನು ಪ್ರಕೃತಿಯಿಂದ ಪ್ರತ್ಯೇಕಿಸಿ ಏಕಾಂಗಿಯಾಗಿಸಿದೆ ಇದು, ಸಮುದಾಯ ಪ್ರಜ್ಞೆ ಸಹಕಾರ ಗುಣ ಇತ್ಯಾದಿಯಾಗಿ, ಯಾವುದನ್ನು ನಾವು ಮನುಷ್ಯತ್ವ ಅಥವಾ ಮಾನವ ಧರ್ಮ ಎಂದು ಕರೆಯುತ್ತೇವೆಯೋ ಅದೆಲ್ಲವನ್ನೂ ಅಳಿಸಿಹಾಕಿದೆ ಇದು. ಸ್ಪರ್ಧಾತ್ಮಕತೆ, ಹಿಂಸೆ, ಅಸಹನೆ, ಧಾರ್ಮಿಕ ಅಸಹಿಷ್ಣುತೆ ಹಾಗೂ ಶ್ರೀಮಂತಿಕೆಯ ಅಟ್ಟಹಾಸಗಳನ್ನು ಸಾರ್ವತ್ರಿಕಗೊಳಿಸಿದೆ ಈ ರಾಕ್ಷಸ ಆರ್ಥಿಕತೆ.

ಈಗ ಸೋಲತೊಡಗಿದೆ ಇದು. ಮಾತ್ರವಲ್ಲ, ನಮ್ಮನ್ನೂ ಸೋಲಿಸತೊಡಗಿದೆ. ದಸರೆಯ ಕಡೆಯ ದಿನ ಉತ್ತರ ಭಾರತದ ಜನ, ರಾಮನ ಗೆಲುವನ್ನು ಸಂಭ್ರಮಿಸುತ್ತ, ರಾವಣನ ಪ್ರತಿಕೃತಿಯನ್ನು ದಹಿಸುವಾಗ ಅದು ಹೇಗೆ ಸುತ್ತಲು ಉದುರಿ ಬೀಳುತ್ತದೆಯೋ ಹಾಗೆಯೇ ಇದೂ ಕೂಡ ಉದುರಿ ಬೀಳತೊಡಗಿದೆ ನಮ್ಮ ಸುತ್ತ ಮುತ್ತ, ನಮ್ಮ ತಲೆಗಳ ಮೆಲೆ. ಇದರ ಹತ್ತುಹಲವಾರು ಶಿರಸ್ಸುಗಳು ಶಿರಸ್ತ್ರಾಣಗಳು ಗುರಾಣಿ ಕತ್ತಿ ಕಯ್ಯಿ ಕಾಲುಗಳು, ನಮ್ಮ ಮೇಲೆ ಬೀಳತೊಡಗಿದೆ. ಆದರೂ, ನಾವು ರಾಮಭಕ್ತರಾದರೂ, ದಸರೆಯ ಹಬ್ಬ ಆಚರಿಸಲು ಹಿಂಜರಿಯುತ್ತಿದ್ದೇವೆ. ರಾಕ್ಷಸನನ್ನು ಬದುಕಿಸುವ ಕಳ್ಳಯತ್ನ ಮಾಡುತ್ತಿದ್ದೇವೆ.

ಈ ಉದಾಹರಣೆ ನೋಡಿ! ಮಂತ್ರಿಗಳು ಹಾಗೂ ಸರಕಾರಿ ಅಧಿಕಾರಿಗಳಿಗಾಗಿ, ತೆರಿಗೆದಾರರ ಹಣದಿಂದ ಕಾರುಗಳನ್ನು ಕೊಂಡು ಆಟೋಮೊಬೈಲ್ ಕೈಗಾರಿಕೆಗಳನ್ನು ಉಳಿಸುವ ಮಾತನ್ನಾಡುತ್ತಿದೆ ಕೇಂದ್ರ ಸರಕಾರ. ಅಥವಾ ಬ್ಯಾಂಕುಗಳು, ಭಾರಿ ಕಳ್ಳಕುಳಗಳಿಗಾಗಿ ಕ್ರಮ ಮೀರಿ ಸಾಲಕೊಟ್ಟು, ವಸೂಲಿ ಮಾಡಲಾಗದೆ ಕೈಸುಟ್ಟುಕೊಂಡಾಗ, ಅವರನ್ನು ಕ್ಷಮಿಸಿ, ಮತ್ತೆ ಸಾಲ ನೀಡಲೆಂದು ಮತ್ತಷ್ಟು ಹಣ ನೀಡುತ್ತಿದೆ ಕೇಂದ್ರ ಸರಕಾರ. ಇದನ್ನು ರಾಮಭಕ್ತಿ ಎನ್ನುತ್ತಿರೋ ರಾವಣಭಕ್ತಿ ಎನ್ನುತ್ತಿರೋ?

ರಾಕ್ಷಸ ಆರ್ಥಿಕತೆಯನ್ನು ಈ ಹಿಂದೆ ಕೊಂದವನು ರಾಮ. ರಾಮನೊಟ್ಟಿಗೆ ಅಂದು, ಕಪಿಸೇನೆ ಕರಡಿ ಮುದಿಗೃದ್ರ ಇಣಚಿ ನದಿಬೆಟ್ಟ ನೀರುಗಳೂ ಸೇರಿ ಯುದ್ಧಸಾರಿದ್ದವು. ಆಶ್ರಮಗಳು ಆಶ್ರಮವಾಸಿಗಳು ಗುಡ್ಡಗಾಡುಜನರು ರೈತರು ಹಾಗೂ ಕುಶಲಕರ್ಮಿಗಳ ಪರವಾಗಿ ನಡೆದಿತ್ತು ಯುದ್ಧ. ಇಂದಿನ ಯುದ್ಧವು, ರಾಮನ ಹೆಸರಿನಲ್ಲಿ ಕಾರುಗಳು ಕಾರಖಾನೆಗಳು ಹಾಗೂ ಲಂಕೆಯಂತಹ ಸ್ಮಾರ್ಟ ನಗರಗಳ ಪರವಾಗಿ ನಡೆದಿದೆ. ಕಪಿ ಕರಡಿ ಮುದಿಗೃದ್ರಗಳಿರಲಿ, ಪಾಪ ಮನುಷ್ಯರೂ ಸಹ ರಾಮ ರಾಮಾ ಎನ್ನಬೇಕಾಗಿದೆ ಹತಾಶೆಯಿಂದ.

ನಮಗಿಂದು ಖಂಡಿತವಾಗಿ ಬೇಕಿದೆ ಪವಿತ್ರ ಆರ್ಥಿಕತೆ. ನಮಗೆ ಗಾಂಧೀಜಿü ಬೇಡದಿರಲಿ ರಾಮ ಬೇಡದಿರಲಿ ಪವಿತ್ರ ಆರ್ಥಿಕತೆ ಬೇಕಿದೆ. ಪವಿತ್ರ ಆರ್ಥಿಕತೆಯೆಂದರೆ ಎಡಪಂಥೀಯರು ಸಿಡಿಯುತ್ತಾರೆ ತಿಳಿದಿದೆ ನನಗೆ. ಸಂಯಮವಿರಲಿ. ಪವಿತ್ರ ಆರ್ಥಿಕತೆ ಎಂದರೆ ಸಂಯಮದ ಆರ್ಥಿಕತೆಯೇ ಸರಿ. ಹಳೆಯ ರಾಮಭಕ್ತರು ಇದನ್ನು ರಾಮರಾಜ್ಯ ಎಂದು ಕರೆದರು. ಹಳೆಯ ಬಸವಭಕ್ತರು ಇದನ್ನು ಕಾಯಕದಧರ್ಮ ಎಂದು ಕರೆದರು, ಹಳೆಯ ಬುದ್ಧಭಕ್ತರು ಇದನ್ನು ಮಧ್ಯಮಮಾರ್ಗ ಎಂದು ಕರೆದರು, ಇತ್ಯಾದಿ. ಆದರೆ ಪೂಜಾರಿಗಳು ಮಾತ್ರ ಜನಿವಾರ ತೊಡಿಸಿದರೆ ಸಾಕು, ಎಲ್ಲ ಆರ್ಥಿಕತೆಯೂ ಪವಿತ್ರವಾಗುತ್ತದೆ ಎಂದರು. ಅಥವಾ ಶಿವದಾರ ಅಥವಾ ಶಿಲುಬೆ.

ತಮಾಷೆಯೆಂದರೆ ಜನಿವಾರವೂ ಸಹ ಶ್ರಮದಿಂದಲೇ ತಯಾರಾದದ್ದು. ತೊಡುವವರನ್ನು ಕೇಳಿ, ಹೇಳುತ್ತಾರೆ, ತಾವೇ ಹತ್ತಿ ಕಿತ್ತಿತಂದು, ತಾವೇ ಬಿಡಿಸಿ, ತಾವೇ ಸ್ವಚ್ಛಗೊಳಿಸಿ, ತಮ್ಮದೇ ಕೈಗಳಿಂದ ನೂತು, ತಾವೇ ದರಿಸುತ್ತಾರೆ ಜನಿವಾರವನ್ನು. ಗಾಂಧೀಜಿ ಇದೇ ಪವಿತ್ರ ದಾರವನ್ನು ಕೈಮಗ್ಗದಲ್ಲಿ ನೇಯಿಸಿ ಎಲ್ಲರ ಬತ್ತಲನ್ನೂ ಮುಚ್ಚಿ, ಎಲ್ಲರನ್ನೂ ಪವಿತ್ರವಾಗಿಸಿದ್ದರು. ಗಾಂಧೀಜಿ ನಂತರ ಕಾಂಗ್ರೆಸ್ಸಿಗರು ಮತ್ತದೇ ಹಳೆಯಚಾಳಿಗೆ ಬಿದ್ದರು, ಖಾದಿಟೊಪ್ಪಿಗೆಯನ್ನು ಜನಿವಾರದಂತೆಯೇ ಪ್ರತ್ಯೇಕಿಸಿ ತಾವು ಧರಿಸಿದರು. ಬಡಜನರ ಬತ್ತಲನ್ನು ಮರೆತರು. ಈಗ ರಾಮಭಕ್ತರು ರಾಕ್ಷಸಆರ್ಥಿಕತೆಯ ಸೂಟಿನ ಮೇಲೆ ಜನಿವಾರ ತೊಡಿಸಿದ್ದಾರೆ. ಧರ್ಮ ಬೇರೆ ಆರ್ಥಿಕತೆ ಬೇರೆ ಎಂದು ಪ್ರತ್ಯೇಕಿಸಿದ್ದಾರೆ. ಧರ್ಮಕ್ಕೆ ಸಲ್ಲುವ ಸಂಯಮವು ಆರ್ಥಿಕತೆಗೆ ಸಲ್ಲುವುದಿಲ್ಲ ಎಂದಿದ್ದಾರೆ! ಅಲ್ಲಿ ಉಪವಾಸ ಮಾಡಿ, ಇಲ್ಲಿ ಸ್ವೇಚ್ಛಾಚಾರ ಮಾಡಿ ಎಂದಿದ್ದಾರೆ. ಉಳ್ಳವರ ಸ್ವೇಚ್ಛಾಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಅಷ್ಟೆ, ಇಬ್ಬರೂ.

ಇವರಿಬ್ಬರ ಆರ್ಥಶಾಸ್ತ್ರದಲ್ಲೂ ಸಂಯಮಕ್ಕೆ ಸ್ಥಳವಿಲ್ಲ. ಮನಮೋಹನ ಸಿಂಹರಿರಲಿ ನಿರ್ಮಲ ಸೀತಾರಾಮರಿರಲಿ ಇಬ್ಬರೂ ಸ್ವೇಚ್ಚಾಚಾರಿ ಆರ್ಥಿಕತೆಯ ಬೆಂಬಲಿಗರೇ ಸರಿ. ಉತ್ಪಾದನೆ ಹೆಚ್ಚಿಸು, ಬಳಕೆ ಹೆಚ್ಚುತ್ತದೆ, ಬಳಕೆ ಹೆಚ್ಚಿದರೆ ಲಾಭದಾಯಕತೆ ಹೆಚ್ಚುತ್ತದೆ ಎಂದೇ ಹೇಳುತ್ತಾರೆ ಇಬ್ಬರೂ. ಇಲ್ಲದ ಬೇಡಿಕೆಯ ಮೇಲೆ ನಿಂತಿದ್ದಾರಾದ್ದರಿಂದ, ಉತ್ಪಾದಿಸಿ ಉತ್ಪಾದಿಸಿ ಉರುಳಿಬಿದ್ದಿದೆ ಇಬ್ಬರದ್ದೂ ಶಾಸ್ತ್ರ. ಸ್ವಯಂಚಾಲಿತಯಂತ್ರ ಸಿಕ್ಕಿದೆಯೆಂದು ಸಂಯಮವಿಲ್ಲದೆ ಉತ್ಪಾದಿಸುತ್ತ ಹೋದರೆ ಲಾಭಬಡುಕ ಉದ್ಯಮಿಗಳಿಗೆ ಹಾಗೂ ಲಾಭಬಡುಕ ಸರಕಾರಗಳಿಗೆ ಲಾಭವೇ ಹೊರತು ಮನುಷ್ಯರಿಗಲ್ಲ. ಎಷ್ಟೆಂದು ಕೊಂಡಾನು ಹೇಳಿ ಮಾನವ. ಮನುಷ್ಯರೇ ಇರದೆ ಉತ್ಪಾದನೆ ಮಾಡಿದರೆ ಮಾಲಿಕನಿಗೆ ಲಾಭ ಖಂಡಿತ. ಅಥವಾ ಶೇರುದಾರನಿಗೆ ಖಂಡಿತ. ಮನುಕುಲವನ್ನೇ ಶೇರುದಾರರನ್ನಾಗಿಸಿ ಶ್ರೀಮಂತರನ್ನಾಗಿಸುತ್ತೇವೆ ಎಂದು ಸುಳ್ಳು ಹೇಳಿದರು ಇಬ್ಬರೂ. ಈಗ ಶೇರು ಪೇಟೆಗಳೇ ದಿವಾಳಿಯಾಗುತ್ತಿವೆ.

ಪವಿತ್ರ ಆರ್ಥಿಕತೆಯೆಂದರೆ ಅತ್ಯಂತ ಕಡಿಮೆ ಹೂಡಿಕೆಮಾಡಿ ಅತ್ಯಂತ ಹೆಚ್ಚು ಜನರಿಗೆ ದುಡಿಮೆಯ ಮಾರ್ಗ ತೋರಿಸುವ ವ್ಯವಸ್ಥೆ. ಹಣದ ಕಡಿಮೆ ಹೂಡಿಕೆಯೂ ಹೌದು, ಪ್ರಕೃತಿಯ ಕಡಿಮೆ ಹೂಡಿಕೆಯೂ ಹೌದು. ಇವೆರಡೂ ಹೂಡಿಕೆ ಕಡಿಮೆಯಾದಷ್ಟೂ ಪ್ರಕೃತಿಗೆ ಒಳ್ಳೆಯದು, ಪುರುಷನಿಗೂ ಒಳ್ಳೆಯದು. ಹೂಡಿಕೆ ಕಡಿಮೆಯಾದದ್ದರಿಂದ ಹಣದ ಲಾಭ ಕಡಿಮೆ ಈ ಆರ್ಥಿಕತೆಯಲ್ಲಿ. ಆದರೆ ಪರಿಸರದ ಲಾಭ ಸಮಾಜದ ಲಾಭ ಹಾಗೂ ಸಂಸ್ಕøತಿಯ ಲಾಭ ಹೆಚ್ಚು. ಪವಿತ್ರವಾದದ್ದು ಕಷ್ಟಕರವಾದದ್ದೂ ಹೌದು. ಸುಲಭದ ದುಡಿಮೆಗೆ ಒಗ್ಗಿಕೊಂಡು ಮೈಗಳ್ಳರಾಗಿರುವ ನಮಗೆ, ಕಷ್ಟ ಕಷ್ಟ. ಆದರೆ ಬೇರೆ ದಾರಿಯಿಲ್ಲ.

ಪಾವಿತ್ರ್ಯದ ಮತ್ತೊಂದು ಉದಾಹರಣೆ ನೀಡಿ ಲೇಖನ ಮುಗಿಸುತ್ತೇನೆ. ಅದುವೆ ತೀರ್ಥ. ಮಂದಿರಗಳಲ್ಲಿ, ಬೆಳ್ಳಿಯ ಚಮಚದಿಂದ ಬೊಗಸೆಗೆ ಎಸೆಯಲ್ಪಡುವ ನೀರು, ಅರ್ಥಾತ್ ನದಿಯನೀರು ತೀರ್ಥ. ಗಂಗೆಯೂ ಆದೀತು ಯಮುನೆಯೂ ಆದೀತು ಗೋದಾವರಿ ಕೃಷ್ಣೆ ಕಾವೇರಿ ತುಂಗೆ ಯಾವುದೂ ಆದೀತು. ನದಿಯ ನೀರಿನ ಪಾವಿತ್ರ್ಯ, ಮೃಗದ ಮೂತ್ರದಿಂದ ಕೆಡುವುದಿಲ್ಲ ಅಥವಾ ದಲಿತ ಮಿಂದದ್ದರಿಂದ ಕೆಡುವುದಿಲ್ಲ. ಆದರೆ, ಕಾರಖಾನೆಗಳು ಮೂತ್ರಿಸಿದಾಗ ಖಂಡಿತವಾಗಿ ಕೆಡುತ್ತದೆ. ಒಟ್ಟು ಕತೆಯ ನೀತಿಯೆಂದರೆ, ಶ್ರಮ ಹಾಗೂ ಶ್ರಮಜೀವಿಗಳು ಖಂಡಿತವಾಗಿ ನಮ್ಮ ನಿಮ್ಮ ಪಾವಿತ್ರ್ಯ ಕೆಡಿಸುವುದಿಲ್ಲ. ಕಾರಖಾನೆಗಳು ಕೆಡಿಸುತ್ತವೆ.

ಎಲ್ಲರೂ ಸೇರಿ ಪವಿತ್ರರಾಗೋಣ ಬನ್ನಿ. ಕಾರಖಾನೆಗಳ ಅಪವಿತ್ರಮೂತ್ರವು ನದಿಗಳಿಗೆ ಹರಿಯದಂತೆ ತಡೆಯೊಣ ಬನ್ನಿ. ಪವಿತ್ರವಾದದನ್ನು, ಬೆಳೆಯೋಣ, ನೇಯೋಣ, ಕೊಳ್ಳೋಣ, ಬನ್ನಿ. ಕೊಂಡರೂ, ಹಿತಮಿತವಾಗಿ ಕೊಳ್ಳೋಣ ಬನ್ನಿ. ಇದನ್ನು ನಮಗೆ ಮನಮೋಹನ ಸಿಂಗರೂ ಹೇಳುವುದಿಲ್ಲ ನಿರ್ಮಲ ಸೀತಾರಾಮರೂ ಹೇಳುವುದಿಲ್ಲ. ಹೇಳಲಾರರು ಅವರು. ನರೇಂದ್ರ ಮೋದಿಯವರಂತೂ ಹೇಳುವ ಆಸಕ್ತಿ ಸಹ ತೋರಿಸುತ್ತಿಲ್ಲ. ಚಂದನತ್ತ ನೋಡುತ್ತ ಮುಗುಳು ನಗುತ್ತ ಅಥವಾ ಅತ್ತ ಶಿವನ ಕಣ್ಣೊರೆಸುತ್ತ, ಸುತ್ತಲ ಪ್ರಪಂಚ ಮರೆತು, ಕುಳಿತು ಬಿಟ್ಟಿದ್ದಾರೆ. ರಾಮ ರಾಮಾ!

ಪ್ರಸನ್ನ

09/09/2019

ಶ್ರಮಜೀವಿ ಆಶ್ರಮ, ಹೆಗ್ಗೋಡು-577 417

ಪವಿತ್ರ ಆರ್ಥಿಕತೆ

ಒಂದು ಸಂವಾದ

ಭಾನುವಾರ, 15ನೇ ಸೆಪ್ಟೆಂಬರ್ 2019, ಬೆಳಗ್ಗೆ 10:30 – ಮಧ್ಯಾಹ್ನ 2

ಕಸ್ತೂರಿಬಾ ಸಭಾಂಗಣ, ಗಾಂಧಿ ಭವನ, ಬೆಂಗಳೂರು -01

ಗ್ರಾಮ ಸೇವಾ ಸಂಘವು ಪವಿತ್ರ ಆರ್ಥಿಕತೆಯನ್ನು ಉಳಿಸಲು ಸತ್ಯಾಗ್ರಹವನ್ನು ಪ್ರಾರಂಭಿಸಲಿದೆ. ಪವಿತ್ರ ಆರ್ಥಿಕತೆಯೆಂದರೆ ಅತ್ಯಂತ ಕಡಿಮೆ ಹೂಡಿಕೆಮಾಡಿ ಅತ್ಯಂತ ಹೆಚ್ಚು ಜನರಿಗೆ ದುಡಿಮೆಯ ಮಾರ್ಗ ತೋರಿಸುವ ಉತ್ಪಾದನಾ ವ್ಯವಸ್ಥೆ. ಕಡಿಮೆ ಹೂಡಿಕೆ ಎಂದಾಗ, ಹಣದ ಕಡಿಮೆ ಹೂಡಿಕೆಯೂ ಹೌದು, ಪ್ರಕೃತಿಯ ಕಡಿಮೆ ಹೂಡಿಕೆಯೂ ಹೌದು. ಇವೆರಡೂ ಕಡಿಮೆ ಇದ್ದಷ್ಟೂ ಒಳ್ಳೆಯದು ಹೌದು. ಪ್ರಕೃತಿಗೂ ಒಳ್ಳೆಯದು ಪುರುಷನಿಗೂ ಒಳ್ಳೆಯದು.

ಸೋಲುತ್ತಿರುವ ರಾಕ್ಷಸ ಆರ್ಥಿಕತೆ

                ಇಂದು ಮೇಲುಗೈ ಸಾಧಿಸಿರುವ ಆರ್ಥಿಕತೆ ಪವಿತ್ರ ಆರ್ಥಿಕತೆಗೆ ವಿರುದ್ಧವಾದದ್ದು. ಅದು ರಾಕ್ಷಸ ಆರ್ಥಿಕತೆ, ಹೌದು, ತನ್ನ ಗುಣ ಹಾಗೂ ಗಾತ್ರ ಎರಡರಲ್ಲೂ, ಅದು ರಾಕ್ಷಸಿ. ಅದು ಇಂದು ಸೋಲುತ್ತಿದೆ. ಜೊತೆಗೆ ಸುತ್ತಲಿನ ವಾತಾವರಣವನ್ನು ತನ್ನೆಡೆಗೆ ಮಾತ್ರ ಕರೆದ್ದೊಯ್ಯುತ್ತಿದೆ. ಪವಿತ್ರ ಆರ್ಥಿಕತೆಯನ್ನು ಉಳಿಸಲು ಇದು ಸರಿಯಾದ ಸಮಯ.

ವಿಶ್ವದಾದ್ಯಂತ ಸರಕಾರಗಳು ಜನರ ತೆರಿಗೆ ಹಣದಿಂದ ಈ ರಾಕ್ಷಸನನ್ನು ಬದುಕಿಸಲು ಪ್ರಯತ್ನಿಸುತ್ತಿದ್ದಾರೆ. ಕೃಷಿ ಕ್ಷೇತ್ರ ತೀವ್ರ ಬಿಕ್ಕಟ್ಟಿನಲ್ಲಿರುವಾಗ, ನೇಕಾರರು, ಕುಶಲಕರ್ಮಿಗಳು ತಮ್ಮ ವೃತಿಯನ್ನು ತೊರೆಯುತ್ತಿರುವಾಗ, ಗ್ರಾಮೀಣ ಬಡವರು ಪಟ್ಟಣಗಳಿಗೆ ಜೀವ ಹಿಡಿದಿಡಲು ಗುಳೆಹೊರಡುತ್ತಿರುವಾಗ, ಸರಕಾರಗಳು ರಾಕ್ಷಸನನ್ನು ಉಳಿಸ ಹೊರಟಿವೆ, ಕಾರುಗಳ ಕಾರಖಾನೆಗಳು ಹಾಗೂ ದಿವಾಳಿಯಾದ ಬ್ಯಾಂಕುಗಳನ್ನು ಉಳಿಸ ಹೊರಟಿವೆ, ಹೌದು ದೈತ್ಯ ರಾಕ್ಷಸ ಕ್ಷೇತ್ರಗಳಿಗೆ ಉದಾರವಾಗಿ ರಿಯಾಯಿತಿಗಳನ್ನು ನೀಡುತ್ತಿದೆ.

ಇದಕ್ಕೂ ನಾಚಿಕೆಗೇಡಿನ ಕೆಲಸವೆಂದರೆ, ರಾಕ್ಷಸನನ್ನು ಉಳಿಸಲು ಪಾವಿತ್ಯ್ರತೆಯ ಅರ್ಥವನ್ನೇ ಬದಲುಮಾಡುತ್ತಿರುವುದು. ಹೌದು ಅವರು ಪುರೋಹಿತಶಾಹಿ, ರಾಕ್ಷಸ ಆರ್ಥಿಕತೆ ಹಾಗೂ ರಾಜಕೀಯ ವ್ಯವಸ್ಥೆಯನ್ನು ಒಟ್ಟಿಗೆ ಪಾವಿತ್ಯ್ರವೆಂದು ಮುಂದೊತ್ತುತ್ತಿವೆ. ಇದರ ಅರ್ಥ ಅವರು ಪ್ರತ್ಯೇಕತಾವಾದ, ಜಾತಿ ವ್ಯವಸ್ಥೆ, ಲಿಂಗ ತಾರತಮ್ಯವನ್ನು ಮುಂದೊತ್ತುತ್ತಿವೆ.

ಈ ಸತ್ಯಾಗ್ರಹವು ಜನರನ್ನು ಕೊಳ್ಳುಬಾಕರಾಗದಿರುವಂತೆ ನೈತಿಕ ಒತ್ತಡ ಹೇರಲಿದೆ. ಹಾಗೂ ನಾವು ಹೇಳುತ್ತಿರುವ ಪ್ರಕಾರ ಪವಿತ್ರ ಎಂದು ಕರೆಯಲ್ಪಡುವ ಪದಾರ್ಥಗಳನ್ನು ಬಳಸುವಂತೆ ಉತ್ತೇಜಿಸುತ್ತದೆ. ನಾವೆಲ್ಲ ಇಂದು ಪವಿತ್ರ ಆರ್ಥಿಕತೆಯನ್ನು ಬಲಪಡಿಸಲು, ಸಾರ್ವಜನಿಕ ಸಂಪನ್ಮೂಲಗಳ ಮೇಲೆ ಎಲ್ಲ ಸರಕಾರಗಳು ಹೂಡಿಕೆ ಮಾಡುವಂತೆ ನೈತಿಕ ಒತ್ತಡವನ್ನು ಹೇರಬೇಕಾಗಿದೆ.

ಪಾವಿತ್ರ್ಯತೆ ಎಂಬುದು ನಮ್ಮನ್ನು ಒಡೆಯಬೇಕಾಗಿಲ್ಲ

ಹೌದು, ನಮಗೆ ತಿಳಿದಿದೆ. ಉದಾಹರಣೆಗೆ, ನಾವು ಕೈಉತ್ಪನ್ನಗಳನ್ನು ಯಂತ್ರೋತ್ಪನ್ನದಿಂದ ಬೇರೆ ಮಾಡಬೇಕಿಲ್ಲ. ಪವಿತ್ರ ಆರ್ಥಿಕತೆ ಎನ್ನುವುದು ಆದೇಶವಲ್ಲ, ಅದು ಒಂದು ಅಳತೆಗೋಲು. ಕೈಉತ್ಪನ್ನಗಳು ಅದರ ಮೇಲ್‍ತುದಿಯಲಿದ್ದರೆ, ಅತ್ಯಂತ ಹೆಚ್ಚು ಜನರಿಗೆ ಉದ್ಯೋಗ ನೀಡುವ ಉತ್ಪನ್ನಗಳು ಅದನ್ನು ಹಿಂಬಾಲಿಸುತ್ತವೆ, ಮತ್ತು ಅವು ಪರಿಸರಕ್ಕೆ ಕಡಿಮೆ ಹಾನಿಕಾರಕವು ಆಗಿರುತ್ತವೆ.

ಹೆಚ್ಚು ಅರ್ಥಪೂರ್ಣವಾದದ್ದು ಪವಿತ್ರ ಆರ್ಥಿಕತೆ

ಜಿ.ಡಿ.ಪಿ ನಮ್ಮನ್ನು ಗಾಬರಿಗೊಳಿಸ ಬೇಕಿಲ್ಲ. ಪವಿತ್ರ ಆರ್ಥಿಕತೆ ಕಡಿಮೆ ಲಾಭದಾಯಕವಾಗಿರಬಹುದು, ಮಂದಗತಿಯಲ್ಲಿ ಉತ್ಪಾದಿಸಬಹುದು. ಆದರೆ ಅದರೊಂದಿಗೆ ಬದುಕುವುದು ಹೆಚ್ಚು ಅರ್ಥಪೂರ್ಣ.

ಬನ್ನಿ! ಪವಿತ್ರ ಆರ್ಥಿಕತೆಯನ್ನು ಉಳಿಸುವ ಈ ಸಂವಾದದಲ್ಲಿ ನಮ್ಮ ಜೊತೆಗೂಡಿ!

ಆಯೋಜಕರು

ಗ್ರಾಮ ಸೇವಾ ಸಂಘ

ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಸಹಯೋಗದೊಂದಿಗೆ

GramSevaSanghIndia@gmail.com | www.gramsevasangh.org | +91 9980043911

The Sacred Economy

A Discourse

15th Sept 2019, 10:30 am – 2 pm

Kasturba Hall, Gandhi Bhavana, Bengaluru – 01

 

Gram Seva Sangh is launching a sathyagraha for the rejuvenation of the sacred economy. By sacred economy we mean that system of production which provides maximum employment to people, with the least investment. By least investment we mean both natural and financial. We actually mean the rejuvenation of nature and economy both, through this measure.

Monster Economy is dying

The system that prevails today is the opposite of the sacred. It is a monster economy, monster both in nature and in size. And it is dying .And it is taking the eco system along with it. It is high time that we revived the sacred.

Instead, governments the world over are using tax payer’s money to revive the monster.What a shame! While agriculture is in deep crisis, when weavers and crafts people are leaving their professions, and the poor are leaving villages in hordes, the government is   reviving the monster! Yes! The Government is bailing out the automobile sector, writing off big debts of bad banks, and is giving liberal concessions to all the big bad sectors.

But the biggest shame is that they are changing the meaning of the sacred in order to do this.  They are systematically pushing a combination of, the priestly class, the monster economy and the political class, as the sacred.  They, in essence, are pushing a separatist ideology   a caste system and a sexist theology.

The sathyagraha shall bring moral pressure on the people to consume less. And to consume those products that can be termed sacred under our definition. We shall bring a similar moral pressure on all governments to invest public resources, wherever and whenever possible, towards the strengthening of the sacred economy.

The sacred cannot be a dividing line

We know that. We, for example, do not want to divide the handmade from the machine made. The sacred economy is a scale and not a dictate. Handmade sits at the top of the scale. But, it shall be followed by those products that employ the most number of people to do them, as also do the least damage to nature.

Sacred Economy makes a lot of sense

GDP need not scare us. May be, Sacred economy is less profitable, May be it grows slowly. But it makes a lot of sense to live inside it.

Join the discourse to revive the sacred economy!

Organized by

Gram Seva Sangh

In collaboration with

Karnataka Gandhi Smaraka Nidhi

GramSevaSanghIndia@gmail.com | www.gramsevasangh.org | +91 9980043911

Save Me!, I am an Expression

 

Protest for Press Freedom and Freedom of Expression – A Report

Mahatma Gandhi Statue, M G Road, Bengaluru | 12th Mar 2019, 5:0 PM

Under the banner of Grama Seva Sangha, well known activists, writers, and artists did a protest opposing the ongoing assault of Freedom of Speech on individuals, community and the groups who speak about Government actions, plans and wrong doings. Freedom fighter H.S.Doreswamy, writer Bolwar Mohammed Kunhi, poet Mudnakudu Chinnaswamy, actor and director B.Suresh, journalist Suguta Sreenivasraju, Actor Prakash Raj, Artist Gouri Dutt, Mentors of Gram Seva Sangha G.K.Suresh, Shamala Devi, G.S.R .Krishnan, Sanath Kumar, Secretary Abhilash, Phaneesh and others participated in the protest.

On this occasion, dignitaries have shared their opinions as follows.

B Suresh, Actor and Filmmaker

B.Suresh: What we are facing in the last few days is the situation of 1975 emergency. Blocking social media accounts and sending people jail if they analyze the plus & minus of government policies or if artists wrote cartoons indicates that a country is caught with cancer disease. The assault on cartoonist P.Mohammed, sufferings of Ravi Kumar and the words spoken by the government in the case of N.Ram of The Hindu newspaper shows that all these incidents are similar to the assault made on various political parties at the time of 1975 emergency.  Public should became aware and continuously oppose these to save our fundamental Right of Freedom of Speech. We might be jailed for talking like this, and then our next generation should say these words. This should happen as a continuous movement.

Mudnakudu Chinnaswamy: Voltaire has said that “I might not agree your words but I respect the Right of Freedom to say your words, that is your lifelong Right” which is very relevant now.  Recently the literature award given to the Dalit Professor Ravikant of Lucknow has been taken back for writing against the government in social media. All government employees have opposed this decision. We have reached such a low situation. State which doesn’t have Press Freedom and Freedom of Speech is not democratic.

H.S.Doreswamy: Government is behaving like we are doing wrong if we oppose government by making a group, organizing a meeting or sharing information to people. When certain individuals or government makes mistakes, it is necessary to unfold secret information. That is Press Dharma. It is very necessary from Public interest. If the press information is true, then it is the Press Dharma to keep the source of information secret. The Hindu newspaper has done a big job. There is no need to reveal the source of information if it is true.

Sugata Srinivasaraju, Prominent Journalist and Writer

Suguta Sreenivasaraju: In recent days, many laws against journalists have been misused. It is an effort to suppress journalist voice. All of us know how the Official Secrets Act has been misused in the case of The Hindu newspaper. The National Security Act has been misused on Imphal Manipur journalist Kishorechandra and he has been not released from jail. In the recent meeting held at Editor Guilds where I was also present, A resolution was made on “Decriminalizing content”. Recently, we could see this on how Shillong Times editor was penalized by High Court on account of Contempt of Court. Colonial Laws has been removed in many countries. But in our country such laws has been used against journalist & activists for harassing.

Praksah Rai, Actor

 Prakash Raj: We have reached such a situation where we could easily identify which political it belongs if we switch on a channel or read a newspaper. In Vikram-Bethala stories, it was said that if we say a lie our head would cut into thousand pieces. But now if we say a lie, it is behaved like thousand votes would come. The government which is not able to protect Rafale documents is saying criminal to people who are following Press Dharma. It is like saying “fence itself is gazing the land”. But people would be observing.  When it crosses a limit, we have seen in history that progressive people, artists have stood up and will stand up. People consciousness is still alive. This might be a small voice but it is the voice of truth. Hence it would be heard loudly.

Gram Seva Sangh

Facebook.com/graamasevasangha | @gramasevasangha

Mobile: 9980043911 |  www.gramsevasangh.org

ನಾನು ಒಂದು ಅಭಿವ್ಯಕ್ತಿ, ನನ್ನನು ಉಳಿಸಿ!

ಪತ್ರಿಕಾ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕಾಗಿ 

ಪ್ರತಿಭಟನೆಯ ವರದಿ

12 ನೇ ಮಾರ್ಚ್ 2019 ಸಂಜೆ 5:0 ಕ್ಕೆ | ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗಎಂ ಜಿ ರಸ್ತೆಬೆಂಗಳೂರು

ಸರಕಾರದ ಕಾರ್ಯವೈಖರಿ, ಯೋಜನೆಗಳು ಮತ್ತು ತಪ್ಪುಗಳನ್ನು ಚರ್ಚಿಸುವ ವ್ಯಕ್ತಿ, ಸಮುದಾಯ ಮತ್ತು ಗುಂಪುಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ತೀವ್ರವಾದ ಆಕ್ರಮಣವನ್ನು ವಿರೋಧಿಸಿ ನಾಡಿನ ಹೋರಾಟಗಾರರು, ಕಲಾವಿದರು, ಲೇಖಕರು ಗ್ರಾಮ ಸೇವಾ ಸಂಘದ ಅಡಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು. ಪ್ರತಿಭಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್ ಎಸ್ ದೊರೆಸ್ವಾಮಿ ಅಯ್ಯಂಗಾರ್, ಲೇಖಕ ಬೋಳುವಾರು ಮೊಹಮ್ಮದ್ ಕುಂಞ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಚಿತ್ರನಟ ಹಾಗೂ ನಿರ್ದೇಶಕ ಬಿ ಸುರೇಶ್, ಪತ್ರಕರ್ತರಾದ ಸುಗತ ಶ್ರೀನಿವಾಸರಾಜು, ಚಿತ್ರ ನಟ ಪ್ರಕಾಶ್ ರೈ, ಕಲಾವಿದೆ ಗೌರಿ ದತ್, ಗ್ರಾಮ ಸೇವಾ ಸಂಘದ ಮಾರ್ಗದರ್ಶಕರಾದ ಜೆ ಕೆ ಸುರೇಶ್, ಶಾಮಲಾ ದೇವಿ, ಜಿ.ಎಸ್.ಆರ್. ಕೃಷ್ಣನ್, ಸನತ್ ಕುಮಾರ್ ಹಾಗೂ ಕಾರ್ಯದರ್ಶಿ ಅಭಿಲಾಷ್ ಹಾಗೂ ಫಣೀಶ್ ಇನ್ನಿತರ ಹೋರಾಟಗಾರರು ಭಾಗಿಯಾಗಿದ್ದರು.

ಈ ಸಂಧರ್ಭದಲ್ಲಿ ಕೆಳಗಿನಂತೆ ಗಣ್ಯರು ಮಾತನಾಡಿದರು:

B Suresh, Actor, Filmmaker

ಬಿ.ಸುರೇಶ್ :   ಕಳೆದ ಕೆಲವು ದಿನಗಳಿಂದ ಏನನ್ನು ಎದುರಿಸುತ್ತಿದ್ದೆವೆಯೋ ಅದು 1975ರ ತುರ್ತು ಪರಿಸ್ಥಿತಿಯ ನಡವಳಿಕೆ. ಸರ್ಕಾರದ ನೀತಿ, ಕಾಯಿದೆಗಳನ್ನು ಅದರ ಒಳಿತು ಕೆಡಕುಗಳ ಬಗ್ಗೆ ವಿಶ್ಲೇಷಿಸಿದರೆ, ಕಲಾವಿದರು ವ್ಯಂಗ್ಯಚಿತ್ರ ಬರೆದರೆ, ಅವರ ಸಾಮಾಜಿಕ ಜಾಲತಾಣಗಳನ್ನು ಬ್ಲಾಕ್ ಮಾಡುವುದು, ಅವರನ್ನು ಜೈಲಿಗೆ ಹಾಕುವ ಸಂಗತಿ, ಆ ದೇಶಕ್ಕೆ ಬಂದಿರುವ ಖಾಯಿಲೆಯ ಸೂಚನೆ. ಈ ದೇಶಕ್ಕೆ ಒಂದು ಕ್ಯಾನ್ಸರ್ ಕಾಯಿಲೆ ಬಂದು ಬಡೆದಿದೆ!
ವ್ಯಂಗ್ಯಚಿತ್ರಕಾರ ಪಿ ಮೊಹಮ್ಮದ್ ಅವರ ಮೇಲೆ ಮುಗಿಬಿದ್ದ ರೀತಿ, ರವಿಕುಮಾರ್ ಅವರು ಅನುಭವಿಸುತ್ತಿರುವುದು, ಹಿಂದೂ ಪತ್ರಿಕೆಯ ಎನ್. ರಾಮ್ ಅವರ ವಿಷಯದಲ್ಲಿ ಸರ್ಕಾರ ಆಡುತ್ತಿರುವ ಮಾತು ಇವೆಲ್ಲವೂ 1975 ರ ತುರ್ತು ಪರಿಸ್ಥಿತಿ ಸಮಯದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ಮೇಲೆ ನಡೆದ ದಾಳಿಯ ರೀತಿಯದಾಗಿವೆ.
ಸಾರ್ವಜನಿಕರು ಈಗ ಎಚ್ಚೆತ್ತುಕೊಂಡು ಇದನ್ನು ಸತತವಾಗಿ ವಿರೋಧಿಸುವ ಮೂಲಕ ನಮ್ಮ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಿ ಉಳಿಸಿಕೊಳ್ಳಬೇಕಾಗಿದೆ. ಈ ರೀತಿಯಾಗಿ ಮಾತನಾಡುತ್ತಿರುವ ನಮ್ಮನ್ನು ಬಂಧಿಸಿ ಕೂರಿಸಬಹುದು, ಆಗ ನಮ್ಮ ನಂತರದ ಜನ ಈ ಮಾತನ್ನು ಹೇಳಬೇಕು. ಇದು ನಿರಂತರವಾಗಿ ನಡೆಯ ಬೇಕಾದ ಹೋರಾಟ.

Mudnakudu Chinnaswamy, Poet, Writer

ಮೂಡ್ನಾಕೂಡು ಚಿನ್ನಸ್ವಾಮಿ: ವೋಲ್ಟೇರ್ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳಿದ ಮಾತು ಇಂದಿಗೆ ಅತ್ಯಂತ ಪ್ರಸ್ತುತ. ನಾನು ನಿಮ್ಮ ಮಾತನ್ನು ಒಪ್ಪದೇ ಇರಬಹುದು, ಅದನ್ನು ಹೇಳುವ ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ, ಅದು ನಿನ್ನ ಜೀವಮಾನದ ಹಕ್ಕು. ಇತೀಚೆಗೆ ಲಖನೌನ ದಲಿತ ಪ್ರೊಫೆಸರ್ ರವಿಕಾಂತ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಡಿದ ಮಾತಿಗೆ, ಅವರಿಗೆ ನೀಡಿದ್ದ ಸಾಹಿತ್ಯದ ಪ್ರಶಸ್ತಿಯನ್ನು ಹಿಂಪಡೆಯಲಾಗಿದೆ. ಅಲ್ಲಿನ ಎಲ್ಲಾ ಸರ್ಕಾರಿ ನೌಕರರು ಸರ್ಕಾರದ ಈ ನಡೆಯ ವಿರುದ್ಧ ಪ್ರತಿಭಟಿಸಿದ್ದಾರೆ. ಈ ರೀತಿಯ ಶೋಚನೀಯ ಸ್ಥಿತಿಗೆ ನಾವು ತಲುಪ್ಪಿದ್ದೇವೆ ನಾವು. ಪತ್ರಿಕಾ ಸ್ವತಂತ್ರ ಅಭಿವ್ಯಕ್ತಿ ಸ್ವತಂತ್ರ ಗಳು ಇರದೇ ಇರುವ ಪ್ರಭುತ್ವ ಪ್ರಜಾಪ್ರಭುತ್ವ ಅಲ್ಲ!

H S Doreswamy, Freedom Fighter, Activist

ಹೆಚ್ ಎಸ್ ದೊರೆಸ್ವಾಮಿ: ಈಗ ಒಂದು ಸಂಘಟನೆ ಮಾಡಿದರೆ, ಒಂದು ವಿಚಾರ ಜನರಿಗೆ ಹೇಳಿದರೆ, ಒಂದು ಸಭೆ ಸಮಾರಂಭದ ಮೂಲಕ ಸರಕಾರವನ್ನು ವಿರೋಧಿಸಿದರೆ ಅದು ತಪ್ಪು ಎಂದು ಸರಕಾರಗಳು ವರ್ತಿಸುತ್ತಿವೆ.
ಪತ್ರಿಕಾ ರಂಗದಲ್ಲಿ ಇನ್ವೆಸ್ಟಿಗೇಷನ್ ಜರ್ನಲಿಸಂ (ತನಿಖಾ ಪತ್ರಿಕೋದ್ಯಮ) ಮುಖಾಂತರ ಕೆಲವು ವ್ಯಕ್ತಿ ಅಥವಾ ಸರ್ಕಾರಗಳು ಲೋಪಗಳನ್ನು ಎಸಗಿದ ಸಂಧರ್ಭದಲ್ಲಿ ಅದನ್ನು ಬಯಲಿಗೆಳೆಯಲು ರಹಸ್ಯ ದಾಖಲೆಗಳನ್ನು ಬಯಲಿಗೆಳೆಯ ಬೇಕಾಗುತ್ತದೆ. ಅದು ಪತ್ರಿಕಾ ಧರ್ಮ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅದು ಅತ್ಯಗತ್ಯ. ಮಾಹಿತಿಯು ಸತ್ಯ ವಾಗಿದ್ದಲ್ಲಿ ಅದನ್ನು ಅವರ ಪತ್ರಿಕಾ ಧರ್ಮದ ಪ್ರಕಾರ ಪಡೆದಿದ್ದಲ್ಲಿ, ಮೂಲವನ್ನು ಗೌಪ್ಯವಾಗಿಡುವುದು ಪತ್ರಿಕಾ ವೃತ್ತಿಯ ಧರ್ಮ.

ದಿ ಹಿಂದೂ The Hindu ಪತ್ರಿಕೆ ಯವರು ಒಂದು ದೊಡ್ಡ ಕೆಲಸ ಮಾಡಿದ್ದಾರೆ, ಅವರು ಹೇಳುತ್ತಿರುವುದು ಸತ್ಯವಾಗಿದಲ್ಲಿ ಅವರು ತಮ್ಮ ಮಾಹಿತಿಯ ಮೂಲವನ್ನು ಬಹಿರಂಗ ಪಡಿಸಬೇಕಾಗಿಲ್ಲ.

ಸುಗತ ಶ್ರೀನಿವಾಸರಾಜು: ಪತ್ರಕರ್ತರ ವಿರುದ್ಧ ಅನೇಕ ಕಾನೂನುಗಳನ್ನು ಇತೀಚಿನ ದಿನಗಳಲ್ಲಿ
ದುರುಪಯೋಗಗೊಳಿಸಲಾಗುತ್ತಿದೆ. ಇದು ಪತ್ರಕರ್ತರ ಧ್ವನಿಯನ್ನು ಹತ್ತಿಕುವ ಪ್ರಯತ್ನ, ಅಫೀಷಿಯಲ್ ಸೀಕ್ರೆಟ್ ಆಕ್ಟ್ ಅನ್ನು ದಿ ಹಿಂದೂ ಪತ್ರಿಕೆಯ ಪ್ರಕರಣದಲ್ಲಿ ಸರ್ಕಾರ ದುರುಪಯೋಗ ಪಡಿಸಿಕೊಳ್ಳಲು ಯತ್ನಿಸುತ್ತಿರುವುದು ನಮಗೆ ತಿಳಿದೇ ಇದೇ. ಆದರೆ ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ಅನ್ನೂ ಮಣಿಪುರ್ ನ ಇಂಫಾಲ್ ದ ಪತ್ರಕರ್ತನ ಮೇಲೆ ದುರುಪಯೋಗ ಮಾಡಿ ಇನ್ನು ಸಹ ಕಿಶೋರೆಚಂದ್ರ ವನ್ಗ್ಖೆಮ್ ಅವರನ್ನು ಜೈಲಿನಿಂದ ಬಿಡುಗಡೆಮಾಡಿಲ್ಲ, ಅಲ್ಲದೆ ರಾಷ್ಟ್ರ ದ್ರೋಹದ ಕಾಯಿದೆಯನ್ನು ಇತೀಚೆಗೆ ಹೆಚ್ಚು ದುರುಪಯೋಗ ಮಾಡಲಾಗಿದೆ.

Sugata Srinivasaraju, Prominent Journalist, Writer

ಇತೀಚೆಗೆ ನಡೆದ ಎಡಿಟರ್ಸ್ ಗಿಲ್ಡ್ ಮೀಟಿಂಗ್ ನಲ್ಲಿ ನಾನಿದ್ದೆ ಅಲ್ಲಿ ನಾವು Decriminalizing content ನ ಬಗ್ಗೆ ರೆಸಲ್ಯೂಷನ್ ತೆಗೆದು ಕೊಂಡಿದ್ದೇವೆ. ಶಿಲಾಂಗ್ ಟೈಮ್ಸ್ ನ ಎಡಿಟರ್ ಅನ್ನು ಇತೀಚೆಗೆ ಈ ರೀತಿಯಾಗಿ ಅಲ್ಲಿನ ಹೈ ಕೋರ್ಟ್ ಅವರಿಗೆ ಕ್ರಿಮಿನಲ್ ಕಂಟೆಂಪ್ಟ್ ಆಫ್ ಕೋರ್ಟ್ ನ ಪ್ರಕಾರ ಜುಲುಮಾನವನ್ನು ಹಾಕಿರುವುದನ್ನು ನಾವು ನೋಡಬಹುದು. ಅಲ್ಲಿನ ನ್ಯಾಯಮೂರ್ತಿಗಳು ನಿವೃತ್ತರಾದ ಮೇಲೆ ಅವರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಪ್ರಶ್ನಿಸಿದರೆ ಅವರ ವಿಷಯವೇ ಅವಿಧೇಯತೆ ಎಂದು ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ.
ಅನೇಕ ದೇಶಗಲ್ಲಿ ಈ ರೀತಿಯ ಕಾಲೋನಿಯಲ್ ಕಾನೂನುಗಳನ್ನು ತೆಗೆದು ಹಾಕಲಾಗಿದೆ ಆದರೆ ನಮ್ಮ ದೇಶದಲ್ಲಿ ಅದನ್ನು ಪತ್ರಕರ್ತರು ಹಾಗೂ ಹೋರಾಟಗಾರರನ್ನು ಹಿಂಸಿಸಲು ಬಳಸಲಾಗುತ್ತಿದೆ.
ಯಾವುದೇ ಸರ್ಕಾರ ಬಂದಾಗಲೂ ಈ ರೀತಿಯ ಅಚಾತುರ್ಯಗಳು ನಡೆದಿವೆ. ಇದು ಚುನಾವಣೆಯ ಸಮಯವಾದ್ದರಿಂದ ನಾವು ಈ ರೀತಿಯ ದುರುಪಯೋಗದ ಬಗ್ಗೆ ಮತ್ತಷ್ಟು ಮಾತನಾಡಿ ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಈ ರೀತಿಯ ಕಾನೂನುಗಳಿಂದ ನಮ್ಮ ಹಕ್ಕುಗಳಿಗೆ ರಕ್ಷಣೆ ಒದಗಿಸುವ ಪ್ರಸ್ತಾವಗಳನ್ನು ಮುಂದಿಡಬೇಕಾಗಿ ನಾವು ಕೇಳಬೇಕಿದೆ.

Prakash Rai, Veteran Actor

ಪ್ರಕಾಶ್ ರೈ: ನಾವು ಇಂದು ಯಾವ ಪರಿಸ್ಥಿತಿಗೆ ತಲುಪ್ಪಿದ್ದೇವೆ ಎಂದರೆ, ಯಾವ  ಚಾನೆಲ್ ಹಾಕಿದರೆ ಅದು ಯಾವ ಪಕ್ಷವೆಂದು ತಿಳಿಯುತ್ತದೆ, ಯಾವ ಪತ್ರಿಕೆ ಅಂತ ಹೇಳಿದರೆ ಅದು ಯಾವ ಪಕ್ಷವೆಂದು ತಿಳಿಯುತ್ತದೆ. ಸುಳ್ಳು ಸಾರ ಸಗಟಾಗಿ ಹೇಳಲಾಗುತ್ತಿದೆ, ವಿಕ್ರಮ್ ಬೇತಾಳನ ಕಥೆಯಲ್ಲಿ ಒಂದು ಸುಳ್ಳು ಹೇಳಿದರೆ ತಲೆ ಸಾವಿರ ಹೋಳಾಗುತ್ತದೆ ಎಂದು ಹೇಳುತ್ತಿದ್ದೆವು. ಆದರೆ ಈಗ ಒಂದು ಸುಳ್ಳು ಹೇಳಿದರೆ ಸಾವಿರ ವೋಟ್ ಆಗುತ್ತದೆ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

Bolwar mahammad Kunhi, Writer

 ರಫೆಲ್ ಪ್ರಕರಣದಲ್ಲಿ ಖಡತಗಳನ್ನು ಕಾಪಾಡಿಕೊಳಲಾಗದ ಸರ್ಕಾರ, ಪತ್ರಿಕಾ ಧರ್ಮ ಪಾಲಿಸಿ ಕೆಲಸ ಮಾಡುವವರನ್ನು ಕ್ರಿಮಿನಲ್ ಗಳು ಎಂದು ಹೇಳುತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯುವುದು ಎಂದರೆ ಇದೇ. ಆದರೆ ಜನ ನೋಡುತ್ತಿದ್ದಾರೆ ಈ ರೀತಿಯ ಶಕ್ತಿಗಳು ಮೀತಿ ಮೀರಿದಾಗ ಪ್ರಗತಿಪರರು, ಕಲಾವಿದರು ಇತಿಹಾಸದಲ್ಲಿ ಎದ್ದು ನಿಂತಿದ್ದಾರೆ ಹಾಗೂ ನಿಲ್ಲುತ್ತಾರೆ. ಜನರ ಮನಃಸಾಕ್ಷಿ ಇನ್ನೂ ಜೀವಂತವಾಗಿದೆ, ಇದು ಸಣ್ಣ ಧ್ವನಿಯಾಗಿದ್ದರೂ ಸತ್ಯದ ಧ್ವನಿಯಾಗಿದೆ ಆದ್ದರಿಂದ ಇದು ಜೋರಾಗಿ ಕೇಳಲಿದೆ.

ಗ್ರಾಮ ಸೇವಾ ಸಂಘ

Facebook.com/graamasevasangha | @gramasevasangha

Mobile: 9980043911 | www.gramsevasangh.org

The Social Tragedy of Alcohol – A seminar report

Inauguration of a seminar The Social Tragedy of Alcohol

Organized by Gram Seva Sangh in collaboration with  Madya Nishedha Andolana Karnataka and Karnataka Gandhi Smaraka Nidhi

23 Feb’19 Sat. 10:30 am to 2 pm | Kasturba Hall, Gandhi Bhavana, Bengaluru

“Its wrong and immoral for a nation to supply intoxicating liquor to those who are addicted to drink” – M K Gandhi.

Mahatma GandhiJi on Prohibition

Going on the same lines of the above quote the Gram Seva Sangh organised a open ended seminar on 23rd February 2019 , Tuesday in Gandhi Bhavan, Bangalore,  drawing inferences on how alcohol is a social tragedy. Unless you are living in the biblical times we know that alcohol is both a socio – cultural problem. Reports suggest that around 80% accidents , 85% domestic violence and also 37% of rapes in this ” Rama Rajya” happens due to alcoholism.

TOI reports on recent AIIMS studies

And inspite of being informed citizens there exists some unanswered questions on ban of liquor. Considering the magnanimity of the issue there are loop holes as to where to start? By whom? Is restriction or prohibition the answer? To seek answers to these complex questions, rural women from around 20 districts of North Karnataka set out to a Padyatra, in ray of hope demanding the ban of liquor,  from Chitradurga to Bengaluru. What started with merely 2500 women grew outrageously into around 5000 of them covering a distance of 200km in the 12 day Padyatra.

Glimpse of Padayatra by Suhasini Kaulagi

The attrocity and the cause of the issue spread rampently and the domino effect of which , was the Seminar. The Seminar consisted of participants of the Padyatra and celebrated key note speakers. A prayer song followed by paying heartful condolences to a lost soul (Renuka amma) in the Padyatra marked the beginning of the Seminar.

The key note speakers belonged to diverse deaneries including The Seminar threw light on the repercussions of alcohol on a social front and the possible actions that could be taken towards banning the same. The key note speakers who decorated the cause of the session, were all celebrated personalities from diverse fields of expertise, Law, medicine, civil, theatrics and politics, hence providing us with several perspectives on the same issue.  To name a few, Arundhati Nag , Prasanna , Rani Satish , Dr. Prathima Murthy , Ajay Kumar  singh to Victims of Alcoholism like Mrs. Mokshamma , Mrs Virupuna and Mrs Uma, all speakers had one point to say in commonality,  that alcohol destroys families before Liver. 

Yashodhara Daasappa, Freedom Fighter and Veteran Politician from Karnataka

The first speaker in the seminar was Mrs. Virupama, who was a victim of alcohol-abuse herself. She spoke about how her family faces an financial crunch due to the habitual drinking and addiction of all the men in her family. Then she went on to explain how the Padyaatra took shape and how many stages it was divided into. As a conclusion she also urged that alcohol ban should be a global cause and concern.

Virupamma, Activist, Madya Nishedha Andolana Karnataka

The second speaker Mr. Prasanna drew our attention towards the plight of the government as it only looks at alcohol through the lens of vote- banks or market value. He also probed deep into facts by stating that there are about 1.5 lakh alcohol addicts in the country with 10 crore of them clinically hospitalised. This instilled a sense of awareness amongst us, the audience and it truly called for some action.

Prasanna, Activist and Theatre Person

The third speech of the seminar was given by Mrs.Rani Satish, Karnataka Congress Vice President. Considering the political stand of the government to not ban alcohol, this speech was key in enlightening us about the issue on a political front. The gist of her speech mainly talked about how alcoholism is a threat to all rural and also urban people. She also claims that if states like Bihar, Gujrat and many others can reach success in becoming dry states, then Karnataka too can make it possible. ‘The protests shouldn’t stop’ she motivated the audience.

Rani Sateesh, Ex Minister, Veteran Politician, Karnataka

 

Coming up on the dais as the fourth speaker was Dr Pratima Murthy, director of de-addiction in NIMHANS. She enhanced our knowledge by stating the scientific health reports of WHO (World Health Organisation) which claims that 14.5% of the world between the ages of 10-60 years face drinking problems.

Dr Pratima Murthy, Head of Centre for Addiction Medicine, NIMHANS

Mookshamma, the next speaker and a participant of the Padyaatra, also indicated that due to the problems caused due to liquor is growing rampant, the 20,000 women are even fired to ban the same. She drew notice to the fact that old women, pregnant women and many other victims walked as one, in unity towards the cause and upheld the true essence of women empowerment.

Mokshamma, Activist, Madya Nishedha Andolana KarnatakaMrs. Veena from Hubli, being the legal expert, added how the support of law will help in achieving the noble cause. The directive principles of state policy, constitutionally guarantees total prohibition of drugs except the ones used for medicinal purposes, in Article 47.

National trend of Intoxicants usage reported recently by TOI

To end the seminar in an apt way, Arundati Nag, famous theatre artist, empathized with the victims of this social evil and talked about the challenges of the dream of alcohol ban. Having said that, she also went on to assure the commoners that she will always be there as a source of support for the protests and upcoming events.

Arundathi Nag, Actor and Theatre Person

In journey of seeking solutions to their existing problems they reached out to the government and inturn got a cold response. The government claims that the administration runs in the revenue earned by the selling of alcohol and hence the ban of the Same isn’t affordable. The hipocracy of this situation is evident as the socio cultural repercussions of alcoholism seeps down to a greater depth. According to the directive principles of the state policies , Article 47 of the Indian constitution guarantees a total prohibition of drugs excepting those used in medicine. Though constitutionally guaranteed this situation seems “ideal”for a simple reason, demand is equal to supply.

The Social Tragedy of Alcohol Seminar Inaugural song by mamatha

Though the Padyatra seemed glorious in its endeavours, the brutal harassment and domestic violence faced by the women remains to be the dark side of the bitter truth. The politicians making this issue about vote bank politics reflects the stale nature of administration thus trivilising the noble cause of alcohol ban. As one of the women stated THIS is just the beginning. “The tears we shed are dry but fire in our soul ignites to greater notches, we will strive till alcohol is banned. All the guest joined the seminar decided to join the movement and strengthen further.

To watch few of the speeches of the seminar click Here

Glimpse of Padayatra by Suhasini Kaulagi

Gram Seva Sangh

Madya Nishedha Andolana Karnataka and Karnataka Gandhi Smaraka Nidhi

Contact : 9980043911 or 9008484880 | GramSevaSanghIndia@gmail.com

“ಮದ್ಯವ್ಯಸನ ಒಂದು ಸಾಮಾಜಿಕ ಪಿಡುಗು” – ವಿಚಾರ ಸಂಕಿರಣದ ವರದಿ

ಗ್ರಾಮ ಸೇವಾ ಸಂಘ, ಮದ್ಯನಿಷೇಧ ಆಂದೋಲನ ಕರ್ನಾಟಕ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ  ಸಹಯೋಗದೊಂದಿಗೆ

23 ಫೆಬ್ರವರಿ 2019, ಶನಿವಾರ ಬೆಳಗ್ಗೆ 10: 30ಮಧ್ಯಾಹ್ನ 2:0 | ಕಸ್ತೂರಬಾ ಸಭಾಂಗಣ, ಗಾಂಧೀ ಭವನ, ಬೆಂಗಳೂರು

ಈಗಾಗಲೇ ಗ್ರಾಮೀಣ ಮಹಿಳೆಯರಿಂದ ಆರಂಭಗೊಂಡ ಮದ್ಯ ನಿಷೇಧ ಆಂದೋಲನದ ಹೋರಾಟಕ್ಕೆ  ಪಟ್ಟಣದ ಮಹಿಳೆಯರು ಕೈಜೋಡಿಸಿ, ಚಳುವಳಿಯನ್ನು ಇನಷ್ಟು ಬಲಗೊಳಿಸುವ ಪ್ರಯುಕ್ತ ಗ್ರಾಮ ಸೇವಾ ಸಂಘ, ಮದ್ಯ ನಿಷೇಧ ಆಂದೋಲನ ಕರ್ನಾಟಕ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವಿಚಾರ ಸಂಕಿರಣವನ್ನು ಗಾಂಧಿ ಭವನದಲ್ಲಿ ಹಮ್ಮಿಕೊಂಡಿತ್ತು.  ವಿಚಾರಸಂಕಿರಣದಲ್ಲಿ ಭಾಗವಹಿಸಿದ ಗಣ್ಯರು ಒಟ್ಟಾರೆಯಾಗಿ ಹೇಳಿದ್ದು, ಮದ್ಯಕ್ಕೆ ಆರ್ಥಿಕ ದೃಷ್ಟಿಕೋನವನ್ನು ಮೀರಿದ ಸಾಮಾಜಿಕ ಹಾಗೂ ಮಾನವೀಯ ಆಯಾಮಗಳಿವೆ.

The Social Tragedy of Alcohol Seminar Inaugural song by mamatha

 

ರಂಗಕರ್ಮಿ ಪ್ರಸನ್ನ ಪ್ರಸ್ಥಾವಿಕವಾಗಿ ಮಾತನಾಡಿ, ನಗರದ ಮಹಿಳೆಯರೂ ಗ್ರಾಮೀಣ ಮಹಿಳೆಯರು ಕೈಗೆತ್ತಿಕೊಂಡಿರುವ ಚಳುವಳಿಯಲ್ಲಿ ಪಾಲ್ಗೊoಡು, ಈ ಸಾಮಾಜಿಕ ದುರಂತವನ್ನು ತಪ್ಪಿಸಬೇಕಾಗಿದೆ.

The Social Tragedy of Alcohol Seminar Keynote speech by Prasanna

 

ರಾಣಿ ಸತೀಶ್

“ಮದ್ಯಪಾನ ಮಹಿಳೆಯರ ಬದುಕಿಗೆ ಮಾರಕವಾಗಿದೆ. ಅದು ಎಲ್ಲ ವರ್ಗದ ಹೆಣ್ಣು ಮಕ್ಕಳಿಗೆ ಇದರಿಂದ ತೊಂದರೆಯಾಗುತ್ತಿದೆ. ಆದರೆ ರಾಜಕಾರಣಿಗಳು ಕೇವಲ ಆದಾಯವನ್ನು ಮಾತ್ರ ನೋಡುತ್ತಾ ಇದ್ದೇವೆ, ಆದರೆ ಅದರ ದುಷ್ಪರಿಣಾಮಕ್ಕೆ ಎಷ್ಟು ವ್ಯಯ ಆಗುತ್ತಿದೆ ಅನುವುದನ್ನು ಯೋಚನೆಯು ಮಾಡುತ್ತಿಲ್ಲ. ಈ ಸಂದರ್ಭದಲ್ಲಿ ಯಶೋಧರ ದಾಸಪ್ಪ ಅವರನ್ನ ನೆನೆಯಬೇಕು. ಸಂಪುಟದಲ್ಲಿ ಮದ್ಯ ನಿಷೇಧಕ್ಕೆ ಒಪ್ಪಿಗೆ ಕೊಡಲಿಲ್ಲ ಎಂದು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ ಇಂದು ಸಂಘಟನೆಗಳು ಒಂದಾಗಿ ಮಾಡುತ್ತಿರುವ ಹೋರಾಟದಲ್ಲಿ ಸರ್ಕಾರವನ್ನು ನಡುಗಿಸುವ ಶಕ್ತಿ ಇದೆ”.

 

Rani Sateesh addressing at seminar The Social Tragedy of Alcohol

 

ಅರುಂಧತಿ ನಾಗ್

ನಾನು ಮೊನ್ನೆ ಆಂದೋಲನದ ಪಾದಯಾತ್ರೆ ಮಲ್ಲೇಶ್ವರಂ ಮೈದಾನಕ್ಕೆ ತಲುಪಿದಾಗ ಅಲ್ಲಿ ನೆರೆದ ಸಾವಿರಾರು ಮಹಿಳೆಯರ ಧೈರ್ಯ ಮತ್ತು ಆತ್ಮ ವಿಶ್ವಾಸವನ್ನು ನೋಡಿ ಕುಬ್ಜಳಾಗಿ ಹೋದೆ. ಕನಿಷ್ಟ ಹತ್ತು ಮಹಿಳೆಯರಿಗೆ ನನ್ನoಥ ಪಟ್ಟಣದ ಸ್ಥಿತಿವಂತ ಮಹಿಳೆಯರು ತಮ್ಮ ದೊಡ್ಡ ಮನೆಗಳಲ್ಲಿ ಆಶ್ರಯ ಕೊದುವಂತಹ ಯೋಚನೆಯನ್ನು ಮಾಡಲಿಲ್ಲ. ಹಿಂದಿನಂತೆ ರಾಜಕಾರಣಿಗಳು ನಮ್ಮ ಮಾದರಿಯಾಗಿ ಇಂದು ಉಳಿದಿಲ್ಲ, ಆದರೆ ಈರೀತಿಯ ಆಂದೋಲನಗಳೇ ನಮಗೆ ಮಾದರಿಗಳು.

Glimpse of Padayatra by Suhasini Kaulagi

 

ಡಾ. ಪ್ರತಿಮಾ ಮೂರ್ತಿ, ಮುಖ್ಯಸ್ಥರು, ಸೆಂಟರ್ ಫಾರ್ ಅಡಿಕ್ಷನ್ ಮೆಡಿಸಿನ್, ನಿಮ್ಹಾನ್ಸ್

“National survey of Substance Use” ಪ್ರಕಾರ ದೇಶದಲ್ಲಿ 10 ರಿಂದ 75 ವಯಸ್ಸಿನ 16 ಕೋಟಿ ಜನ ಮದ್ಯ ಪಾನ ಮಾಡುತ್ತಾರೆ.  2004 ರ ವರದಿಗೆ ಹೋಲಿಸಿದರೆ ಈಗ ಮದ್ಯಪಾನ ಮಾಡುವವರ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ. ತಂಬಾಕು ಮತ್ತು ಮದ್ಯ ಇವೆರಡೇ ಸರ್ಕಾರ ಅನುಮತಿನೀಡಿರುವ ಮಾದಕ ವಸ್ತುಗಳು. ತಂಬಾಕಿನ ಮೇಲೆ ನಿಯಂತ್ರಣ ವಿದೆ, ಆದರೆ ಮದ್ಯ ಪಾನ ನಿಯಂತ್ರಿಸುವ ಯಾವ ನೀತಿನಿಯಮಾವಳಿಗಳೂ ಇಲ್ಲ. ಮದ್ಯ ಪಾನದಿಂದ ಕೂಡ ಸುಮಾರು 60 ಖಾಯಿಲೆಗೆ ಗುರಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು. ನಮ್ಮ ವರದಿಯ ಪ್ರಕಾರ ಸರ್ಕಾರ ಆದಾಯಕ್ಕಿಂತ, ಇದರ ದುಷ್ಪರಿಣಾಮಕ್ಕೆ ವ್ಯಯಿಸುವ ಹಣ ಒಂದೂವರೆ ಪಟ್ಟಿಗೂ ಜಾಸ್ಥಿ.

ಡಾ. ವೀಣಾ  ಟೊಣಪಿ, ಕಾನೂನು ತಜ್ಞೆ, ಹುಬ್ಬಳ್ಳಿ    

“ಸಂವಿಧಾನದ ನಿರ್ದೇಶಕ ತತ್ವ ಹಾಗೂ ಮೂಲಭೂತ ಹಕ್ಕು ಹಾಗೂ ಕರ್ತವ್ಯ ಗಳು ಒಂದಕ್ಕೊಂದು ಪೂರಕ ಎನ್ನುವುದು ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಸ್ಥಾಪಿತವಾಗಿದೆ. ಪರಿಚ್ಛೇದ 47ರಪ್ರಕಾರ ಸಂವಿಧಾನ ಮದ್ಯ ನಿಷೇಧ ಮಾಡುವುದು ರಾಜ್ಯ ಸರ್ಕಾರಗಳ ಕರ್ತವ್ಯವೆಂಬ ನಿರ್ದೇಶನವನ್ನು ನಿರ್ಲಕ್ಷ್ಯ ಮಾಡುವ ಹಾಗಿಲ್ಲ”.

ಅಜಯ್ ಕುಮಾರ್ ಸಿಂಗ್

“ನಾನು ಸೇವೆಯಲಿರುವಾಗ ನೋಡಿದಂತೆ ಮದ್ಯ ಪಾನ ದಿಂದ ಹಲವಾರು ಕುಟುಂಬಗಳು ಅಕ್ಷರಶಃ ಬೀದಿ ಪಾಲಾಗಿದೆ. ಪೊಲೀಸರ ಇಲಾಖೆ ಸಿಬ್ಬಂದಿಗಳು ಸಂಬಳ ಬಂದ ತಕ್ಷಣ ಅದನ್ನು ಕುಡಿಯುವುದಕ್ಕೆ ಬಳಸುತ್ತಾರೆ. ಇವರ ವೇತನ ಹೆಂಡತಿಯರ ಕೈಸೇರಬೇಕೆಂದು ನಿರ್ಧರಿಸಿ ನೀತಿಯನ್ನು ರೂಪಿಸಿದೆವು. ನಮ್ಮ ಸರ್ಕಾರ ಮದ್ಯ ನಿಷೇಧದ ಬಗ್ಗೆ ಕನಿಷ್ಟ ಆಶ್ವಾಸನೆ ಯನ್ನಾದರೂ ಕೊಡಲಿ”.

ಬಿ ಆರ್ ಪಾಟೀಲ್

“ಕಳೆದ ಬಿಹಾರದ ಚುನಾವಣೆ ಸಮಯದಲ್ಲಿ ನಾನು ಕೆಲಸದ ನಿಮಿತ್ತ ಹೋಗಿದೆ. ಆ ಸಂದರ್ಭದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಹತ್ತಿರ ಮಾತನಾಡಿದಾಗ ಅವರು ಹೇಳಿದ್ದು ನಿತೀಶ್ ಕುಮಾರ್ ಗೆದ್ದೇ ಗೆಲ್ಲುತ್ತಾರೆ, ಕಾರಣ ವಿಷ್ಟೇ ಮದ್ಯ ನಿಷೇಧ ಮಾಡುತ್ತೆನೆಂದು ಮಹಿಳೆಯರಿಗೆ ವಾಗ್ದಾನ ಮಾಡಿದ್ದಾರೆ. ಧಾರ್ಮಿಕ ಮುಖಂಡರು ಕೂಡ ಸಹ ಮದ್ಯ ನಿರ್ಬಂಧದ ಬಗ್ಗೆ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ಕೇವಲ ಪರೋಕ್ಷವಾಗಿ ಮಾತ್ರ ಬೆಂಬಲಿಸುತ್ತಿದ್ದಾರೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಕುಡುಕರ ಪ್ರಮಾಣ ಹೆಚ್ಚಾಗುತ್ತಲೇ ಇದೆ.

TOI reports on recent AIIMS studies

ಮದ್ಯ ನಿಷೇಧ ಆಂದೋಲನದ ಮೊಕ್ಷಮ್ಮ, ಸ್ವರ್ಣ ಭಟ್ ಮತ್ತು ವಿರುಪಮ ಆಂದೋಲನ ಹುಟ್ಟಿಕೊಂಡ ಬಗ್ಗೆ, ಪಾದಯಾತ್ರೆಯ ಅನುಭವ ಮತ್ತು ಮುಂದಿನ ಕಾರ್ಯಯೋಜನೆಯ ಬಗ್ಗೆ ಮಾತನಾಡಿದರು.

ಭಾಗವಹಿಸಿದ ಗಣ್ಯರೆಲ್ಲ ತಾವು ಒಂದಲ್ಲ ಒಂದುರೀತಿಯಲ್ಲಿ ಆಂದೋಲನದ ಭಾಗವಾಗಿ ಕೈಜೋಡಿಸಿ, ಚಳುವಳಿಯನ್ನು ಬಳಗೊಳಿಸಲು ನಿರ್ಧರಿಸಿದರು.

ವಿಚಾರ ಸಂಕಿರಣದ ಭಾಷಣಗಳ ವೀಡಿಯೊಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Glimpse of Padayatra by Suhasini Kaulagi

ಗ್ರಾಮ ಸೇವಾ ಸಂಘ

ಮದ್ಯನಿಷೇಧ ಆಂದೋಲನ ಕರ್ನಾಟಕ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ

ಸಂಪರ್ಕಿಸಿ : 9980043911 or 9008484880 | GramSevaSanghIndia@gmail.com

Save The Rivers Campaign- Media Reports