17-11-21 | ಗ್ರಾಮ ಸೇವಾ ಸಂಘದ ಕಳೆದ ಕೆಲವು ತಿಂಗಳ ಆಗು-ಹೋಗುಗಳು ಮತ್ತು ಒಂದು ವಿನಂತಿ

ಸ್ನೇಹಿತರೆ,

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಗ್ರಾಮ ಸೇವ ಸಂಘದ ವರದಿ ಈ ಕೆಳಕಂಡಂತಿದೆ.

  • ಪವಿತ್ರ ವಸ್ತ್ರ ಅಭಿಯಾನ :

ಕಳೆದ ಸೆಪ್ಟೆಂಬರ್ ಮತ್ತು ಅಕ್ಬೋಬರ್ ತಿಂಗಳಲ್ಲಿ ಚರಕ ಸಂಸ್ಥೆಯು ಕರ್ನಾಟಕದ ಕೆಲವು ಭಾಗದಲ್ಲಿ ಪವಿತ್ರ ವಸ್ತ್ರ ಅಭಿಯಾನವನ್ನು ಆಯೋಜಿಸಿತ್ತು. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಈ ಅಭಿಯಾನದ ಕಡೆಯ ನಾಲ್ಕು ದಿನಗಳ ವಸ್ತುಪ್ರದರ್ಶನ ನೆಡೆಯಿತು. ಗ್ರಾಮ ಸೇವಾ ಸಂಘವು ಈ ಅಭಿಯಾನಕ್ಕೆ ತನ್ನ ಸಹಯೋಗ ನೀಡಿದ್ದು ಸಾಮಾಜಿಕ ಜಾಲತಾಣದ ನಿರ್ವಹಣೆಯ ಜೊತೆಗೆ ಕೆಲವು ಕಾರ್ಯಕರ್ತರು ಸಕ್ರಿಯವಾಗಿ ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದರು. ರಾಗಿಕಣದಲ್ಲೂ ವಸ್ತುಪ್ರದರ್ಶನವನ್ನ ಆಯೋಜಿಸಿದೆ.  ಇದರ ಜೊತೆಗೆ ಅಖಿಲ ಭಾರತ ಕೈಮಗ್ಗ ನೇಕಾರರ ಒಕ್ಕೂಟ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು 5000 ರೂ ಸಹಾಯಧನ ನೀಡಿತು. ಈ ಅಭಿಯಾನದಲ್ಲಿ ಕೈಮಗ್ಗದ ಉತ್ಪನ್ನದ ( ವಸ್ತುಗಳ) ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವುದರ ಜೊತೆಗೆ ಪ್ರಸ್ತುತ ಕೈಮಗ್ಗ ಅಥವಾ ನೇಕಾರಿಕೆ ಇರುವ ಪರಿಸ್ಥಿತಿಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು.

  • ರಾಗಿಕಣ ಸಂತೆಯ ಪುನರಾರಂಭ :

ಕರೋನದಿಂದಾಗಿ ಸ್ಥಗಿತಗೊಂಡಿದ್ದ ರಾಗಿಕಣ ಸಂತೆಯನ್ನು ಅಕ್ಟೋಬರ್ 2 ರಂದು ಪುನರಾರಂಭಗೊಳಿಸಲಾಯಿತು ಮತ್ತು ಈ ಸಂತೆ ಅಕ್ಟೋಬರ್ 3 ರಂದು ಮುಂದುವರೆಯಿತು. ಗ್ರಾಮಸೇವಾಸಂಘವು ಹುಲ್-ಕುಲ್ ಮುನಿಸ್ವಾಮಪ್ಪ ಮತ್ತು ಮುನಿವೆಂಕಟಮ್ಮ ಧರ್ಮದತ್ತಿ ಟ್ರಸ್ಟೊಂದಿಗೆ ಆಯೋಜಿಸುತ್ತಾ ಬಂದಿರುವ ರಾಗಿಕಣ ಸಂತೆಯು ಐದು ವಾರಗಳನ್ನು ಯಶಸ್ವಿಯಾಗಿ ಪೂರೈಸಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಆರನೇ ವಾರಕ್ಕೆ ಮುನ್ನಡೆಯುತ್ತಿದೆ.

ಕೋವಿಡ್ ನಿಂದಾಗಿ ತತ್ತರಿಸಿದ ಹಲವು ಕೈ ಉತ್ಪಾದಕರಿಗೆ ವೇದಿಕೆಯನ್ನು ಒದಗಿಸುವ ಪ್ರಯತ್ನವನ್ನು ಈ ಮೂಲಕ ಬೆಂಗಳೂರಿನ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ನಾವು ರಾಗಿಕಣ ಸಂತೆಗೆ ದಕ್ಷತೆಯಿಂದ ಕಾರ್ಯನಿರ್ವಹಿಸಬಲ್ಲ ಜೊತೆಗೆ ಈ ಸಂತೆಯನ್ನ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಪಸರಿಸಬಲ್ಲ ಒಬ್ಬ ಪೂರ್ಣಾವಧಿ ಕಾರ್ಯಕರ್ತರನ್ನ ಹುಡುಕುತ್ತಿದ್ದೇವೆ. ತಮಗೆ ಅಂತಹ ಕಾರ್ಯಕರ್ತರು ಯಾರಾದರು ಗೊತ್ತಿದ್ದರೆ ತಿಳಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.

ನೂಲು ತೆಗೆಯುವ ಕಾರ್ಯಕ್ರಮ :

ಮೈಸೂರಿನ  ಮತ್ತು ಸ್ಥಳೀಯ ಸೈಕಲ್ ಸಂಸ್ಥೆಯಾದ “ ಟ್ರಿಣ್ – ಟ್ರಿಣ್ “ ಸೈಕಲ್ ಜಾಥವನ್ನು  ಗಾಂಧಿ ಜಯಂತಿಯ ಭಾಗವಾಗಿ ಹಮ್ಮಿಕೊಂಡಿದ್ದರು. ಗ್ರಾಮ ಸೇವಾ ಸಂಘವು ನೂಲು ತೆಗೆಯುವ ಮತ್ತು ಅದರ ಪರವಾಗಿನ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ನೂಲು ತೆಗೆಯುವ ಕಾರ್ಯಾಗಾರಗಳನ್ನು ಆಯೋಜಿಸಲಿದ್ದೇವೆ, ಈ ಮೂಲಕ ಗ್ರಾಮಸೇವಾ ಸಂಘವು ಹಳ್ಳಿ ಮತ್ತು ನಗರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದು ಈ ಕುರಿತು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲ್ಲಿದ್ದೇವೆ.    

ಅಕ್ಟೋಬರ್ 2 ರಂದು ಮೈಸೂರಿನ ರಾಮಕೃಷ್ಣ ಪಾರ್ಕಿನಲ್ಲಿ ಸಚಿದಾನಂದ ( ಸಚ್ಚು ) ಮತ್ತು ಇತರ ಕುಶಲ ಕರ್ಮಿಗಳ ಶ್ರಮದ ಪಲವಾಗಿ EMDY ಎಂಬ ಉತ್ತಮ ದರ್ಜೆಯ ಪೆಟ್ಟಿಗೆ ಚರಕವನ್ನು ಹೊರ ತಂದಿರುತ್ತಾರೆ. ನಮ್ಮ ಹಿರಿಯ ಸದಸ್ಯರಾದ ರಚನಾತ್ಮಕ ಕಾರ್ಯಕರ್ತ ಸಂತೋಷ್ ಕೌಲಗಿ, ಜನಪದ ಸೇವಾ ಟ್ರಸ್ಟ್ ಮೇಲುಕೋಟೆ, ಇವರು ಚರಕವನ್ನು ಅಂದು ನೂಲು ತೆಗೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು. ಸಚ್ಚು ಅವರೆ ಹೇಳಿರುವಂತೆ ಚರಕದಿಂದ ನಾವು ಕೇವಲ ನೂಲುತೆಗೆಯುತ್ತಿಲ್ಲ, ನಮ್ಮಲ್ಲಿ ನಾವೇ ಅಂತರ್ಮುಖಿಯಾಗುವ ಸಂವೇದನೆಗೊಳ್ಳುವ ಕ್ರಿಯೆ ಇದು.

ಮೈಸೂರಿನ  ಮತ್ತು ಸ್ಥಳೀಯ ಸೈಕಲ್ ಸಂಸ್ಥೆಯಾದ “ ಟ್ರಿಣ್ – ಟ್ರಿಣ್ “ ಸೈಕಲ್ ಜಾಥವನ್ನು  ಗಾಂಧಿ ಜಯಂತಿಯ ಭಾಗವಾಗಿ ಹಮ್ಮಿಕೊಂಡಿದ್ದರು. ಗ್ರಾಮ ಸೇವಾ ಸಂಘವು ನೂಲು ತೆಗೆಯುವ ಮತ್ತು ಅದರ ಪರವಾಗಿನ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ನೂಲು ತೆಗೆಯುವ ಕಾರ್ಯಾಗಾರಗಳನ್ನು ಆಯೋಜಿಸಲಿದ್ದೇವೆ, ಈ ಮೂಲಕ ಗ್ರಾಮಸೇವಾ ಸಂಘವು ಹಳ್ಳಿ ಮತ್ತು ನಗರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದು ಈ ಕುರಿತು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲ್ಲಿದ್ದೇವೆ.

ಸೂಚನೆ : ತಮ್ಮಲ್ಲಿ ಯಾರಿಗಾದರು ಚರಕ ಕೊಳ್ಳುವ ಆಸಕ್ತಿ ಇದ್ದಲ್ಲಿ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು. ಸಮಹಿತ್ ಎಂಟರ್-ಪ್ರೈಸಸ್, #205 & 212, ಬಿ.ಬಿ ಮಿಲ್ಸ್ ರಸ್ತೆ, ಬನ್ನಿಮಂಟಪ ( ನ್ಯೂ ಬನ್ನಿ ಮಂಟಪ್ ಎಕ್ಸ್ಟೆನ್ಷನ್ ) ಮೈಸೂರು – 570015, info@samahith.org ಅಥವಾ ಸಚ್ಚು : 8277417878

ನಿಮ್ಮಲ್ಲಿ ಒಂದು ವಿನಂತಿ :

ಗ್ರಾಮ ಸೇವಾ ಸಂಘವು ಇಬ್ಬರು ಪೂರ್ಣಾವಧಿ ಕಾರ್ಯಕರ್ತರಾದ ಅಭಿಲಾಶ್ ಸಿ,ಎ ಮತ್ತು ಪಾರ್ವತಿ.ಬಿ ( ಗೌರಿ ) ಯವರನ್ನು ಹೊಂದಿದೆ. ಗೌರಿಯವರು ಇತ್ತೀಚಿಗೆ ಪೂರ್ಣಾವಧಿ ಕಾರ್ಯಕರ್ತರಾಗಿ ಸೇರ್ಪಡೆಗೊಂಡಿದ್ದು ಲೆಕ್ಕಗಳ ನಿರ್ವಹಣೆ, ಸಂವಹನ, ದೇಣಿಗೆ ಸಂಗ್ರಹದ ಜೊತೆಗೆ ಆಫೀಸಿನ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ. ತಾವು ನೈತಿಕ ಬೆಂಬಲದ ಜೊತೆಗೆ ಆರ್ಥಿಕ ಬೆಂಬಲವನ್ನು ನೀಡಬೇಕೆಂದು ಕೇಳಿಕೊಳ್ಳುತ್ತೇವೆ.

ಗ್ರಾಮ ಸೇವಾ ಸಂಘದ ಬ್ಯಾಂಕ್ ಖಾತೆ  ಸಂಖ್ಯೆ  ಕೆಳಗಿನಂತಿದೆ:

A/C : 6820702287

IFSC : IDBI000C007

INDIAN BANK, CHAMARAJAPET BRANCH.

UPI ID: gramseva@indianbk

QR Code:

ಬರಲಿರುವ ಕಾರ್ಯಕ್ರಮಗಳು :

  • 5 ಡಿಸೆಂಬರ್ 2021 ಬೆಳಗ್ಗೆ 10 – ಸಂಜೆ 04: ಎಂದಿನಂತೆ ಭಾನುವಾರ ರಾಗಿಕಣದಲ್ಲಿ ಕೈಉತ್ಪನ್ನಗಳ, ಕೃಷಿ ಪದಾರ್ಥಗಳು ಸಂತೆಯಲ್ಲಿ ಪ್ರದರ್ಶನ ಹಾಗೂ ಮಾರಾಟಗೊಳ್ಳಲಿದೆ

ಸ್ಥಳ: ರಾಗಿಕಣ, ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ ಶಾಲೆ, ಗೊಟ್ಟಿಗೆರೆ ಬಳಿ, ಐಡಿಬಿಐ ಕೆರೆ ಹಿಂಭಾಗ, ಶಂಕರನಾಗ್ ರಸ್ತೆ, ಬೆಂಗಳೂರು. Map: .https://g.page/ragikanasanthe?share

  • ಇದೇ ನವೆಂಬರ್ 20 & 21 ರಂದು ಬೆಂಗಳೂರಿನಲ್ಲಿ ಯೋಜಿಸಿದ್ದ ಚರಕದಿಂದ ನೂಲು ತೆಗೆಯುವ ಕಾಯಾಗಾರ ಮುಂದೂಡಲಾಗಿದೆ. ಶೀಘ್ರದಲ್ಲಿ ಕಾರಯಾಗಾರದ ಮಾಹಿತಿಯನ್ನು ನಿಮಗೆ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :   99008484880 / 9980043911

ಗ್ರಾಮ ಸೇವಾ ಸಂಘ
#47, ಶೇಷನಿವಾಸ, 1ನೇ ಮುಖ್ಯ ರಸ್ತೆ, 1ನೇ ಬ್ಲಾಕ್, ತ್ಯಾಗರಾಜ ನಗರ, ಬೆಂಗಳೂರು – 70

www.gramsevasangh.org | Email: gramasevasanghindia@gmail.com | Mobile : 9980043911
Facebook : @gramsevasanghindia | Twitter : @gramsevasangha | Instagram: @gramsevasanghindia