#PavitraVastra Abhiyaana #ಪವಿತ್ರವಸ್ತ್ರ ಅಭಿಯಾನ

PavitraVastra Abhiyaana Sept – Nov 2021

Campaign for Sacred Fabric Sep – Nov’21

Campaign Started from 6th Sept 6 pm & 7th Sept 10am – 4pm At Shivmogga
You all know that peasants, artisans and workers have been in great distress in recent times. Their situation has worsened after the pandemic resulting in the closure of looms, small factories and workshops. Lakhs of meters of clothing, saris, mats, pottery and other beautiful things remain unsold.
The governments have not extended help and even when they do, the aid does not reach the beneficiaries. In these times of severe hardship, only you can help save this tradition of work.

We do not seek financial assistance from you. We would like to encourage you to buy these beautiful things produced by our artisans instead of foreign goods, chemicals and plastics. Help protect employment of the poor, build the country’s economy and prevent climate change. Above all, help us protect the health of our families.


The campaign will be attended by some of the country’s most renowned textile designers, leading handloom and handicrafts organizations, philanthropic and religious organisation.


Campaign will begin at Shivmogga on September 6 and travel across the state for three months in the form of exhibitions and exchange of ideas.

Our first Bengaluru Exhibition cum Sale is  on 29th Sept, 10 am – 7 pm at our friend Deepti Desai’s house at Malleswaram, #231, Usha Kiran, 15th Cross, Next to Surya Nest Appartment, Near MES College.


Later till Oct 10 we will be at Bengaluru at Ragi Kana – ರಾಗಿ ಕಣ, NIFT Bengaluru on Oct 2nd & 3rd, at Karnataka Chitrakala Parishath from Oct 6th – 10th.

We invite you to take part in this campaign and lend us your invaluable support! 

Organized by,

Charaka Women’s Multipurpose Cooperative Society, Desi Trust, Gram Seva Sangh and All India Handloom Weavers Federation

For more information, contact 6363885215 or charakasagara@gmail.com

#ಪವಿತ್ರವಸ್ತ್ರ_ಅಭಿಯಾನ

ಕರ್ನಾಟಕದಾದ್ಯಂತ ಕೈಉತ್ಪನ್ನಗಳ ವಸ್ತುಪ್ರದರ್ಶನ-ಮಾರಾಟಸೆಪ್ಟೆಂಬರ್ 6 ಸಂಜೆ 6, ಸೆಪ್ಟೆಂಬರ್ 7 ಬೆಳಗ್ಗೆ 10 – 8 ಶಿವಮೊಗ್ಗದಿಂದ ಆರಂಭ!


  ರೈತರು ಕುಶಲಕರ್ಮಿಗಳು ಹಾಗೂ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿರುವ ಸಂಗತಿ ತಮಗೆ ತಿಳಿದೇ ಇದೆ. ಕೋವಿಡ್ ಮಾರಿಯ ನಂತರವಂತೂ ಮಗ್ಗಗಳು ಕರ‍್ಯಾಗಾರಗಳು, ಸಣ್ಣ ಕಾರ್ಖಾನೆಗಳು, ಹೆಚ್ಚೂ ಕಡಿಮೆ ನಿಂತೇ ಹೋಗಿವೆ. ಲಕ್ಷಾಂತರ ಮೀಟರುಗಳ ಬಟ್ಟೆ ಸೀರೆ ಚಾಪೆ ಮಡಕೆ ಇತ್ಯಾದಿ ಸುಂದರ ವಸ್ತುಗಳು ಮಾರಾಟವಾಗದೆ ಉಳಿದಿವೆ.
ಸರಕಾರಗಳು ಸಹಾಯಹಸ್ತ ಚಾಚುತ್ತಿಲ್ಲ. ಚಾಚಿದಾಗಲೂ ಸಹಾಯ ಫಲಾನುಭವಿಗಳನ್ನು ತಲುಪುತ್ತಿಲ್ಲ. ಸಂಕಷ್ಟದ ಈ ಪರಿಸ್ಥಿತಿಯಲ್ಲಿ ಕಾಯಕ ಪರಂಪರೆಯನ್ನು ನೀವು ಮಾತ್ರವೇ ಉಳಿಸಬಲ್ಲಿರಿ.


  ನಿಮ್ಮಿಂದ ಧನ ಸಹಾಯ ಬೇಡುತ್ತಿಲ್ಲ ನಾವು. ಕಾಯಕದಿಂದ ಉತ್ಪಾದನೆಯಾಗುವ ಸುಂದರ ವಸ್ತುಗಳನ್ನು ಕೊಂಡು ಪ್ರೋತ್ಸಾಹಿಸಿ ಎಂದಷ್ಟೆ ಕೇಳುತ್ತಿದ್ದೇವೆ. ವಿದೇಶಿಮಾಲು, ವಿಶಭರಿತ ರಾಸಾಯನಿಕ ವಸ್ತುಗಳು, ಪ್ಲಾಸ್ಟಿಕ್ಕಿನ ಪದಾರ್ಥಗಳಿಗೆ ಬದಲಾಗಿ ಸ್ವದೇಶಿ ಪದಾರ್ಥ ಕೊಳ್ಳಿರಿ, ಬಡವರ ಉದ್ಯೋಗ ರಕ್ಷಣೆ ಮಾಡಿರಿ, ದೇಶದ ಆರ್ಥಿಕತೆಯನ್ನು ಕಟ್ಟಿ, ಹವಾಮಾನ ವೈಪರಿತ್ಯವನ್ನು ತಡೆಯಿರಿ. ಎಲ್ಲಕ್ಕಿಂತ ಮಿಗಿಲಾಗಿ, ನಮ್ಮ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಿರಿ ಎಂದಷ್ಟೆ ಹೇಳುತ್ತಿದ್ದೇವೆ.


  ಈ ಅಭಿಯಾನದಲ್ಲಿ ದೇಶದ ಹೆಸರಾಂತ ವಸ್ತ್ರ ವಿನ್ಯಾಸಕರರು, ಪ್ರಮುಖ ಕೈಮಗ್ಗ ಹಾಗೂ ಕರಕುಶಲ ಸಂಸ್ಥೆಗಳು, ಜನಪರ ಸಂಘಟನೆಗಳು ಹಾಗೂ ಮಠಮಾನ್ಯಗಳು ಭಾಗವಹಿಸಲಿವೆ.
ಅಭಿಯಾನವು ಸೆಪ್ಟಂಬರ್ 6 ರಂದು ಶಿವಮೊಗ್ಗ ಪೇಟೆಯಿಂದ ಹೊರಟು ಪ್ರದರ್ಶನಮಾರಾಟ ಹಾಗೂ ವಿಚಾರ ವಿನಿಮಯಗಳ ರೂಪದಲ್ಲಿ ಮೂರು ತಿಂಗಳಕಾಲ ರಾಜ್ಯಾದ್ಯಂತ ಸಂಚರಿಸುತ್ತ ನಿಮ್ಮೂರಿಗೆ ಬರಲಿದೆ. ಬನ್ನಿ, ಭಾಗವಹಿಸಿ!


ಪವಿತ್ರವಸ್ತ್ರ ವಸ್ತುಪ್ರದರ್ಶನ ಹಾಗೂ ಮಾರಾಟದ ಸಂಚಾರದ ಮಾರ್ಗ: ಸೆಪ್ಟೆಂಬರ್ 6 ರಂದು ಶಿವಮೊಗ್ಗ – ಉಡುಪಿ – ಶಿರಸಿ – ವಿಜಯಪುರ – ಬೆಂಗಳೂರಿನಲ್ಲಿ ನಡೆಯಲಿದೆ.

ಬೆಂಗಳೂರು : ಸೆಪ್ಟೆಂಬರ್ 29 : – ದೀಪ್ತಿ ದೇಸಾಯಿಯವರ ನಿವಾಸ, ಮಲ್ಲೇಶ್ವರಂ.#231, ಉಷಾಕಿರಣ, 15 ನೇ ಕ್ರಾಸ್, ಸೂರ್ಯನೆಸ್ಟ್ ಅಪಾರ್ಟಿಮೆಂಟ್ ನ ನಂತರ, M.E.S ಕಾಲೇಜಿನ ಹತ್ತಿರ

ಅಕ್ಟೋಬರ್ 2 ಮತ್ತು 3 : – ರಾಗಿ ಕಣ ( ಗೊಟ್ಟಿಗೆರೆ ) ಹಾಗೂ ಅದೇ ದಿನಗಳಲ್ಲಿ  NIFT ಕಾಲೇಜು, HSR ಲೇಔಟ್

ಅಕ್ಟೋಬರ್ 6 ರಿಂದ 10 : – ಚಿತ್ರಕಲಾ ಪರಿಷತ್
ಕೊರೋನದಿಂದಾಗಿ ಸಂಕಷ್ಟದಲ್ಲಿರುವ ಖಾದಿ, ಕೈಮಗ್ಗ, ಕರಕುಶಲ ವಸ್ತುಗಳು, ರೈತರು ಮತ್ತು ಇತರೆ ಕೈ ಉತ್ಪನ್ನಗಳನ್ನು ತಯಾರಿಸುವ ಜನರಿಗೆ ಬೆಂಬಲವನ್ನು ನೀಡಲು ಈ ಪವಿತ್ರ ವಸ್ತ್ರ ಅಭಿಯಾನದಲ್ಲಿ ಭಾಗವಹಿಸಬೇಕೆಂದು ಕೊರಿಕೊಳ್ಳುತ್ತೇವೆ…

ಇಂತಿ,

ಚರಕ, ದೇಸಿ, ಗ್ರಾಮ ಸೇವಾ ಸಂಘ, ಅಖಿಲ ಭಾರತ ಕೈಮಗ್ಗ ನೇಕಾರರ ಒಕ್ಕೂಟ

ದೂರವಾಣಿ- 6363885215 | charakasagara@gmail.com