23/12/2020

ಮಾನ್ಯರೇ,
ಇದೇ 18 ಡಿಸೆಂಬರ್ 2020 ರಂದು ಪ್ರತಿಧ್ವನಿ ಎಂಬ ಡಿಜಿಟಲ್ ಪತ್ರಿಕೆಯಲ್ಲಿ “ಹೆಗ್ಗೋಡಿನ ಚರಕ ನೇಕಾರರ ವಸತಿ ಯೋಜನೆ ಮನೆಗಳು ಕಾಣೆಯಾಗಿವೆ!” ಎಂಬ ತಲೆಬರಹದಲ್ಲಿ ಒಂದು ತನಿಖಾ ವರದಿಯು ಶಶಿ ಸಂಪಳ್ಳಿ ಎನ್ನುವ ಪತ್ರರ್ಕತರ ಹೆಸರಿನಲ್ಲಿ ಪ್ರಕಟವಾಗಿರುತ್ತದೆ. (https://www.pratidhvani.com/investigative-stories/2020/12/18/heggodu-charaka-weavers-housing-project) ಆದ್ದರಿಂದ ಚರಕ ಸಂಸ್ಥೆ ಈ ಪತ್ರವನ್ನು ಎಲ್ಲ ಸಾರ್ವಜನಿಕರನ್ನುದ್ದೇಶಿಸಿ ಪ್ರಕಟಿಸಬೇಕಾಗಿ ಬಂದಿದೆ.
ಚರಕ ಸಂಸ್ಥೆಯ ಹಾಗೂ ನಮ್ಮ ಮಾರ್ಗದರ್ಶಕರಾದ ಪ್ರಸನ್ನ ರವರ ವಿರುದ್ಧ ಕಳೆದ ಸೆಪ್ಟೆಂಬರ್ 2020 ರಿಂದ ಹಸಿ ಸುಳ್ಳನ್ನು ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಮೂಲಕ ಸಂಸ್ಥೆಯನ್ನು ತೇಜೋವಧೆ ಮಾಡುವ ಉದ್ದೇಶದಿಂದ ಮಾಡುತ್ತಿರುವ ಅಭಿಯಾನದ ಮುಂದುವರೆದ ಭಾಗವೇ ಇತೀಚ್ಚೇಗೆ ಬಂದ ತನಿಖಾ ವರದಿ. ಈ ವರದಿಯಲ್ಲಿ ಮಾಡಿರುವ ಗಂಭೀರವಾದ ಆರೋಪ ಸುಳ್ಳಾಗಿದ್ದು, 2009-10ರ ಕೈಮಗ್ಗ ಮತ್ತು ಜವಳಿ ಇಲಾಖೆಯ, ನೇಕಾರರ ವಸತಿ ಯೋಜನೆಯಡಿಯಲ್ಲಿ ಬಿಡಿಗಾಸನ್ನು ಸಂಸ್ಥೆಗಾಗಿ ಬಳಸಿರುವುದಿಲ್ಲ. ಯೋಜನೆಯ ಅಡಿಯಲ್ಲಿ ಬಂದ ಪೂರ್ತಿಹಣವು ಫಲಾನುಭಾವಿಗಳಿಗೆ ಬ್ಯಾಂಕಿನ ಮೂಲಕವೇ ಸಂದಾಯವಾಗಿದೆ. ಲೇಖನದಲ್ಲಿ ನಮೂದಿಸಿರುವ ಒಬ್ಬ ಫಲಾನುಭವಿ, ಚರಕದ ಕೆಲಸಗಾರರಾಗಿದ್ದ ಸತೀಶ್ ಬಿನ್ ರಾಮಪ್ಪ ರವರಾಗಿದ್ದು, ಅವರಿಗೆ ಸಂಪೂರ್ಣ ಹಣಸಂದಾಯವಾದ ಬ್ಯಾಂಕ್ ವಿವರವನ್ನು ಅವರೇ ಖುದ್ದಾಗಿ ಇಂದು ಚರಕಕ್ಕೆ ತಲುಪಿಸಿರುತ್ತಾರೆ (ಅದನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ.). ಅವರ ಹೇಳಿಕೆಯನ್ನು ತಿರುಚಿ ಬರೆಯಲಾಗಿದೆ ಎಂದು ಅವರು ತಿಳಿಸಿರುತ್ತಾರೆ.



ಈ ಆರೋಪಗಳಷ್ಟೇ ಅಲ್ಲದೆ ಅತ್ಯಂತ ಸರಳ ಅಥಿತಿ ಗೃಹವನ್ನು (ಆಶ್ರಮಕ್ಕೆ ಭೇಟಿಕೊಟ್ಟ ಪ್ರತಿಯೊಬ್ಬರಿಗೂ ತಿಳಿದಿದೆ), ತರಭೇತಿಗಾಗಿ ಕೇಂದ್ರಸರ್ಕಾರದ ನೆರವಿನಿಂದ ಅತಿ ಕಡಿಮೇ ವೆಚ್ಚದಲ್ಲಿ ಕಟ್ಟಲಾಗುತ್ತಿರುವ ಸಭಾಂಗಣವನ್ನು ಅತಿರೇಕವಾಗಿ ಬಿಂಬಿಸಿರುವುದು, ವಾಸ್ತವದಲ್ಲಿ ಆಶ್ರಮದಲ್ಲಿ ಪ್ರಸ್ತುತ ಉತ್ಪಾದನೆಗೆ ಇರುವ ಕಟ್ಟಡಗಳು ಸಾಕಾಗದೇ ಇರುವುದರಿಂದ ಕೇಂದ್ರಸರ್ಕಾರದ ಅನುದಾನದ ಅಡಿಯಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದರೆ, ಕಟ್ಟಡಗಳ ಬಳಕೆಯಾಗುತ್ತಿಲ್ಲವೆಂದು ಆರೋಪಿಸಲಾಗಿದೆ. ಆರೋಪಿಸುತ್ತಿರುವವರು ದೇಸಿ ಸಂಸ್ಥೆಯು ಚರಕ ಸಂಸ್ಥೆಯನ್ನು ಶೋಷಣೆಮಾಡುತ್ತಿದೆ ಎಂದು ಮೊದಲಿನಿಂದಲು ಚಿತ್ರಿಸುತ್ತಾ ಬಂದಿದ್ದಾರೆ. ಆದರೆ ವಾಸ್ತವದಲ್ಲಿ ದೇಸಿ ಟ್ರಸ್ಟ್ ಚರಕ ಸಂಸ್ಥೆಯ ಆಸ್ತಿಯೇ ಆಗಿದೆ, ದೇಸಿ ಟ್ರಸ್ಟಿನಲ್ಲಿ ಕನಿಷ್ಟ ನಾಲ್ಕುಮಂದಿ ಚರಕ ಸಂಸ್ಥೆಯಿಂದ ಚುನಾಯಿತರಾದ ಪ್ರತಿನಿಧಿಗಳು ಟ್ರಸ್ಟ್ಟಿಗಳಾಗಿರುತ್ತಾರೆ. ಉಳಿದಂತೆ ಕೈಮಗ್ಗ ಕ್ಷೇತ್ರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಗೌರವಾನ್ವಿತ ನಾಗರೀಕರನ್ನು ಅವರ ಸೇವೆಯನ್ನು ಕೋರಿ ಟ್ರಸ್ಟಿಗಳಾಗಿ ಆಯ್ಕೆಮಾಡಲಾಗುತ್ತದೆ.


ಚರಕ ಸಂಸ್ಥೆಗೆ ಇದು ಹೊಸತೇನು ಅಲ್ಲ, ಸಂಘದ ಆರಂಭದ ದಿನಗಳಿಂದಲೂ ಈರೀತಿಯ ಸವಾಲುಗಳನ್ನು ಚರಕ ಸಂಸ್ಥೆ ಸ್ಥಳೀಯವಾಗಿ ಎದುರಿಸುತ್ತಲೇ ಬಂದಿದೆ. ಚರಕ ಸಂಸ್ಥೆ ಗ್ರಾಮೀಣ ಬಡವರೇ ಅದರಲ್ಲೂ ಮುಖ್ಯವಾಗಿ ಹೆಚ್ಚಾಗಿ ಕೆಳಜಾತಿ ಕೆಳವರ್ಗಗಳ ಮಹಿಳೆಯರು ತಮಗಾಗಿಯೇ ಕಟ್ಟುತ್ತಿರುವ ಸುಸ್ಥಿರ ಜೀವನೋಪಾಯದ ಪರ್ಯಾಯ ವ್ಯವಸ್ಥೆಯಾಗಿದೆ. ಇದರಿಂದ ಸ್ಥಳೀಯವಾಗಿ ಮೂಡಿರುವ ಸಾಮಾಜಿಕ ಸಾಮರಸ್ಯವನ್ನು ಕೆಡಿಸುವ ಷಡ್ಯಂತರ ಇದಾಗಿದೆ ಎಂಬುದು ನಮ್ಮ ಅನುಮಾನ. ಆದ್ದರಿಂದ ನಮ್ಮ ಈ ಪ್ರಯತ್ನ ಕೇವಲ ಉತ್ಪಾದನೆಯಷ್ಟೆ ಅಲ್ಲ, ಒಂದು ಸರ್ವಾಂಗೀಣ ಪರ್ಯಾಯ ವ್ಯವಸ್ಥೆಯನ್ನು ಕಟ್ಟುವ ಜನಚಳುವಳಿಯಾಗಿದೆ.. ಈ ಸುದ್ಧಿ ಬಂದಕೂಡಲೇ ತಾವೆಲ್ಲಾ ವಯಕ್ತಿಕವಾಗಿ ಚರಕ ಸಂಸ್ಥೆಯ ಜೊತೆಗಿರುವಿರೆಂದು ಅಗಾಧವಾದ ಪ್ರೀತಿಯನ್ನು ವ್ಯಕ್ತಪಡಿಸಿರುತ್ತೀರಿ. ಇದು ನಮ್ಮ ನೈತಿಕ ಧೈರ್ಯವನ್ನು ಹೆಚ್ಚಿಸಿದೆ, ಹೀಗೆಯೇ ಸಾಮರಸ್ಯದ ಸಮಾಜ ಕಟ್ಟುವ ಪ್ರಕ್ರಿಯೆಯಲ್ಲಿ ತಾವೆಲ್ಲರೂ ಜೊತೆಯಾಗಬೇಕೆಂದು ಕೋರುತ್ತೇವೆ.
ಚರಕ ಹಾಗೂ ದೇಸಿ ಸಂಸ್ಥೆಯ ಬಾಗಿಲೂ ಎಲ್ಲರಿಗೂ ತೆರೆದಿದ್ದು, ಪ್ರಸ್ತುತ ಆರೋಪಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಲು ನಾವು ಸ್ವಾಗತಿಸುತ್ತೇವೆ.
ಇಂತಿ
ಶ್ರೀಮತಿ. ಗೌರಮ್ಮ
ಅಧ್ಯಕ್ಷರು
ಆಡಳಿತ ಮಂಡಳಿ
ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ನಿ.,
charakasagara@gmail.com
www.charaka.in
:
ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ನಿ., ಇಷ್ಟೇಲ್ಲ ಆರೋಪ ಹಾಗೂ ಕೋವಿಡ್‍ನಿಂದಾದ ಸಂಸ್ಥೆಯ ಆರ್ಥಿಕ ಬಿಕ್ಕಟಿನ ನಡುವೆಯು ಕೆಳಗಿನ ಚಿತ್ರಗಳಲ್ಲಿರುವ ಕೈಮಗ್ಗೇತರ ಕೆಲಸಗಳನ್ನು ಮಾಡಿಸುವ ಮೂಲಕ ಚರಕ ಸಂಸ್ಥೆ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುತ್ತಿದೆ. ಆ ಕಾರಣ ಸಂಸ್ಥೆಯ ಸದಸ್ಯರಿಗೆ ಪ್ರಸತ್ತುತ ಸಂಕಷ್ಟದ ನಡುವೆಯು ಸಾಧ್ಯವಾದಷ್ಟು ಕೆಲಸ ಉಳಿಸಿಕೊಂಡು ಬಂದಿದೆ.



ಸ್ನೇಹಿತರೇ
ಗ್ರಾಮ ಸೇವಾ ಸಂಘದ ಮುಖಂಡರು ಹಾಗೂ ಮಾರ್ಗದರ್ಶಕರಾದ ಪ್ರಸನ್ನ ಹಾಗೂ ನಮ್ಮ ಹುಟ್ಟಿನಿಂದ ನಮ್ಮೊಡನೆ ಒಡನಾಡುತ್ತಿರುವ ಒಂದು ಆದರ್ಶ ಸಂಸ್ಥೆ ಚರಕ ಮಹಿಳಾ ಸಹಕಾರಿ ಸಂಘದ ವಿರುದ್ಧ ಕೆಲವು ಹಿತಾಸಕ್ತಿಗಳು ಕೆಲಸ ಮಾಡುತ್ತಿದೆ. ಸುಳ್ಳು ಆರೋಪ ಹಾಗೂ ತೇಜೋವಧೆಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಇಳಿದಿದ್ದಾರೆ ಆದ್ದರಿಂದ ನಮ್ಮ ಸದಸ್ಯ ಸಂಸ್ಥೆಯಾದ ಚರಕ ಸಂಸ್ಥೆಯ ಈ ಸ್ಪಷ್ಟನೆಯನ್ನು ನಾವು ಸಾರ್ವಜನಿಕರ ಬಳಕೆಗಾಗಿ ಪ್ರಕಟಿಸುತ್ತಿದ್ದೇವೆ.
ಇಂತಿ
ಕಾರ್ಯದರ್ಶಿಗಳು
ಗ್ರಾಮ ಸೇವಾ ಸಂಘ
9980043911
gramsevasanghindia@gmail.com