ಮತೀಯತೆ ಬೇಡ

ಕರೋನಾದಿಂದ ಸತ್ತವರೆಲ್ಲ ಒಂದೇ ಸಮುದಾಯದವರು, ಈಗಲೂ ಅವರು ಪ್ರಾರ್ಥನೆಯ ಹೆಸರಿನಲ್ಲಿ ಗುಂಪು ಸೇರುವುದೇಕೆ? ಎಂಬ ತಲೆಬರಹದ ಸುದ್ದಿಯೊಂದನ್ನು, ಕನ್ನಡದಲ್ಲಿ ಪ್ರಕಟವಾಗುವ ರಾಷ್ಟ್ರೀಯ ದಿನಪತ್ರಿಕೆಯೊಂದರ ಮುಖಪುಟದಲ್ಲಿ, ತುಂಬ ರೋಚಕವಾಗಿ ಪ್ರಕಟಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಬರೇ ಇಂತಹದ್ದೇ ಸುದ್ದಿಗಳು ತುಂಬಿಕೊಂಡಿರುತ್ತವೆ! ಕರೋನಾ ವೈರಸ್ಸನ್ನು ತಡೆಯುವ ಉತ್ಸಾಹದಲ್ಲಿ ಮತೀಯ ವೈರಸ್ಸನ್ನು ಹರಡುತ್ತಿದ್ದೇವೆ ನಾವು! ಸರಕಾರಗಳು ವೈರಸ್ಸನ್ನು ತಡೆಯುವ ಕೆಲಸದಲ್ಲಿ ಗಂಭಿರವಾಗಿ ತೊಡಗಿಕೊಂಡಿರುವಾಗ, ಅವುಗಳೊಟ್ಟಿಗೆ ಸಹಕರಿಸುವ ಬದಲು ಈ ರೀತಿಯ ಸುದ್ದಿಗಳನ್ನು ಹರಡಬಹುದೇ ನಾವು? ನಾವೂ ಸಹ ನಮ್ಮ ಮಂದಿರಗಳಲ್ಲಿ, ತಿಳಿಯದೆ, ಒಟ್ಟಾಗಿ ಪೂಜಿಸಿರಲಿಲ್ಲವೇ? ಹಸಿದವರಿಗೆ ಊಟ ಹಂಚುತ್ತಿರುವಾಗ ದೆಹಲಿಯಲ್ಲಿ ಮೂರುವರೆ ಸಾವಿರ ಬಡವರು ಮುಗಿಬಿದ್ದು ಊಟ ಮಾಡಲಿಲ್ಲವೇ?

ತಪ್ಪು ಮಾಡುವ ಪ್ರಜೆಗಳನ್ನು ತಿದ್ದುವ, ಹಾಗೂ ಅಗತ್ಯಕಂಡರೆ ಶಿಕ್ಷಿಸುವ, ಸಂವಿಧಾನಬದ್ಧ ಹಕ್ಕನ್ನು ನಾವು ನಮ್ಮ ಸರಕಾರಗಳಿಗೆ ನೀಡಿರುವೆವಲ್ಲವೆ? ಸಾಮಾಜಿಕ ದೂರೀಕರಣ (ಸೊಷಿಯಲ್ ಡಿಸ್ಟೆಂಸಿಂಗ್) ಎಂಬ ತತ್ವವನ್ನು ತಪ್ಪಾಗಿ ಹಾಗೂ ಅಪಾಯಕಾರಿಯಾಗಿ ಅರ್ಥೈಸುತ್ತಿದ್ದೇವಲ್ಲವೆ ನಾವು? ವಿಷಮ ಘಳಿಗೆಯಲ್ಲಿ ದೇಶದ ಒಗ್ಗಟ್ಟನ್ನು ಕಾಪಾಡೋಣ, ಒಡಕನ್ನು ಪ್ರಚೋದಿಸುವುದು ಬೇಡ.

  • ಗ್ರಾಮ ಸೇವಾ ಸಂಘ

Email ID: gramsevasanghindia@gmail.com | Mobile: 9980043911 |  www.gramsevasangh.org

Address: Gram Seva Sangh, Flat #102, Shesha Nivas, 1st Block, 1st Main, Thyagaraj Nagar, Bengaluru-560070