ತುರ್ತಾದ ಹಣಕಾಸು ನೆರವು: ನಿಮ್ಮಲ್ಲೊಂದು ಮನವಿ
ಗ್ರಾಮ ಸೇವಾ ಸಂಘ
ನಲ್ಮೆಯ ಗ್ರಾಮ ಸೇವಾ ಸಂಘದ ಬಂಧುಗಳೇ,
2015 ರಿಂದ ಗ್ರಾಮ ಸೇವಾ ಸಂಘವು ಹಳ್ಳಿ ಮತ್ತು ಪಟ್ಟಣಗಳ ಶ್ರಮಿಕರನ್ನು ಹಲವಾರು ಕಾರ್ಯಕ್ರಮ, ಹೋರಾಟ ಮತ್ತು ಸತ್ಯಾಗ್ರಹಗಳ ಮೂಲಕ ಒಂದುಗೂಡಿಸಿ ಹೊಸ ಶಕ್ತಿಯನ್ನಾಗಿಸುವ ನಿಟ್ಟಿನಲ್ಲಿ ಸಾಗುತ್ತಿರುವುದು ನಿಮಗೆ ತಿಳಿದಿದೆ. ಸದ್ಯದ ಪವಿತ್ರ ಆರ್ಥಿಕತೆಯ ಸತ್ಯಾಗ್ರಹವು ದೊಡ್ಡ ನಗರಗಳಲ್ಲ್ಲಿ ಬಹಳ ಆಶಾದಾಯಕವಾದ ಪ್ರತಿಕ್ರಿಯೆಯನ್ನು ಕಂಡಿದ್ದು, ಹಾಗೇ ಮುಂದುವರೆದು ಕೆಲವು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ವ್ಯಾಪಿಸಿ, ಭಾರೀ ಮಟ್ಟದಲ್ಲಿ ಜನರ ಒಪ್ಪಿಗೆ ಮತ್ತು ಮೆಚ್ಚಿಗೆಯನ್ನು ಸತತವಾಗಿ ಕಾಣುತ್ತಲಿದ್ದೇವೆ ಎಂದು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಚಿಸುತ್ತೇವೆ.
ಇದೆಲ್ಲದರ ಪರಿಣಾಮವಾಗಿ ಕೆಲವು ದಿವಸಗಳ ಹಿಂದೆ ಕೇಂದ್ರ ಸರಕಾರವು ಗ್ರಾಮ ಸೇವಾ ಸಂಘವನ್ನು ದೆಹಲಿಗೆ ಆಹ್ವಾನಿಸಿ ನಮ್ಮ ಬೇಡಿಕೆಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಒಂದು ತಿಂಗಳ ಒಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಳಿಕೊಂಡಿದ್ದೇವೆ. ಆದರೆ ಸರಕಾರದಿಂದ ಪವಿತ್ರ ಆರ್ಥಿಕತೆಯ ನ್ಯಾಯೋಚಿತ ಬೇಡಿಕೆಗಳಿಗೆ ಮನ್ನಣೆ ಪಡೆಯಲು ದೊಡ್ಡ ಮಟ್ಟದ ಜನಾಂದೋಲನವೊಂದೇ ದಾರಿ ಎಂಬುದು ನಮ್ಮ ಗ್ರಹಿಕೆ. ಆದ್ದರಿಂದ ಬರುವ ದಿನಗಳಲ್ಲಿ ಈ ವಿಚಾರಗಳನ್ನು ಹೆಚ್ಚು ಹೆಚ್ಚು ಊರು ಕೇರಿಗಳ ಜನರ ಮುಂದಿಟ್ಟು ಹೋರಾಟವನ್ನು ಸಬಲಗೊಳಿಸುವ ಎಲ್ಲ ಕ್ರಮಗಳನ್ನು ನಾವು ಕೈಗೊಳ್ಳುವುದೆಂದು ನಿರ್ಧರಿಸಿದ್ದೇವೆ. ಈ ಕೆಲಸಕ್ಕೆ ಪೂರ್ವಭಾವಿಯಾಗಿ ಗ್ರಾಮ ಸೇವಾ ಸಂಘ ಕಚೇರಿಯು ಹೊಸ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ಸಕ್ಷಮವಾಗಿ ನಿರ್ವಹಿಸಲು ಒಬ್ಬ ಪೂರ್ಣಕಾಲಿಕ ಮತ್ತು ಇಬ್ಬರು ಅರ್ಧಕಾಲಿಕ ಕಾರ್ಯಕರ್ತರನ್ನು ನೇಮಿಸಲಾಗಿದೆ.
ಒಂದು ರೀತಿಯಲ್ಲಿ ನಮ್ಮ ಐದು ಜನ ಕಾರ್ಯಕರ್ತರು ಸ್ವಯಂಸೇವಕರೂ ಹೌದು – ಪ್ರಚಲಿತ ಸಂಭಾವನೆಗಿಂತ ಬಹು ಕಡಿಮೆ ಗೌರವ ಧನಕ್ಕೆ ತಮ್ಮ ಸಾಮಾಜಿಕ ಕಳಕಳಿಗಳಿಂದ ಪ್ರೇರಿತರಾಗಿ ಇವರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ವೆಚ್ಚಗಳೊಂದಿಗೆ ಕರ್ನಾಟಕದಲ್ಲಿ ಹಮ್ಮಿಕೊಂಡಿರುವ ನಮ್ಮ ಕಾರ್ಯಕ್ರಮಗಳ ವೆಚ್ಚವೂ ಸೇರಿ ತಿಂಗಳ ಖರ್ಚಿನ ಕೊರತೆ ಸುಮಾರು ಒಂದು ಲಕ್ಷ ರೂಪಾಯಿಗಳಷ್ಟು ಇದೆ. ಇಂದು ಈ ಮಹದಾಶಯದ ಸತ್ಯಾಗ್ರಹವನ್ನು ನಡೆಸಲು ನಮಗೆ ಸಂಪನ್ಮೂಲಗಳ ದೊಡ್ಡ ಕೊರತೆಯಿದೆ. ಈ ವೆಚ್ಚಗಳನ್ನು ಪೂರೈಸುವಲ್ಲಿ ನಿಮ್ಮೆಲ್ಲರ ಉದಾರ ಕೊಡುಗೆಗಳು ಅತ್ಯಗತ್ಯವಾಗಿದೆ. ನಿಮ್ಮಲ್ಲಿ ನಮ್ಮ ಕೋರಿಕೆಗಳು ಎರಡು:
- ಪ್ರತಿ ತಿಂಗಳೂ ನಿಮ್ಮ ಗಳಿಕೆಯ ಸ್ವಲ್ಪ ಭಾಗವನ್ನು (ಉದಾ: ರೂ. 2೦೦೦ ದಿಂದ 10,೦೦೦ ದ ವರೆಗೆ) ಗ್ರಾಮ ಸೇವಾ ಸಂಘಕ್ಕೆ ಕೊಡುವ ಸಂಕಲ್ಪವನ್ನು ಮಾಡಿ ನಮಗೆ ತಿಳಿಸಿರಿ. ಪ್ರತಿ ತಿಂಗಳು ಕೊಡಲಾಗದ ಸಂದರ್ಭದಲ್ಲಿ ರೂ. 12,೦೦೦ ಅಥವಾ ಹೆಚ್ಚು ಮೊತ್ತವನ್ನು ವರ್ಷಕ್ಕೊಮ್ಮೆ ಕೊಡುವ ನಿರ್ಧಾರವನ್ನು ಕೂಡ ನೀವು ಮಾಡಬಹುದು.
- ನಮ್ಮ ಉದ್ದೇಶಗಳ ಬೆಂಬಲಿಗರಾಗಿ ನಿಮ್ಮ ಸ್ನೇಹಿತ, ಬಂಧು ಸಹೋದ್ಯೋಗಿ ವರ್ಗಗಳಲ್ಲಿ ನಮ್ಮ ಕೆಲಸದ ಬಗ್ಗೆ ತಿಳಿಸಿ ಅವರನ್ನು ಕೂಡ ನಮ್ಮ ಬಳಗಕ್ಕೆ ಸೇರಿಸಿ ಅವರ ಮೂಲಕ ಜನ ಧನ ಸಹಾಯದ ಸಂಕಲ್ಪವನ್ನು ಅನುವು ಮಾಡಿಕೊಡಿ.
ನಿಮ್ಮ ಇತ್ಯಾತ್ಮಕ ಪ್ರತಿಕ್ರಿಯೆಗಳನ್ನು ನಾವು ಎದಿರುಗಾಣುತ್ತಿದ್ದೇವೆ. ಈಚೆಗೆ ಗ್ರಾಮ ಸೇವಾ ಸಂಘದ ಹೆಸರಿನಲ್ಲೇ ಒಂದು ಚಾಲ್ತಿ ಖಾತೆ (current account) ತೆರೆಯಲಾಗಿದೆ. ವಿವರಗಳು ಕೆಳಕಂಡಂತಿವೆ
Name: Gram Seva Sangh
Ac. No.: 6820702287
IFSC Code: IDIB000C007
Bank: Indian Bank
Branch: Chamarajapete, Bengaluru
ಧನ್ಯವಾದಗಳು
(ಪ್ರಸನ್ನ)
ಹಿರಿಯ ಮಾರ್ಗದರ್ಶಿಗಳು, ಗ್ರಾಮ ಸೇವಾ ಸಂಘ
ಗ್ರಾಮ ಸೇವಾ ಸಂಘ
Flat #102, Shesha Nivas, 1st Block, 1st Main,Thyagarajanagar, Bengaluru-560028 | www.GramSevaSangh.org | gramsevasanghindia@gmail.com | Mobile : 9980043911 | Twitter : gramasevasangha | FaceBook: GramSevaSanghIndia | Youtube: Gram Seva Sangh