ನೇಕಾರರ ಬನಶಂಕರಿ ಪಾದಯಾತ್ರೆ ಯಿಂದ ಎಲ್ಲ ಪವಿತ್ರ ಆರ್ಥಿಕ ಕ್ಷೇತ್ರಗಳ ವರೆಗೆ ವಿಸ್ತರಿಸಿದ ಸತ್ಯಾಗ್ರಹ

Date: 1, Dec, 2019

Kaimagga Satyagraha in Jan 2014 (L-R, Prasanna, Uzramma, B Jayashri)

1. ಏಳು ವರ್ಷಗಳ ಹಿಂದೆ ಬನಶಂಕರಿ ಯಾತ್ರೆ ಎಂಬ ಪಾದಯಾತ್ರೆ ಮೂಲಕ ಕೈಮಗ್ಗ ನೇಕಾರರು ಪ್ರಾರಂಭಿಸಿದ ಸತ್ಯಾಗ್ರಹವು, ಎಲ್ಲ ಕೈಉತ್ಪಾದಕರ ಸತ್ಯಾಗ್ರಹವಾಗಿ, ಇಂದು ನಗರದ ಕಾರ್ಮಿಕರನ್ನು ಒಳ್ಳಗೊಂಡತೆ ಎಲ್ಲ ಪವಿತ್ರ ಆರ್ಥಿಕ ಕ್ಷೇತ್ರಗಳ ಸತ್ಯಾಗ್ರಹವಾಗಿ ವಿಸ್ತರಿಸಿದೆ.2. ಸೆಪ್ಟೆಂಬರ್ 15 ಸತ್ಯಾಗ್ರಹ ಆರಂಭ

2. ಸೆಪ್ಟೆಂಬರ್ 15 ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ ಆರಂಭ

3. ಸೆಪ್ಟೆಂಬರ್ 26 ಯುವಕರಿಗಾಗಿ ಖಾದಿ ಫ್ಯಾಷನ್ ಶೋ. ಹೆಸರಾಂತ ವಿನ್ಯಾಸಕಾರ ಪ್ರಸಾದ್ ಬಿಡ್ಡಪ್ಪ ಅವರಿಂದ.

4. ಸೆಪ್ಟೆಂಬರ್ 27 ವಾಡಿಯಾ ಸಭಾಂಗಣದಲ್ಲಿ ಮೂಲ ರಾಮಾಯಣ ರಂಗರೂಪಕದ ಪ್ರದರ್ಶನ. ಎಂ.ಡಿ.ಪಲ್ಲವಿ, ನಾದ ಮಣಿನಾಲ್ಕೂರು ಹಾಗೂ ಪ್ರಸನ್ನ ನಡೆಸಿಕೊಟ್ಟರು

5. ಸೆಪ್ಟೆಂಬರ್ 28 ಎಂ.ಜಿ ರಸ್ತೆ, ಸಾರ್ವಜನಿಕ ದೇಣಿಗೆ ಸಂಗ್ರಹ. ನಟ ಕಿಶೋರ್ ಹಾಗೂ ಪ್ರಮುಖ ನಾಗರೀಕರು ಭಾಗವಹಿಸಿದ್ದರು.

6. ಸೆಪ್ಟೆಂಬರ್ 29 ಗಾಂಧೀ ಭವನದಲ್ಲಿ ಮುಶೈರಾ ಕಾರ್ಯಕ್ರಮ.

7. ಅಕ್ಟೋಬರ್ 1 ಪವಿತ್ರ ಆರ್ಥಿಕತೆಯ ಬಗ್ಗೆ ಕಾರ್ಯಗಾರ, ಸಂತ ಜೋಸೆಫ್ ಸಭಾಂಗಣ.

8. ಅಕ್ಟೋಬರ್ 2 ಸರಣಿ ಉಪವಾಸ ಸತ್ಯಾಗ್ರಹ ಆರಂಭ. ವಲ್ಲಭ ನಿಕೇತನ ಬೆಂಗಳೂರು. ಎಸ್.ಆರ್.ಹಿರೇಮಠ್, ಅಭಯ್ ಹಾಗೂ ಆಭಿಲಾಷ್ ಉಪವಾಸಮಾಡಿದರು.

9. ಅಕ್ಟೋಬರ್ 3 ಕೈಗಾರಿಕಾ ಕಾರ್ಮಿಕರ ಭೃಹತ್ ಸಮಾವೇಶ. ಮಕ್ಕಳಕೂಟ ಸಭಾಂಗಣ. ಪರಿಸರ ಹೋರಾಟಗಾರ್ತಿ ವಂದನಾ ಶಿವ ಪಾಲ್ಗೊಂಡರು.

10. ಅಕ್ಟೋಬರ್ 2 ರಿಂದ 5 ರವರೆಗೆ ಸರಣಿ ಉಪವಾಸದ ಮುಂದುವರಿಕೆ.

11. ಅಕ್ಟೋಬರ್ 6 ಪ್ರಸನ್ನ ರಿಂದ ಅನಿರ್ದಿಷ್ಟ ಅವದಿಯ ಉಪವಾಸ ಆರಂಭ.

12. ಅಕ್ಟೋಬರ್ 10 ಮಾಜಿ ಪ್ರಧಾನಿ ದೇವೆಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ. ಕರ್ನಾಟಕದ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್‍ನಾರಾಯಣ್ ಭೇಟಿ, ಹಾಗೂ ಮಾತುಕತೆ.

13. ಅನಿರ್ಧಿಷ್ಟ ಉಪವಾಸವನ್ನು ಬೆಂಬಲಿಸಿ ಕರ್ನಾಟಕದ ವಿವಿದ ಭಾಗಗಳಲ್ಲಿ ಪ್ರತಿಭಟನಾ ಸಭೆಗಳು ಹಾಗೂ ಉಪವಾಸ ಕಾರ್ಯಕ್ರಮ.

14. ಅಕ್ಟೋಬರ್ 11, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿ. ಕೆಂದ್ರ ಸರ್ಕಾರ ಮಾತುಕತೆಗೆ ಸಿದ್ದ, ತಿಂಗಳ ಅವದಿಯಲ್ಲಿ ಎಮ್.ಎಸ್.ಎಮ್.ಇ ಹಾಗೂ ವಿತ್ತ ಮಂತ್ರಾಲಯಗಳ ಜೊತೆಗೆ ಮಾತುಕತೆ ಎರ್ಪಡಿಸಲಾಗುವುದು ಎಂಬ ಆಶ್ವಾಸನೆ. ಉಪವಾಸ ನಿಲ್ಲಿಸುವಂತೆ ಮನವಿ.

15. ಏಳುದಿನಗಳ ಉಪವಾಸದ ನಂತರ, ಅಕ್ಟೋಬರ್ 12 ಸಂಜೆ 6 ಗಂಟೆಗೆ, ಉಪವಾಸ ಸ್ಥಳದಲ್ಲಿ ನಡೆದ ಜೆ.ಪಿ ದಿನಾಚರಣೆ ಕಾರ್ಯಕ್ರಮದಲ್ಲಿ ಉಪವಾಸ ಅಂತ್ಯಗೊಳಿಸಲಾಯಿತು

16. ಅಕ್ಟೋಬರ್ 20 ರಿಂದ ನವೆಂಬರ್ 25ರ ವರೆಗೆ ಕರ್ನಾಟಕದ ವಿವಿದ ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕು ಕೇಂದ್ರಗಳಲ್ಲಿ ಸತ್ಯಾಗ್ರಹ ಸಮಾವೇಶಗಳು ನಡೆದವು. ಸುರಪುರದಲ್ಲಿ ನಡೆದ ಭೃಹತ್ ನೇಕಾರರ ಸಮಾವೇಶ, ಹಾಸನದಲ್ಲಿ ನಡೆದ ಸಮಾವೇಶ ಮಂಗಳೂರು ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ನಡೆದ ಸಮಾವೇಶಗಳು ಗಮನಾರ್ಹವಾದವು.

17. ಡಿಸೇಂಬೆರ್ 1, ಗ್ರಾಮೀಣ ಹಾಗೂ ಪಟ್ಟಣದ ಕಾರ್ಮಿಕರು ಹಾಗೂ ಪರಿಸರ ಹೋರಾಟಗಾರರು ಒಟ್ಟಾಗಿ ಭೃಹತ್ ಜಂಟಿ ಸಮಾವೇಶ.

ಮುಂದೆಯೂ ನಮ್ಮೊಂದಿಗೆ ರಚನಾತ್ಮಕ ಹೋರಾಟದಲ್ಲಿ ತಾವು ಸಕ್ರಿಯವಾಗಿ ಭಾಗಿಯಾಗಿರುವಿರೆಂದು ಆಹಿಸುತ್ತೇವೆ