ಪವಿತ್ರ ಆರ್ಥಿಕತೆ

ಒಂದು ಸಂವಾದ

ಭಾನುವಾರ, 15ನೇ ಸೆಪ್ಟೆಂಬರ್ 2019, ಬೆಳಗ್ಗೆ 10:30 – ಮಧ್ಯಾಹ್ನ 2

ಕಸ್ತೂರಿಬಾ ಸಭಾಂಗಣ, ಗಾಂಧಿ ಭವನ, ಬೆಂಗಳೂರು -01

ಗ್ರಾಮ ಸೇವಾ ಸಂಘವು ಪವಿತ್ರ ಆರ್ಥಿಕತೆಯನ್ನು ಉಳಿಸಲು ಸತ್ಯಾಗ್ರಹವನ್ನು ಪ್ರಾರಂಭಿಸಲಿದೆ. ಪವಿತ್ರ ಆರ್ಥಿಕತೆಯೆಂದರೆ ಅತ್ಯಂತ ಕಡಿಮೆ ಹೂಡಿಕೆಮಾಡಿ ಅತ್ಯಂತ ಹೆಚ್ಚು ಜನರಿಗೆ ದುಡಿಮೆಯ ಮಾರ್ಗ ತೋರಿಸುವ ಉತ್ಪಾದನಾ ವ್ಯವಸ್ಥೆ. ಕಡಿಮೆ ಹೂಡಿಕೆ ಎಂದಾಗ, ಹಣದ ಕಡಿಮೆ ಹೂಡಿಕೆಯೂ ಹೌದು, ಪ್ರಕೃತಿಯ ಕಡಿಮೆ ಹೂಡಿಕೆಯೂ ಹೌದು. ಇವೆರಡೂ ಕಡಿಮೆ ಇದ್ದಷ್ಟೂ ಒಳ್ಳೆಯದು ಹೌದು. ಪ್ರಕೃತಿಗೂ ಒಳ್ಳೆಯದು ಪುರುಷನಿಗೂ ಒಳ್ಳೆಯದು.

ಸೋಲುತ್ತಿರುವ ರಾಕ್ಷಸ ಆರ್ಥಿಕತೆ

                ಇಂದು ಮೇಲುಗೈ ಸಾಧಿಸಿರುವ ಆರ್ಥಿಕತೆ ಪವಿತ್ರ ಆರ್ಥಿಕತೆಗೆ ವಿರುದ್ಧವಾದದ್ದು. ಅದು ರಾಕ್ಷಸ ಆರ್ಥಿಕತೆ, ಹೌದು, ತನ್ನ ಗುಣ ಹಾಗೂ ಗಾತ್ರ ಎರಡರಲ್ಲೂ, ಅದು ರಾಕ್ಷಸಿ. ಅದು ಇಂದು ಸೋಲುತ್ತಿದೆ. ಜೊತೆಗೆ ಸುತ್ತಲಿನ ವಾತಾವರಣವನ್ನು ತನ್ನೆಡೆಗೆ ಮಾತ್ರ ಕರೆದ್ದೊಯ್ಯುತ್ತಿದೆ. ಪವಿತ್ರ ಆರ್ಥಿಕತೆಯನ್ನು ಉಳಿಸಲು ಇದು ಸರಿಯಾದ ಸಮಯ.

ವಿಶ್ವದಾದ್ಯಂತ ಸರಕಾರಗಳು ಜನರ ತೆರಿಗೆ ಹಣದಿಂದ ಈ ರಾಕ್ಷಸನನ್ನು ಬದುಕಿಸಲು ಪ್ರಯತ್ನಿಸುತ್ತಿದ್ದಾರೆ. ಕೃಷಿ ಕ್ಷೇತ್ರ ತೀವ್ರ ಬಿಕ್ಕಟ್ಟಿನಲ್ಲಿರುವಾಗ, ನೇಕಾರರು, ಕುಶಲಕರ್ಮಿಗಳು ತಮ್ಮ ವೃತಿಯನ್ನು ತೊರೆಯುತ್ತಿರುವಾಗ, ಗ್ರಾಮೀಣ ಬಡವರು ಪಟ್ಟಣಗಳಿಗೆ ಜೀವ ಹಿಡಿದಿಡಲು ಗುಳೆಹೊರಡುತ್ತಿರುವಾಗ, ಸರಕಾರಗಳು ರಾಕ್ಷಸನನ್ನು ಉಳಿಸ ಹೊರಟಿವೆ, ಕಾರುಗಳ ಕಾರಖಾನೆಗಳು ಹಾಗೂ ದಿವಾಳಿಯಾದ ಬ್ಯಾಂಕುಗಳನ್ನು ಉಳಿಸ ಹೊರಟಿವೆ, ಹೌದು ದೈತ್ಯ ರಾಕ್ಷಸ ಕ್ಷೇತ್ರಗಳಿಗೆ ಉದಾರವಾಗಿ ರಿಯಾಯಿತಿಗಳನ್ನು ನೀಡುತ್ತಿದೆ.

ಇದಕ್ಕೂ ನಾಚಿಕೆಗೇಡಿನ ಕೆಲಸವೆಂದರೆ, ರಾಕ್ಷಸನನ್ನು ಉಳಿಸಲು ಪಾವಿತ್ಯ್ರತೆಯ ಅರ್ಥವನ್ನೇ ಬದಲುಮಾಡುತ್ತಿರುವುದು. ಹೌದು ಅವರು ಪುರೋಹಿತಶಾಹಿ, ರಾಕ್ಷಸ ಆರ್ಥಿಕತೆ ಹಾಗೂ ರಾಜಕೀಯ ವ್ಯವಸ್ಥೆಯನ್ನು ಒಟ್ಟಿಗೆ ಪಾವಿತ್ಯ್ರವೆಂದು ಮುಂದೊತ್ತುತ್ತಿವೆ. ಇದರ ಅರ್ಥ ಅವರು ಪ್ರತ್ಯೇಕತಾವಾದ, ಜಾತಿ ವ್ಯವಸ್ಥೆ, ಲಿಂಗ ತಾರತಮ್ಯವನ್ನು ಮುಂದೊತ್ತುತ್ತಿವೆ.

ಈ ಸತ್ಯಾಗ್ರಹವು ಜನರನ್ನು ಕೊಳ್ಳುಬಾಕರಾಗದಿರುವಂತೆ ನೈತಿಕ ಒತ್ತಡ ಹೇರಲಿದೆ. ಹಾಗೂ ನಾವು ಹೇಳುತ್ತಿರುವ ಪ್ರಕಾರ ಪವಿತ್ರ ಎಂದು ಕರೆಯಲ್ಪಡುವ ಪದಾರ್ಥಗಳನ್ನು ಬಳಸುವಂತೆ ಉತ್ತೇಜಿಸುತ್ತದೆ. ನಾವೆಲ್ಲ ಇಂದು ಪವಿತ್ರ ಆರ್ಥಿಕತೆಯನ್ನು ಬಲಪಡಿಸಲು, ಸಾರ್ವಜನಿಕ ಸಂಪನ್ಮೂಲಗಳ ಮೇಲೆ ಎಲ್ಲ ಸರಕಾರಗಳು ಹೂಡಿಕೆ ಮಾಡುವಂತೆ ನೈತಿಕ ಒತ್ತಡವನ್ನು ಹೇರಬೇಕಾಗಿದೆ.

ಪಾವಿತ್ರ್ಯತೆ ಎಂಬುದು ನಮ್ಮನ್ನು ಒಡೆಯಬೇಕಾಗಿಲ್ಲ

ಹೌದು, ನಮಗೆ ತಿಳಿದಿದೆ. ಉದಾಹರಣೆಗೆ, ನಾವು ಕೈಉತ್ಪನ್ನಗಳನ್ನು ಯಂತ್ರೋತ್ಪನ್ನದಿಂದ ಬೇರೆ ಮಾಡಬೇಕಿಲ್ಲ. ಪವಿತ್ರ ಆರ್ಥಿಕತೆ ಎನ್ನುವುದು ಆದೇಶವಲ್ಲ, ಅದು ಒಂದು ಅಳತೆಗೋಲು. ಕೈಉತ್ಪನ್ನಗಳು ಅದರ ಮೇಲ್‍ತುದಿಯಲಿದ್ದರೆ, ಅತ್ಯಂತ ಹೆಚ್ಚು ಜನರಿಗೆ ಉದ್ಯೋಗ ನೀಡುವ ಉತ್ಪನ್ನಗಳು ಅದನ್ನು ಹಿಂಬಾಲಿಸುತ್ತವೆ, ಮತ್ತು ಅವು ಪರಿಸರಕ್ಕೆ ಕಡಿಮೆ ಹಾನಿಕಾರಕವು ಆಗಿರುತ್ತವೆ.

ಹೆಚ್ಚು ಅರ್ಥಪೂರ್ಣವಾದದ್ದು ಪವಿತ್ರ ಆರ್ಥಿಕತೆ

ಜಿ.ಡಿ.ಪಿ ನಮ್ಮನ್ನು ಗಾಬರಿಗೊಳಿಸ ಬೇಕಿಲ್ಲ. ಪವಿತ್ರ ಆರ್ಥಿಕತೆ ಕಡಿಮೆ ಲಾಭದಾಯಕವಾಗಿರಬಹುದು, ಮಂದಗತಿಯಲ್ಲಿ ಉತ್ಪಾದಿಸಬಹುದು. ಆದರೆ ಅದರೊಂದಿಗೆ ಬದುಕುವುದು ಹೆಚ್ಚು ಅರ್ಥಪೂರ್ಣ.

ಬನ್ನಿ! ಪವಿತ್ರ ಆರ್ಥಿಕತೆಯನ್ನು ಉಳಿಸುವ ಈ ಸಂವಾದದಲ್ಲಿ ನಮ್ಮ ಜೊತೆಗೂಡಿ!

ಆಯೋಜಕರು

ಗ್ರಾಮ ಸೇವಾ ಸಂಘ

ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಸಹಯೋಗದೊಂದಿಗೆ

GramSevaSanghIndia@gmail.com | www.gramsevasangh.org | +91 9980043911