ಗ್ರಾಮ ಸೇವಾ ಸಂಘವು ಇಂದು, ಸೆಪ್ಟೆಂಬರ್ 15, 2019 ರಂದು ಪವಿತ್ರ ಆರ್ಥಿಕಥೆಯ ಮೇಲಿನ ಸಂವಾದದಲ್ಲಿ ಇದೇ ಅಕ್ಟೋಬರ್ 2 ರಂದು ಉಪವಾಸದ ಮುಖಾಂತರ ಪವಿತ್ರ ಆರ್ಥಿಕತೆಯನ್ನು ಉಳಿಸಲು ಸತ್ಯಾಗ್ರಹವನ್ನು ಚಾಲನೆಮಾಡುವ ನಿರ್ಧಾರವನ್ನು ಕೈಗೊಂಡಿತು.
ನಾವು ಪವಿತ್ರವೆಂದು ಪರಿಗಣಿಸಿರುವ ಎಲ್ಲಾ ಕ್ಷೇತ್ರಗಳ ನ್ಯಾಯಯುತ ಬೇಡಿಕೆಗಳನ್ನು ಸತ್ಯಾಗ್ರಹದ ಮೂಲಕ ಸರ್ಕಾರದ ಮುಂದೆ ಇಡಲಿದ್ದೇವೆ. ನಾವು ಎಲ್ಲಾ ಸಂಘ ಸಂಸ್ಥೆ, ರಾಜಕೀಯ ಪಕ್ಷಗಳು ಹಾಗೂ ಎಲ್ಲಾ ಸಾಮಾಜಿಕ ಹಾಗೂ ಧಾರ್ಮಿಕ ನಾಯಕರನ್ನು ಉಪವಾಸದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಿದ್ದೇವೆ. ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹವು ಗಾಂಧೀ ಭವನದ ಪಕ್ಕದಲ್ಲಿರುವ ‘ವಲ್ಲಭ ನಿಕೇತನದಲ್ಲಿ’ ನಡೆಯಲಿದ್ದು, ಜೊತೆಗೆ ದೇಶದ ಇತರೆಡೆಗಳಲ್ಲೂ ಅಂದು ಸತ್ಯಾಗ್ರಹ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೋರಾಟಗಾರ ಹಾಗೂ ಗ್ರಾಮ ಸೇವಾ ಸಂಘದ ಮಾರ್ಗದರ್ಶಕರಾದ ಪ್ರಸನ್ನ, “ಇಂದು ಆರ್ಥಿಕತೆಯ ಬಿಕ್ಕಟ್ಟು ದೊಡ್ಡದ್ದಾಗಿದೆ. ಇದು ಒಳ್ಳೆಯದು, ಏಕೆಂದರೆ, ಇದು ನಮಗೆ ಪವಿತ್ರ ಆರ್ಥಿಕತೆ ಕಡೆಗೆ ಬದಲಾಗಬೇಕೆಂಬ ಸತ್ಯವನ್ನು ಹೇಳುತ್ತಿದೆ. ಇಂದು ಪವಿತ್ರ ಆರ್ಥಿಕತೆಯ ಬಗ್ಗೆ ಮಾತನಾಡಬೇಕಿದೆ, ಇಂದು ಕಾರ್ಮಿಕನನ್ನು ಹಾಗೂ ಪರಿಸರವನ್ನು ಕಾಪಾಡುವ ಬಗ್ಗೆ ಮಾತನಾಡಬೇಕಿದೆ. ಇಂದು ಭಾರತ ಹಿಂದೆಂದಿಗೂ ನೋಡದಂತಹ ಶಾಂತಿಯುತ ಹೋರಾಟವನ್ನು ಮಾಡಬೇಕಿದೆ. ಗಾಂಧಿಯನ್ನು ನಮ್ಮ ಅಜ್ಞಾನದಿಂದ ಕೊಂದಿದ್ದೇವೆ, ಇಂದು ನಮ್ಮ ಕ್ರಿಯೆಯ ಮೂಲಕ ಗಾಂಧಿಯನ್ನು ಜೀವಂತಗೊಳಿಸಲಿದ್ದೇವೆ.” ಎಂದು ಹೇಳಿದರು.
ಗಾರ್ಮೆಂಟ್ಸ್ ಮತ್ತು ಟೆಕ್ಸಟೈಲ್ ನೌಕರರ ಸಂಘದ ಅಧ್ಯಕ್ಷೆ, ಪ್ರತಿಭಾ ಆರ್ ಮಾತನಾಡಿ, 3 ರಿಂದ 4 ಲಕ್ಷ ಮಹಿಳೆಯರು ರಾಜ್ಯದಲ್ಲಿ ಕಳೆದ 40 ವರ್ಷದಿಂದ ಅತ್ಯಂತ ಕಡಿಮೆ ವೇತನದಲ್ಲಿ ಬಳಲುತ್ತಿದ್ದಾರೆ ಗಾರ್ಮೆಂಟ್ಸ್ ಕ್ಷೇತ್ರದಲ್ಲಿ. “ಯಾವ ಸರ್ಕಾರವು ಇಲ್ಲಿಯವರೆಗೆ ನಮ್ಮ ವೇತನದ ಸಮಸ್ಯೆಯ ಕಡೆಗೆ ಗಮನಹರಿಸಿದ್ದೆ ಇಲ್ಲ, ಎಂದು ಹೇಳಿದರು. ಈಗ ಆರ್ಥಿಕ ಬಿಕ್ಕಟ್ಟಿನಲ್ಲಿ ನಮ್ಮ ಪರಿಸ್ಥಿತಿ ಮತ್ತಷ್ಟು ಬಿಗಡಾಸಿದ್ದು, ಈಗ ನಮ್ಮ ವೇತನ ಹೆಚ್ಚಿಸುವ ಹೋರಾಟ ಮತ್ತಷ್ಟು ಹಿಂಬದಿಗೆ ಬಿದ್ದಿದೆ. ನಾವು ಮಾತ್ರ ಹೆಚ್ಚುತ್ತಿರುವ ಜೀವನೋಪಾಯದ ಖರ್ಚಿನಲ್ಲಿ, ಮತ್ತಷ್ಟು ಹೀನಸ್ಥಿತಿಯಲ್ಲೇ ಬದುಕು ದೂಡಬೇಕಿದೆ. ನಮ್ಮನ್ನು ಈ ಬಿಕ್ಕಟ್ಟಿನಿಂದ ಮುಕ್ತಗೊಳಿಸುವರು ಯಾರು ಇಲ್ಲ.”
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಖಜಾಂಚಿ, ಮಲ್ಲೇಶ್ ಮಾತನಾಡಿ, ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತ ಬರುತ್ತಿರುವ ಎಲ್ಲಾ ಸರಕಾರಗಳು ಅವರ ಶ್ರಮಕ್ಕೆ ತಕ್ಕ ಕನಿಷ್ಟ ವೇತನವನ್ನು ಖಾತ್ರಿಪಡಿಸುವಲ್ಲಿ ಸೋತಿವೆ ಎಂದರು. ಕಷ್ಟಪಟ್ಟು ಗ್ರಾಮೀಣ ಬಡವರು ಈಗ ವಿಧ್ಯಾಭ್ಯಾಸ ಪಡೆದು ಕೆಲಸ ಹುಡುಕ ಹೊರಟರೆ, ಅತ್ತ ಓದಿಗೆ ತಕ್ಕ ಕೆಲಸವೂ ಇಲ್ಲ. ಇನ್ನೊಂದೆಡೆ ಉದ್ಯೋಗ ಖಾತ್ರಿ ಯೋಜನೆಯ ವೇತನವನ್ನು ಸರಕಾರಗಳು ಹಲವು ತಿಂಗಳಿನಿಂದ ಬಾಕಿ ಉಳಿಸಿಕೊಂಡಿವೆ, ಎಂದರು.
ಪವಿತ್ರ ಆರ್ಥಿಕತೆ ಎಂದರೇನು?
ಪವಿತ್ರ ಆರ್ಥಿಕತೆ ಎಂದರೆ ಅತ್ಯಂತ ಕಡಿಮೆ ಹಣದ ಹೂಡಿಕೆ ಹಾಗೂ ಪರಿಸಕ್ಕೆ ಅತ್ಯಂತ ಕಡಿಮೆ ಹಾನಿಯುಂಟು ಮಾಡುವ ಮೂಲಕ ಅತ್ಯಂತ ಹೆಚ್ಚು ಜನರಿಗೆ ದುಡಿಮೆಯ ಮಾರ್ಗ ತೋರಿಸುವ ಎಲ್ಲಾ ಉತ್ಪಾದನಾ ವ್ಯವಸ್ಥೆ. ಈ ಸತ್ಯಾಗ್ರಹ ಕೈಉತ್ಪನಗಳಪರ, ಗಾರ್ಮೆಂಟ್ಸ್ ನೌಕರರಪರ, ಅಂಗನವಾಡಿ ನೌಕರರಪರ, ಪೌರಕಾರ್ಮಿಕರಪರ, ಸಣ್ಣ ವ್ಯಾಪಾರ ಹಾಗೂ ಮಾರಾಟ, ಸಣ್ಣ ಉತ್ಪಾದನೆ ಹಾಗೂ ಸೇವಾ ಕ್ಷೇತ್ರದವರಪರ.
ಪವಿತ್ರ ಆರ್ಥಿಕತೆ ದೇಶದ ಜಿ.ಡಿ.ಪಿ ಗೆ ಶೇಕಡ 70 ರಷ್ಟು ಕೊಡುಗೆನೀಡುತ್ತಿದೆ. ಈಗ ಬೀಳುತ್ತಿರುವ ಆರ್ಥಿಕತೆಯನ್ನು ಪವಿತ್ರ ಆರ್ಥಿಕತೆಗಳನ್ನು ಬಲಪಡಿಸುವ ಮೂಲಕ ಧನಾತ್ಮಕವಾಗಿ ಮಾಡಬಹುದಾಗಿದೆ.
ಗ್ರಾಮ ಸೇವಾ ಸಂಘ ಪವಿತ್ರ ಆರ್ಥಿಕತೆಯನ್ನು ಉಳಿಸುವ ಹಾಗೂ ಪಟ್ಟಣ ಹಾಗೂ ಗ್ರಾಮದ ನಡುವಿನ ಕಂದರವನ್ನು ಬೆಸೆಯುವ ಸೇತುವೆಯ ಕಾರ್ಯದಲ್ಲಿ ತೊಡಗಿರುವ ಸಂಘಟನೆಯಾಗಿದೆ. ಈ ಹಿಂದೆ ಸಂಘಟನೆಯು ಕೈಮಗ್ಗ ನೇಕಾರರ ಬವಣೆಯನ್ನು ಮುನ್ನೆಲೆಗೆತರುವಲ್ಲಿ ಹಾಗೂ ಕೈಉತ್ಪನ್ನಗಳ ಮೇಲಿನ ಸರಕು ಹಾಗೂ ಸೇವಾ ತೆರಿಗೆಯನ್ನು ಶೂನ್ಯಗೊಳಿಸುವಂತೆ “ಕರನಿರಾಕರಣೆ ಸತ್ಯಾಗ್ರಹ”ದ ಮೂಲಕ ದೇಶದ ಗಮನವನ್ನು ಸೆಳೆದಿದೆ.
ಇಂದಿನ ಸಭೆಯ ಭಾವಚಿತ್ರಗಳನ್ನು ಲಗತ್ತಿಸಲಾಗಿದೆ: (ಎಡದಿಂದ ಬಲಕ್ಕೆ) : ಗೋಪಿ ಕೃಷ್ಣ, ವಿನ್ಯಾಸಕರು, ಪ್ರತಿಭಾ ಆರ್, ಅಧ್ಯಕ್ಷೆ, ಗಾರ್ಮೆಂಟ್ಸ್ ನೌಕರರ ಸಂಘ, ಚೊಕ್ಕಲಿಂಗಮ್, ಉಪಾಧ್ಯಕ್ಷರು, ಗ್ರಾಮ ಸೇವಾ ಸಂಘ, ಪ್ರಸನ್ನ, ರಂಗಕರ್ಮಿ, ಹೋರಾಟಗಾರರು, ಲೀಲಾವತಿ, ಉಪಾಧ್ಯಕ್ಷರು, ಎ.ಐ.ಸಿ.ಟಿ.ಯು (ಅಂಗನವಾಡಿ ನೌಕರರ ಸಂಘ), ವೆಂಕಟನಾಥನ್, ಆರ್.ಬಿ.ಅಯ್, ಮಾಜಿ ನೌಕರರು, ಮಲ್ಲೇಶ್, ಖಜಾಂಚಿ, ಗ್ರಾಕೂಸ್, ಎಸ್. ಬಾಬು, ಅಧ್ಯಕ್ಷರು, ಬೀದಿ ಬದಿ ವ್ಯಾಪಾರಿಗಳ ಸಂಘ
ಗ್ರಾಮ ಸೇವಾ ಸಂಘ (Gram Seva Sangh)
Address: Flat #102, Shesha Nivas, 1st Block, 1st Main,
Thyagarajanagar, Bengaluru-560028
Facebook.com/graamasevasangha | @gramasevasangha
Mobile: 9980043911 | www.gramsevasangh.org