ನಗರ ನೀರಿನ ದಾಹ
ಒಂದು ಸಮಾವೇಶ
ಜುಲೈ 14, ಬೆಳಗ್ಗೆ 11 – ಮಧ್ಯಾಹ್ನ 2, ಗಾಂಧಿಭವನ, ಬೆಂಗಳೂರು
ಯೋಚಿಸಿ. ಬೆಂಗಳೂರು ನಗರದ ನೀರಿನ ರಾಕ್ಷಸದಾಹವನ್ನು ಇಂಗಿಸುವುದು ಎಂದಾದರೂ ಸಾಧ್ಯವೇ? ಸಾಧುವೇ? ಅಥವಾ ರಾಕ್ಷಸ ನಗರಿಯೊಂದರ ನಿರ್ಮಾಣದಲ್ಲಿ ಭಾಗಿಯಾಗುವುದು ನಿಮ್ಮ ನಾಗರೀಕ ಕರ್ತವ್ಯವೇ? ಅಥವಾ ರಾಕ್ಷಸನಗರಿಯಿಂದಾಗಿ ನಿಜಕ್ಕೂ ಸಂತೋಷ ಸಿಕ್ಕುತ್ತಿದೆಯೆ? ಹಳ್ಳಿಗಳನ್ನು ಒಣಗಿಸಿ, ಗ್ರಾಮೀಣ ಜನರನ್ನು ನಗರಗಳತ್ತ ಗುಳೆಯೆಬ್ಬಿಸಿ ನಗರಗಳನ್ನು ಅನಗತ್ಯವಾಗಿ ಉಬ್ಬಿಸುತ್ತಿರುವ ಸರಕಾರಗಳ ಅವೈಜ್ಞಾನಿಕ ಕಾರ್ಯಕ್ರಮವನ್ನು ನೀವು ಬೆಂಬಲಿಸಬೇಕೆ? ಬೆಂಗಳೂರಿನ ಸಾಮಾನ್ಯ ನಾಗರೀಕರಿಗೆ ಕುಡಿಯುವ ನೀರಿನ ಬವಣೆ ಇದೆಯೆಂದು ಕಣ್ಣಿರು ಮಿಡಿಯುತ್ತ, ನಗರದ ಶ್ರೀಮಂತರು ಅವರ ಬಹುಮಹಡಿಕಟ್ಟಡಗಳು ಹಾಗೂ ಅವರ ಕೈಗಾರಿಕೆಗಳ ರಾಕ್ಷಸದಾಹವನ್ನು ಪೋಷಿಸುತ್ತಿರುವ ಸರಕಾರಗಳ ನೀತಿ ಖಂಡನೀಯವಲ್ಲವೆ?
ಇಷ್ಟಕ್ಕೂ ಬೆಂಗಳೂರು ಅದೃಷ್ಟವಂತ ನಗರ. ಈ ನಗರದ ತಲೆಯಮೇಲೆ ಪ್ರಕೃತಿಮಾತೆ, ವರ್ಷಂಪ್ರತಿ, 15 ಟಿ.ಎಂ.ಸಿ. ನೀರನ್ನು ಮಳೆಯರೂಪದಲ್ಲಿ ತಂದು ಸುರಿಯುತ್ತಿದ್ದಾಳೆ. ಇದನ್ನರಿತ ನಮ್ಮ ನಿಮ್ಮ ಹಿರೀಕರು ಮಳೆಯ ನೀರನ್ನು ಹಿಡಿದಿಡಲೆಂದು ನೂರಾರು ಕೆರೆಗಳನ್ನು ಕಟ್ಟಿಸಿದ್ದರು, ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಕಟ್ಟಿಸಿದ್ದÀರು. ಜೊತೆಗೆ ಉದ್ಯಾನವನಗಳನ್ನು ನಿರ್ಮಿಸಿದ್ದರು. ಮನೆ ಮನೆಯ ಹಿತ್ತಲಿನಲ್ಲಿ ಸಿಹಿ ನೀರ ಬಾವಿಗಳಿದ್ದವು ಇಲ್ಲಿ. ಜೊತೆಗೆ ರಾಜಧಾನಿಯಿತ್ತು, ಜೊತೆಗೆ ಕಾರ್ಖಾನೆಗಳಿದ್ದವು. ದೇಶದಲ್ಲಿಯೇ ಅತ್ಯಂತ ಹಸಿರಾದ ಅತ್ಯಂತ ನವಿರು ವಾತಾವರಣವುಳ್ಳ ಆಧುನಿಕ ನಗರವೆಂದು ಪ್ರಖ್ಯಾತವಾಗಿತ್ತು ಬೆಂಗಳೂರು.
ಬೆಂಗಳೂರನ್ನು ರಾಕ್ಷಸವಾಗಿಸುವ ಹುನ್ನಾರದಲ್ಲಿ ನಮ್ಮ ಸರಕಾರಗಳು ಕೆರೆಗಳನ್ನು ಮುಚ್ಚಿಸಿವೆ, ಮರಗಳನ್ನು ಕಡಿದಿವೆ. ಮಳೆಯ ನೀರಿನ ಜೊತೆಜೊತೆಗೆ ಕಾವೇರಿ, ಹೇಮಾವತಿ ನದಿಗಳ ನೀರನ್ನೂ ಸಹ ವಿಷವಾಗಿಸಿದೆ. ಸುತ್ತಲ ಕಣಿವೆಗಳಿಗೆ ವಿಷ ಹರಿಸಿದೆ ಬೆಂಗಳೂರು. ಈಗ ಶರಾವತಿ, ಕಾಳಿ, ಕೃಷ್ಣೆ ಹಾಗೂ ತುಂಗಭದ್ರೆಯರ ನೀರನ್ನು ಬೆಂಗಳೂರಿಗೆ ತರಲು ಹೊರಟ್ಟಿದ್ದಾರೆ! ಬನ್ನಿ ಬೆಂಗಳೂರಿನ ಬೆಳವಣಿಗೆಗೆ ಮಿತಿ ಹಾಕೋಣ. ರಾಜ್ಯದ ಮಹಾನ್ ಆಸ್ತಿಗಳಾದ ನದಿಗಳನ್ನು ಅವುಗಳ ಕಣಿವೆಗಳಲ್ಲಿಯೇ ಹರಿಯಲು ಬಿಡೋಣ, ಗ್ರಾಮೀಣ ಜನರು ಗ್ರಾಮಗಳಲ್ಲಿಯೇ ಉಳಿದು ಸಂತೋಷದಿಂದ ಬಾಳಬಲ್ಲಂತಹ ಕರ್ನಾಟಕ ಕಟ್ಟೋಣ.
ಆಯೋಜಕರು
ಗ್ರಾಮ ಸೇವಾ ಸಂಘ, ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ, ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ
ಮೋ: +91 9980043911 | ಇಮೇಲ್: gramsevasanghindia@gmail.com