ಪತ್ರಿಕಾ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕಾಗಿ ಪ್ರತಿಭಟನೆ

12 ನೇ ಮಾರ್ಚ್ 2019 ಸಂಜೆ 5:0 ಕ್ಕೆ

ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗಎಂ ಜಿ ರಸ್ತೆಬೆಂಗಳೂರು

ಸರಕಾರದ ಕಾರ್ಯವೈಖರಿ, ಯೋಜನೆಗಳು ಮತ್ತು ತಪ್ಪುಗಳನ್ನು ಚರ್ಚಿಸುವ ವ್ಯಕ್ತಿ, ಸಮುದಾಯ, ಮತ್ತು ಗುಂಪುಗಳ ಅಭಿವ್ಯಕ್ತಿ ಸ್ವಾತಂತ್ರ್ಯವು ಇಂದು ತೀವ್ರವಾದ ಆಕ್ರಮಣಕ್ಕೊಳಗಾಗಿದೆ.  ಈ ಸಂಧರ್ಭದಲ್ಲಿ ಗ್ರಾಮ ಸೇವಾ ಸಂಘವು, ಇತರ ಸಂಘಟನೆಗಳೊಂದಿಗೆ ಆಯೋಜಿಸಿರುವ ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಕೆಲವು ಗಣ್ಯರೆಂದರೆ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್ ಎಸ್ ದೊರೆಸ್ವಾಮಿ, ರಂಗಕರ್ಮಿ ಹಾಗೂ ಚಿತ್ರ ನಿರ್ದೇಶಕ ಎಮ್ ಎಸ್ ಸತ್ಯು,  ಲೇಖಕ ಬೋಳುವಾರು ಮೊಹಮ್ಮದ್ ಕುಂಞ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಚಿತ್ರ ನಿರ್ದೇಶಕ ಬಿ ಸುರೇಶ್,  ರಂಗಕರ್ಮಿ ಹಾಗೂ ಹೋರಾಟಗಾರ ಪ್ರಸನ್ನ ಕೆಲವರು.

ಹಿನ್ನೆಲೆ

ಭಾರತದ ಸ್ವಾತಂತ್ರ್ಯ ಸಮರದ ಸಂದರ್ಭದಲ್ಲಿ ಹೋರಾಟಗಾರರನ್ನು ನಿಗ್ರಹಿಸಲು ಬ್ರಿಟಿಷರು ಬಳಸುತ್ತಿದ್ದ “ಅಧಿಕೃತ ರಹಸ್ಯಗಳ ಕಾಯಿದೆ” ಯಂತಹ ದುಷ್ಟ ಕಾಯಿದೆಯನ್ನು ಇಂದು ಸರ್ಕಾರವು ಮಾಧ್ಯಮಗಳನ್ನು ತನ್ನ ಕಪಿ ಮುಷ್ಠಿಯಲ್ಲಿ ಇರಿಸುವ ಸಲುವಾಗಿ ಬಳಸುತ್ತಿದೆ.ತಮ್ಮ ದುಷ್ಟ ನಡತೆಯಿಂದ ಜನರ ಅಭಿವ್ಯಕ್ತಿ ಸ್ವಾತಂತ್ರವನ್ನು ಮೊಟಕುಗೊಳಿಸಿ, ಅವರ ಆಶೋತ್ತರಗಳು ಹಾಗೂ ಅಭಿಪ್ರಾಯಗಳನ್ನು ತಮಗೆ ಬೇಕಾದ ರೀತಿಯಾಗಿ ತಿರುಚುವ ಮೂಲಕ ಸಮಾಜದ ಪ್ರಮುಖ ಸಮಸ್ಯೆಗಳನ್ನು ಮೂಲೆಗುಂಪು ಮಾಡುವಲ್ಲಿ ಸರ್ಕಾರಗಳು ಮೇಲ್ಗೈ ಹೊಂದುತ್ತಿವೆ.

ಇಂತಹ ಸಂದರ್ಭದಲ್ಲಿ ನಾವೆಲ್ಲ ಒಂದಾಗಿ ನಮಗೆ ಮೌನ ಆಯ್ಕೆ ಅಲ್ಲ! ಎಂದು ಸಾರ್ವಜನಿಕವಾಗಿ ಹೇಳಲೇಬೇಕಾಗಿದೆ. ಭಾರತದ ನಾಗರೀಕರ ಮೂಲಭೂತ ಹಕ್ಕುಗಳ ಮೇಲಿನ ಸತತವಾಗಿ ನಡೆಯುತ್ತಿರುವ ಆಕ್ರಮಣ ಹಾಗೂ ಪತ್ರಿಕೆ, ವ್ಯಕ್ತಿಗಳು ಮತ್ತು ಸಮುದಾಯಗಳ ಅಭಿವ್ಯಕ್ತಿಸ್ವಾತಂತ್ರವನ್ನು ಕಸಿದುಕೊಳ್ಳುವ ಸರಕಾರದ ವಿರುಧ್ಧ ನಾವು ಪ್ರತಿಭಟಿಸಲೇಬೇಕಾಗಿದೆ.

ಗ್ರಾಮ ಸೇವಾ ಸಂಘ

Facebook.com/graamasevasangha | @gramasevasangha

Mobile: 9980043911 | www.gramsevasangh.org