“ಮದ್ಯವ್ಯಸನ ಒಂದು ಸಾಮಾಜಿಕ ಪಿಡುಗು” – ವಿಚಾರ ಸಂಕಿರಣದ ವರದಿ

ಗ್ರಾಮ ಸೇವಾ ಸಂಘ, ಮದ್ಯನಿಷೇಧ ಆಂದೋಲನ ಕರ್ನಾಟಕ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ  ಸಹಯೋಗದೊಂದಿಗೆ

23 ಫೆಬ್ರವರಿ 2019, ಶನಿವಾರ ಬೆಳಗ್ಗೆ 10: 30ಮಧ್ಯಾಹ್ನ 2:0 | ಕಸ್ತೂರಬಾ ಸಭಾಂಗಣ, ಗಾಂಧೀ ಭವನ, ಬೆಂಗಳೂರು

ಈಗಾಗಲೇ ಗ್ರಾಮೀಣ ಮಹಿಳೆಯರಿಂದ ಆರಂಭಗೊಂಡ ಮದ್ಯ ನಿಷೇಧ ಆಂದೋಲನದ ಹೋರಾಟಕ್ಕೆ  ಪಟ್ಟಣದ ಮಹಿಳೆಯರು ಕೈಜೋಡಿಸಿ, ಚಳುವಳಿಯನ್ನು ಇನಷ್ಟು ಬಲಗೊಳಿಸುವ ಪ್ರಯುಕ್ತ ಗ್ರಾಮ ಸೇವಾ ಸಂಘ, ಮದ್ಯ ನಿಷೇಧ ಆಂದೋಲನ ಕರ್ನಾಟಕ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವಿಚಾರ ಸಂಕಿರಣವನ್ನು ಗಾಂಧಿ ಭವನದಲ್ಲಿ ಹಮ್ಮಿಕೊಂಡಿತ್ತು.  ವಿಚಾರಸಂಕಿರಣದಲ್ಲಿ ಭಾಗವಹಿಸಿದ ಗಣ್ಯರು ಒಟ್ಟಾರೆಯಾಗಿ ಹೇಳಿದ್ದು, ಮದ್ಯಕ್ಕೆ ಆರ್ಥಿಕ ದೃಷ್ಟಿಕೋನವನ್ನು ಮೀರಿದ ಸಾಮಾಜಿಕ ಹಾಗೂ ಮಾನವೀಯ ಆಯಾಮಗಳಿವೆ.

The Social Tragedy of Alcohol Seminar Inaugural song by mamatha

 

ರಂಗಕರ್ಮಿ ಪ್ರಸನ್ನ ಪ್ರಸ್ಥಾವಿಕವಾಗಿ ಮಾತನಾಡಿ, ನಗರದ ಮಹಿಳೆಯರೂ ಗ್ರಾಮೀಣ ಮಹಿಳೆಯರು ಕೈಗೆತ್ತಿಕೊಂಡಿರುವ ಚಳುವಳಿಯಲ್ಲಿ ಪಾಲ್ಗೊoಡು, ಈ ಸಾಮಾಜಿಕ ದುರಂತವನ್ನು ತಪ್ಪಿಸಬೇಕಾಗಿದೆ.

The Social Tragedy of Alcohol Seminar Keynote speech by Prasanna

 

ರಾಣಿ ಸತೀಶ್

“ಮದ್ಯಪಾನ ಮಹಿಳೆಯರ ಬದುಕಿಗೆ ಮಾರಕವಾಗಿದೆ. ಅದು ಎಲ್ಲ ವರ್ಗದ ಹೆಣ್ಣು ಮಕ್ಕಳಿಗೆ ಇದರಿಂದ ತೊಂದರೆಯಾಗುತ್ತಿದೆ. ಆದರೆ ರಾಜಕಾರಣಿಗಳು ಕೇವಲ ಆದಾಯವನ್ನು ಮಾತ್ರ ನೋಡುತ್ತಾ ಇದ್ದೇವೆ, ಆದರೆ ಅದರ ದುಷ್ಪರಿಣಾಮಕ್ಕೆ ಎಷ್ಟು ವ್ಯಯ ಆಗುತ್ತಿದೆ ಅನುವುದನ್ನು ಯೋಚನೆಯು ಮಾಡುತ್ತಿಲ್ಲ. ಈ ಸಂದರ್ಭದಲ್ಲಿ ಯಶೋಧರ ದಾಸಪ್ಪ ಅವರನ್ನ ನೆನೆಯಬೇಕು. ಸಂಪುಟದಲ್ಲಿ ಮದ್ಯ ನಿಷೇಧಕ್ಕೆ ಒಪ್ಪಿಗೆ ಕೊಡಲಿಲ್ಲ ಎಂದು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ ಇಂದು ಸಂಘಟನೆಗಳು ಒಂದಾಗಿ ಮಾಡುತ್ತಿರುವ ಹೋರಾಟದಲ್ಲಿ ಸರ್ಕಾರವನ್ನು ನಡುಗಿಸುವ ಶಕ್ತಿ ಇದೆ”.

 

Rani Sateesh addressing at seminar The Social Tragedy of Alcohol

 

ಅರುಂಧತಿ ನಾಗ್

ನಾನು ಮೊನ್ನೆ ಆಂದೋಲನದ ಪಾದಯಾತ್ರೆ ಮಲ್ಲೇಶ್ವರಂ ಮೈದಾನಕ್ಕೆ ತಲುಪಿದಾಗ ಅಲ್ಲಿ ನೆರೆದ ಸಾವಿರಾರು ಮಹಿಳೆಯರ ಧೈರ್ಯ ಮತ್ತು ಆತ್ಮ ವಿಶ್ವಾಸವನ್ನು ನೋಡಿ ಕುಬ್ಜಳಾಗಿ ಹೋದೆ. ಕನಿಷ್ಟ ಹತ್ತು ಮಹಿಳೆಯರಿಗೆ ನನ್ನoಥ ಪಟ್ಟಣದ ಸ್ಥಿತಿವಂತ ಮಹಿಳೆಯರು ತಮ್ಮ ದೊಡ್ಡ ಮನೆಗಳಲ್ಲಿ ಆಶ್ರಯ ಕೊದುವಂತಹ ಯೋಚನೆಯನ್ನು ಮಾಡಲಿಲ್ಲ. ಹಿಂದಿನಂತೆ ರಾಜಕಾರಣಿಗಳು ನಮ್ಮ ಮಾದರಿಯಾಗಿ ಇಂದು ಉಳಿದಿಲ್ಲ, ಆದರೆ ಈರೀತಿಯ ಆಂದೋಲನಗಳೇ ನಮಗೆ ಮಾದರಿಗಳು.

Glimpse of Padayatra by Suhasini Kaulagi

 

ಡಾ. ಪ್ರತಿಮಾ ಮೂರ್ತಿ, ಮುಖ್ಯಸ್ಥರು, ಸೆಂಟರ್ ಫಾರ್ ಅಡಿಕ್ಷನ್ ಮೆಡಿಸಿನ್, ನಿಮ್ಹಾನ್ಸ್

“National survey of Substance Use” ಪ್ರಕಾರ ದೇಶದಲ್ಲಿ 10 ರಿಂದ 75 ವಯಸ್ಸಿನ 16 ಕೋಟಿ ಜನ ಮದ್ಯ ಪಾನ ಮಾಡುತ್ತಾರೆ.  2004 ರ ವರದಿಗೆ ಹೋಲಿಸಿದರೆ ಈಗ ಮದ್ಯಪಾನ ಮಾಡುವವರ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ. ತಂಬಾಕು ಮತ್ತು ಮದ್ಯ ಇವೆರಡೇ ಸರ್ಕಾರ ಅನುಮತಿನೀಡಿರುವ ಮಾದಕ ವಸ್ತುಗಳು. ತಂಬಾಕಿನ ಮೇಲೆ ನಿಯಂತ್ರಣ ವಿದೆ, ಆದರೆ ಮದ್ಯ ಪಾನ ನಿಯಂತ್ರಿಸುವ ಯಾವ ನೀತಿನಿಯಮಾವಳಿಗಳೂ ಇಲ್ಲ. ಮದ್ಯ ಪಾನದಿಂದ ಕೂಡ ಸುಮಾರು 60 ಖಾಯಿಲೆಗೆ ಗುರಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು. ನಮ್ಮ ವರದಿಯ ಪ್ರಕಾರ ಸರ್ಕಾರ ಆದಾಯಕ್ಕಿಂತ, ಇದರ ದುಷ್ಪರಿಣಾಮಕ್ಕೆ ವ್ಯಯಿಸುವ ಹಣ ಒಂದೂವರೆ ಪಟ್ಟಿಗೂ ಜಾಸ್ಥಿ.

ಡಾ. ವೀಣಾ  ಟೊಣಪಿ, ಕಾನೂನು ತಜ್ಞೆ, ಹುಬ್ಬಳ್ಳಿ    

“ಸಂವಿಧಾನದ ನಿರ್ದೇಶಕ ತತ್ವ ಹಾಗೂ ಮೂಲಭೂತ ಹಕ್ಕು ಹಾಗೂ ಕರ್ತವ್ಯ ಗಳು ಒಂದಕ್ಕೊಂದು ಪೂರಕ ಎನ್ನುವುದು ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಸ್ಥಾಪಿತವಾಗಿದೆ. ಪರಿಚ್ಛೇದ 47ರಪ್ರಕಾರ ಸಂವಿಧಾನ ಮದ್ಯ ನಿಷೇಧ ಮಾಡುವುದು ರಾಜ್ಯ ಸರ್ಕಾರಗಳ ಕರ್ತವ್ಯವೆಂಬ ನಿರ್ದೇಶನವನ್ನು ನಿರ್ಲಕ್ಷ್ಯ ಮಾಡುವ ಹಾಗಿಲ್ಲ”.

ಅಜಯ್ ಕುಮಾರ್ ಸಿಂಗ್

“ನಾನು ಸೇವೆಯಲಿರುವಾಗ ನೋಡಿದಂತೆ ಮದ್ಯ ಪಾನ ದಿಂದ ಹಲವಾರು ಕುಟುಂಬಗಳು ಅಕ್ಷರಶಃ ಬೀದಿ ಪಾಲಾಗಿದೆ. ಪೊಲೀಸರ ಇಲಾಖೆ ಸಿಬ್ಬಂದಿಗಳು ಸಂಬಳ ಬಂದ ತಕ್ಷಣ ಅದನ್ನು ಕುಡಿಯುವುದಕ್ಕೆ ಬಳಸುತ್ತಾರೆ. ಇವರ ವೇತನ ಹೆಂಡತಿಯರ ಕೈಸೇರಬೇಕೆಂದು ನಿರ್ಧರಿಸಿ ನೀತಿಯನ್ನು ರೂಪಿಸಿದೆವು. ನಮ್ಮ ಸರ್ಕಾರ ಮದ್ಯ ನಿಷೇಧದ ಬಗ್ಗೆ ಕನಿಷ್ಟ ಆಶ್ವಾಸನೆ ಯನ್ನಾದರೂ ಕೊಡಲಿ”.

ಬಿ ಆರ್ ಪಾಟೀಲ್

“ಕಳೆದ ಬಿಹಾರದ ಚುನಾವಣೆ ಸಮಯದಲ್ಲಿ ನಾನು ಕೆಲಸದ ನಿಮಿತ್ತ ಹೋಗಿದೆ. ಆ ಸಂದರ್ಭದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಹತ್ತಿರ ಮಾತನಾಡಿದಾಗ ಅವರು ಹೇಳಿದ್ದು ನಿತೀಶ್ ಕುಮಾರ್ ಗೆದ್ದೇ ಗೆಲ್ಲುತ್ತಾರೆ, ಕಾರಣ ವಿಷ್ಟೇ ಮದ್ಯ ನಿಷೇಧ ಮಾಡುತ್ತೆನೆಂದು ಮಹಿಳೆಯರಿಗೆ ವಾಗ್ದಾನ ಮಾಡಿದ್ದಾರೆ. ಧಾರ್ಮಿಕ ಮುಖಂಡರು ಕೂಡ ಸಹ ಮದ್ಯ ನಿರ್ಬಂಧದ ಬಗ್ಗೆ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ಕೇವಲ ಪರೋಕ್ಷವಾಗಿ ಮಾತ್ರ ಬೆಂಬಲಿಸುತ್ತಿದ್ದಾರೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಕುಡುಕರ ಪ್ರಮಾಣ ಹೆಚ್ಚಾಗುತ್ತಲೇ ಇದೆ.

TOI reports on recent AIIMS studies

ಮದ್ಯ ನಿಷೇಧ ಆಂದೋಲನದ ಮೊಕ್ಷಮ್ಮ, ಸ್ವರ್ಣ ಭಟ್ ಮತ್ತು ವಿರುಪಮ ಆಂದೋಲನ ಹುಟ್ಟಿಕೊಂಡ ಬಗ್ಗೆ, ಪಾದಯಾತ್ರೆಯ ಅನುಭವ ಮತ್ತು ಮುಂದಿನ ಕಾರ್ಯಯೋಜನೆಯ ಬಗ್ಗೆ ಮಾತನಾಡಿದರು.

ಭಾಗವಹಿಸಿದ ಗಣ್ಯರೆಲ್ಲ ತಾವು ಒಂದಲ್ಲ ಒಂದುರೀತಿಯಲ್ಲಿ ಆಂದೋಲನದ ಭಾಗವಾಗಿ ಕೈಜೋಡಿಸಿ, ಚಳುವಳಿಯನ್ನು ಬಳಗೊಳಿಸಲು ನಿರ್ಧರಿಸಿದರು.

ವಿಚಾರ ಸಂಕಿರಣದ ಭಾಷಣಗಳ ವೀಡಿಯೊಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Glimpse of Padayatra by Suhasini Kaulagi

ಗ್ರಾಮ ಸೇವಾ ಸಂಘ

ಮದ್ಯನಿಷೇಧ ಆಂದೋಲನ ಕರ್ನಾಟಕ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ

ಸಂಪರ್ಕಿಸಿ : 9980043911 or 9008484880 | GramSevaSanghIndia@gmail.com