Literary Meet for Tolerance

Dakshinayana and Gram Seva Sangh

2 September 2018, Sunday, 10 AM to 6 PM

Senate Hall, Central College Campus, Bengaluru

Friends,

Indian society is being fragmented. We are facing dangers seen rarely in history.

Humanity in religion, lifestyles, coexistence are getting destroyed. The march of mechanized civilization, economic upheavals, destruction of the village, elimination of livelihoods seems unstoppable. Although the true reasons for such crises are different, they are being transformed into religious issues. The human dimensions of religion are being ignored in the widespread propaganda to project religion in terms of either perverse exclusivism or historical retribution. As a result, intolerance and hatred are finding easy justification and the constitution is being systematically subverted.

Literature has always found its inner strength in times of a crisis through a dialogue with the community. Our responsibility therefore at this juncture is to initiate dialogue within our own communities to counter the current situation. We need to explore ways to do this together. In this background, Dakshinayana and Gram Seva Sangh have come together to host an Indian Literary Meet at the Senate Hall of Central College (now a part of the Central University of Bangalore). In the meet, writers in Kannada will be joined by many other language writers from across India.

The Meet will address two central ideas: pacification of all forms of religious extremism and rebuilding the village, while also celebrating the innate sense of goodness of all humans. We expect that the meet will provide a new direction to Kannada Literature as well as to Indian Literature at large.

We, the writers and artists, are committed to taking the responsibility of restoring tolerance in society. We shall each go to our backyards and dialogue with our communities.

We extend a warm personal invitation to you to be part of this Literary Meet for Tolerance.

Thank You

     Rajendra Chenni                                                             Prasanna

Dakshinayana                                                        Gram Seva Sangh

Literary Meet for Tolerance

2 September 2018, Sunday, 10 AM to 6 PM

Senate Hall, Central College Campus, Bengaluru

For more information and contact details, see below:

www.GramSevaSangh.org | gramsevasanghindia@gmail.com | Mobile : 9980043911

Twitter : gramasevasangha | FaceBook: GramSevaSanghIndia

About Dakshinayana

Dakshinayana is a movement of Indian writers, artists and motion picture directors under the guidance of Prof. Ganesh Devi, the renowned director and linguist. It is a platform for writers and artists of all languages who support democratic traditions and freedom of expression.

Dakshinayana is active in several states across India. A historical summit was organized by Dakshinayana last year as part of its central purpose of upholding freedom of expression and democracy. It has also been a part of the struggles against the murders of Prof. M.M. Kalburgi and Gowri Lankesh.

About Gram Seva Sangh

Gram Seva Sangh is an organization guided by Prasanna, the renowned thinker and architect of many cultural struggles of the people. It has been involved in movements for Gram Swarajya and on behalf of handmaking artisans. Gram Seva Sangh opposes all forms of extremism resulting from the machine-centric civilization of our times.

The recently established central university of Bengaluru is a partner in this program. Ganesh Devi, Rahmat Tarikere, G.N. Nagaraj, Prasanna, Rajendra Chenni, and many other writers and artists from across India will participate in this event.

You can watch the Literary meet videos at our below youtube links

Hey Rama yennona banni – song by Vasu Dixit

Historian Ramachandra Guha at Lit Meet for tolerance

Filmmaker, Writer, Director B Suresh at Lit meet for tolerance

Senior writer and poet Champa at Lit Meet for Tolerance

A Kabeer doha by Vasu Dixit

Poet, researcher and Ex Cop of Bengaluru Ajai Kumar Singh at Lit meet for tolerance

Writer columnist Vinay Okkunda at Lit Meet for tolerance

ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ

ದಕ್ಷಿಣಾಯಣ ಮತ್ತು ಗ್ರಾಮ ಸೇವಾ ಸಂಘ

2 ಸೆಪ್ಟೆಂಬರ್ 2018, ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 6 ವರೆಗೆ

ಸೆನೇಟ್ ಭವನ, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು

ಗೆಳೆಯರೇ,

ಭಾರತೀಯ ಸಮಾಜವು ಛಿದ್ರವಾಗುತ್ತಿದೆ. ಚರಿತ್ರೆಯಲ್ಲಿ ಅಪರೂಪಕ್ಕೆ ನೋಡಿದಂಥ ಅಪಾಯವು ನಮ್ಮೆದುರಿಗಿದೆ. ಮನುಷ್ಯಪರ ಧರ್ಮಗಳು, ಜೀವನ ಕ್ರಮಗಳು, ಸಹಬಾಳ್ವೆಯ ರೀತಿಗಳು ನಾಶವಾಗುತ್ತಿವೆ. ಯಂತ್ರ ನಾಗರೀಕತೆ, ಆರ್ಥಿಕ ಏರುಪೇರುಗಳು, ಗ್ರಾಮನಾಶ, ಕಸುಬುನಾಶ ಅವ್ಯಾಹತವಾಗಿ ನಡೆದಿವೆ. ಬಿಕ್ಕಟ್ಟುಗಳ ನಿಜ ಸ್ವರೂಪ ಬೇರೆಯೇ ಆದರೂ ಅವುಗಳನ್ನು ಧಾರ್ಮಿಕ ಸಂಗತಿಗಳನ್ನಾಗಿ ಪರಿವರ್ತಿಸಲಾಗುತ್ತದೆ. ಧರ್ಮಗಳ ಮಾನವೀಯ ಅಂಶಗಳನ್ನು ಬದಿಗೊತ್ತಿರುವ ಈ ಆಕ್ರಾಮಕ ವಿಕೃತಿಯನ್ನು ಧಾರ್ಮಿಕತೆಯೆಂದು ಪ್ರಚಾರ ಮಾಡಲಾಗುತ್ತಿದೆ. ಪರಿಣಾಮವಾಗಿ ಅಸಹಿಷ್ಣುತೆ, ದ್ವೇಷ ಪ್ರತಿಪಾದನೆಯಾಗುತ್ತಿವೆ. ಸಂವಿಧಾನವನ್ನು ಬುಡಮೇಲು ಮಾಡಲಾಗುತ್ತಿದೆ.

ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಸಾಹಿತ್ಯವು ತನ್ನ ಅಂತಃಶಕ್ತಿಯನ್ನು ಕಂಡುಕೊಳ್ಳುತ್ತದೆ ಹಾಗೂ ಸಮುದಾಯಗಳ ಒಡನೆ ಸಂಭಾಷಣೆಯನ್ನು ಆರಂಭಿಸುತ್ತದೆ. ಈಗ ನಮ್ಮೆದುರಿಗೆ ಇರುವ ಜವಾಬ್ದಾರಿಯೆಂದರೆ ನಮ್ಮ ನಮ್ಮ ಸಮುದಾಯಗಳೊಂದಿಗೆ ಮಾತುಕತೆಗೆ ತೊಡಗಬೇಕಾದ ಅಗತ್ಯವಿದೆ. ನಾವೆಲ್ಲ ಸೇರಿ ಹೊಸ ದಾರಿಗಳನ್ನು ಹುಡುಕಬೇಕಾಗಿದೆ. ಈ ಹಿನ್ನೆಲೆಯಲ್ಲಿ 2 ಸೆಪ್ಟೆಂಬರ್ 2018ರ ಭಾನುವಾರದಂದು ಭಾರತೀಯ ಸಾಹಿತ್ಯ ಸಮ್ಮೇಳವನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೇಟ್ ಭವನದಲ್ಲಿ (ಅದು ಈಗ ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯದ ಭಾಗವಾಗಿದೆ) ಏರ್ಪಡಿಸಲು ದಕ್ಷಿಣಾಯಣ ಹಾಗೂ ಗ್ರಾಮ ಸೇವಾ ಸಂಘಗಳು ಜೊತೆಗೂಡುತ್ತಿವೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಬರಹಗಾರರ ಜೊತೆಗೆ ಅನೇಕ ರಾಜ್ಯಗಳ ವಿವಿಧ ಭಾಷೆಯ ಬರಹಗಾರರು ಕೂಡ ದನಿಗೂಡಿಸಲಿದ್ದಾರೆ. ಎಲ್ಲ ಬಗೆಯ ಧಾರ್ಮಿಕ ಉಗ್ರವಾದವನ್ನು ಶಮನಗೊಳಿಸುವುದು ಮತ್ತು ಗ್ರಾಮಗಳನ್ನು ಕಟ್ಟುವುದು, ಇವೇ ಈ ಸಾಹಿತ್ಯ ಸಮ್ಮೇಳನದ ಎರಡು ಪ್ರಧಾನ ಆಶಯಗಳಾಗಿವೆ. ಎಲ್ಲ ಮನುಷ್ಯರೊಳಗೆ ತುಡಿಯುವ ಅಂತಃಕರಣವನ್ನು ಸಂಭ್ರಮಿಸುವುದೂ ಕೂಡ ಸಮ್ಮೇಳನದ ಉದ್ದೇಶವಾಗಿದೆ. ಈ ಸಮ್ಮೇಳನವು ಕನ್ನಡ ಸಾಹಿತ್ಯಕ್ಕೆ ಹಾಗೂ ಭಾರತೀಯ ಸಾಹಿತ್ಯಕ್ಕೆ ಒಂದು ಹೊಸ ತಿರುವನ್ನು ಕೊಡಲಿದೆಯೆಂದು ನಿರೀಕ್ಷಿಸುತ್ತಿದ್ದೇವೆ.

ನಾವು ಲೇಖಕರು, ಕಲಾವಿದರು, ಸಹಿಷ್ಣುತೆಯ ಸಾಮಾಜಿಕ ಜವಾಬ್ದಾರಿಯನ್ನು ಹೊರಲಿಕ್ಕೆ ಸಿದ್ಧರಾಗಿದ್ದೇವೆ. ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ಹಿತ್ತಲಿಗೆ ಹೋಗಿ ನಮ್ಮ ಸಮುದಾಯದೊಂದಿಗೆ ಮಾತನಾಡುತ್ತೇವೆ.

ದಕ್ಷಿಣಾಯಣ

ದಕ್ಷಿಣಾಯಣವು ಪ್ರಸಿದ್ದ ವಿಮರ್ಶಕ ಹಾಗೂ ಭಾಷಾತಜ್ಞರಾದ ಪ್ರೊ. ಗಣೇಶ್ ದೇವಿಯವರ ಮಾರ್ಗದರ್ಶನದಲ್ಲಿ ಜೊತೆಗೂಡಿದ ಭಾರತೀಯ ಬರಹಗಾರರ, ಕಲಾವಿದರ, ಚಲನಚಿತ್ರ ನಿರ್ದೇಶಕರ ಚಳುವಳಿಯಾಗಿದೆ. ಇದು ಪ್ರಜಾಪ್ರಭುತ್ವವಾದಿ, ಅಭಿವ್ಯಕ್ತಿ ಸ್ವಾತಂತ್ರ್ಯ ಪರವಾದ ಎಲ್ಲಾ ಭಾಷೆಗಳ ಬರಹಗಾರರು, ಕಲಾವಿದರಿಗೆ ಒಂದು ವೇದಿಕೆಯಾಗಿದೆ. ಭಾರತದ ಅನೇಕ ರಾಜ್ಯಗಳಲ್ಲಿ ದಕ್ಷಿಣಾಯಣವು ಅತ್ಯಂತ ಕ್ರಿಯಾಶೀಲವಾಗಿದೆ ಇದರ ಕರ್ನಾಟಕದ ಶಾಖೆಯು ಕಳೆದ ವರ್ಷ ಶಿವಮೊಗ್ಗದಲ್ಲಿ ಚಾರಿತ್ರಿಕವಾದ ಸಮ್ಮೇಳನವನ್ನು ನಡೆಸಿತ್ತು. ಅಲ್ಲದೆ ಹತ್ಯೆಗಳಿಗೆ ಬಲಿಯಾದ ಪ್ರೊ.ಎಂ.ಎಂ. ಕಲುಬುರ್ಗಿ ಮತ್ತು ಗೌರಿ ಲಂಕೇಶರ ಪರವಾದ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ.

ಗ್ರಾಮ ಸೇವಾ ಸಂಘ

ಗ್ರಾಮ ಸೇವಾ ಸಂಘವು ಚಿಂತಕರು, ಸಾಂಸ್ಕೃತಿಕ ಚಳುವಳಿಗಳನ್ನು ಹುಟ್ಟುಹಾಕಿದ ಶ್ರೀ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಕ್ರಿಯಾಶೀಲವಾಗಿರುವ ಸಂಘಟನೆಯಾಗಿದೆ. ಗ್ರಾಮಸ್ವರಾಜ್ಯ ಮತ್ತು ಕೈಉತ್ಪನ್ನಗಳನ್ನು ತಯಾರಿಸುವ ಶ್ರಮಜೀವಿಗಳ ಪರವಾಗಿ ಜನಾಂದೋಲನವನ್ನು ನಡೆಸುತ್ತಲಿದೆ. ಯಂತ್ರನಾಗರಿಕತೆ ಹಾಗೂ ಅದರ ಫಲವಾಗಿ ಹುಟ್ಟುಕೊಂಡಿರುವ ಎಲ್ಲ ಬಗೆಯ ಉಗ್ರವಾದವನ್ನು ಅದು ವಿರೋಧಿಸುತ್ತದೆ.

ಬೆಂಗಳೂರಿನಲ್ಲಿ ನೂತನವಾಗಿ ಸ್ಥಾಪಿತವಾದ ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯವು ತನ್ನ ಸಹಯೋಗವನ್ನು ಈ ಕಾರ್ಯಕ್ರಮಕ್ಕೆ ನೀಡುತ್ತಿದೆ.

ಗಣೇಶ್ ದೇವಿ, ರಹಮತ್ ತರೀಕೆರೆ, ಜಿ. ಎನ್ ನಾಗರಾಜ್, ಪ್ರಸನ್ನ, ರಾಜೇಂದ್ರ ಚೆನ್ನಿ, ಹಾಗೂ ಇತರ ಹೆಸರಾಂತ ಸಾಹಿತಿಗಳು ಭಾರತದಾದ್ಯಂತದಿಂದ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನದಲ್ಲಿ ನೀವು ನಮ್ಮ ಜೊತೆಗೆ ಬನ್ನಿ ಎಂದು ವೈಯಕ್ತಿಕವಾಗಿ ತಮ್ಮನ್ನು ಪ್ರಿತಿಯಿಂದ ಆಹ್ವಾನಿಸುತ್ತಿದ್ದೇವೆ.

ಇಂತಿ

ರಾಜೇಂದ್ರ ಚೆನ್ನಿ                                                                                             ಪ್ರಸನ್ನ

 ದಕ್ಷಿಣಾಯಣ                                                                                      ಗ್ರಾಮ ಸೇವಾ ಸಂಘ

ಸ್ವಾಗತ ಸಮಿತಿ

ಅಧ್ಯಕ್ಷರು: ಪ್ರೊ. ಎಸ್. ಜಾಫೆಟ್, ಕುಲಪತಿಗಳು, ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯ

ಸದಸ್ಯರು: ಡಿ. ಕೆ. ಚೌಟ, ಡಾ. ವಿಜಯಮ್ಮ, ಎಂ. ಎಸ್, ಸತ್ಯು, ಡಾ. ಅಜಯ್ ಕುಮಾರ್ ಸಿಂಗ್, ಎಂ. ಡಿ. ಒಕ್ಕುಂದ

ಕೆ. ವಿ. ನಾಗರಾಜ್ ರ್ಮೂತಿ, ಶಶಿಧರ್ ಅಡಪ, ಡಾ. ಷಾಕಿರಾ ಖಾನಂ, ಪ್ರೊ., ಜಿ. ಬಿ.ಶಿವರಾಜ್, ಎಂ. ಸಿ. ನರೇಂದ್ರ

ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ

2 ಸೆಪ್ಟೆಂಬರ್ 2018, ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 6 ವರೆಗೆ

ಸೆನೇಟ್ ಭವನ, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು

ದಕ್ಷಿಣಾಯಣ ಮತ್ತು ಗ್ರಾಮ ಸೇವಾ ಸಂಘ

www.GramSevaSangh.org | gramsevasanghindia@gmail.com | Mobile : 9980043911

Twitter : gramasevasangha | FaceBook: GramSevaSanghIndia